ಬೆಂಗಳೂರು: ದೇಶದ ಏಕತೆ, ಸಮಗ್ರತೆ ಹಾಳು ಮಾಡುವ ಮತ್ತು ಜೀವ ಹಾನಿ ಉಂಟು ಮಾಡುವ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಎಸ್‌ಡಿಪಿಐ ಕಚೇರಿಗಳಿಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ದಾಳಿ ನಡೆಸಿದೆ ಎಂದು ರಾಜ್ಯದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಬಾಂಬ್ ತಯಾರಿ
ಶಿವಮೊಗ್ಗದಲ್ಲಿ ಕಾರ್ಯಾಚರಿಸುತ್ತಿದ್ದ ಉಗ್ರ ಜಾಲವನ್ನು ಬೇಧಿಸುವ ಮೂಲಕ ಪೊಲೀಸರು ಒಳ್ಳೆಯ ಕೆಲಸ ಮಾಡಿದ್ದಾರೆ. ಶಿಮಮೊಗ್ಗದಲ್ಲಿ ಸೆರೆ ಸಿಕ್ಕಿದ ಶಂಕಿತ ಉಗ್ರರು ಬಾಂಬ್ ತಯಾರಿ ಮಾಡಿದ್ದು ಮಾತ್ರವಲ್ಲ ರಿಹರ್ಸಲ್ ಕೂಡಾ ಮಾಡಿದ್ದಾರೆ. ಇವರ ಬಂಧನದಿಂದ ದೊಡ್ಡ ಮಟ್ಟದ ಜೀವ ಹಾನಿಯನ್ನು ತಡೆಯಲಾಗಿದೆ ಎಂದು ಹೇಳಿದರು.
ದೇಶದ ಹಿತದೃಷ್ಟಿಯಿಂದ ಕಾರ್ಯಾಚರಣೆ
ಪೊಲೀಸರು ಕೆಲಸ ಮಾಡುವಾಗ ಜಾತಿ ಧರ್ಮ ನೋಡಿ ಕೆಲಸ ಮಾಡುವುದಿಲ್ಲ. ತಪ್ಪಿತಸ್ಥರು ಅಲ್ಪಸಂಖ್ಯಾತರಾ ಅಲ್ವಾ ಅಂತ ಪೊಲೀಸರು ನೋಡಿ ಕೆಲಸ ಮಾಡೋದಕ್ಕೆ ಆಗುವುದಿಲ್ಲ ಎಂದು ಹೇಳಿದ ಅವರು, ಅವರು ದೇಶದ ದೃಷ್ಟಿಯಿಂದ ಯೋಚನೆ ಮಾಡುತ್ತಾರೆ ಎಂದರು.
ಕಾಂಗ್ರೆಸ್ ಮೇಲೆ ವಾಗ್ದಾಳಿ
ʻʻಟೆರರಿಸ್ಟ್‌ಗಳನ್ನು ಹುಟ್ಟುಹಾಕಿದ್ದೇ ಕಾಂಗ್ರೆಸ್. ಟೆರರಿಸ್ಟ್‌ಗಳನ್ನು ತಪ್ಪಿಸಿಕೊಳ್ಳಲು ಅವಕಾಶ ಕೊಟ್ಟಿದ್ದೇ ಕಾಂಗ್ರೆಸ್ʼʼ ಎಂದ ಅವರು, ಕೇವಲ ಸಂಘಟನೆಗಳನ್ನು ನಿಷೇಧಿಸಿದರೆ ಆಗುವುದಿಲ್ಲ. ವ್ಯಕ್ತಿಗಳ ರಾಕ್ಷಸ ಮನೋಭಾವ ಬದಲಾಗೋದಿಲ್ಲʼʼ ಎಂದು ಹೇಳಿದರು.
NIA Raid | ರಾಜ್ಯದ 2 PFI ಕಚೇರಿ, ಹಲವು ನಾಯಕರ ಮನೆಗಳಿಗೆ ಏಕಕಾಲದಲ್ಲಿ ದಾಳಿ, Go back ಪ್ರತಿಭಟನೆ