Site icon Vistara News

NICE Road: ನೈಸ್‌ ರೋಡ್‌ನಲ್ಲಿ ಓಡಾಡ್ತೀರಾ?; ಜುಲೈ 1ರಿಂದ ದುಬಾರಿಯಾಗಲಿದೆ ಟೋಲ್‌ ದರ

NICE Road

ಬೆಂಗಳೂರು: ಒಂದು ಕಡೆ ಸರ್ಕಾರ ಹಲವು ಭಾಗ್ಯಗಳ ಮೂಲಕ ಜನರ ಹೊರೆಯನ್ನು ಇಳಿಸುತ್ತಿದ್ದೇನೆ ಎಂದು ಹೇಳುತ್ತಿದೆಯಾದರೂ ಅದರ ನಡುವೆಯೇ ದರ ಏರಿಕೆಯ ಬರೆ ಬಿದ್ದಿದೆ. ಅತ್ತ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇಗೆ (Bengaluru- Mysore Expressway) ಶ್ರೀರಂಗಪಟ್ಟಣದಲ್ಲಿ ಹೊಸ ಟೋಲ್‌ (Srirangapatna toll) ಆರಂಭವಾಗುತ್ತಿದ್ದರೆ ಇತ್ತ ಬೆಂಗಳೂರಿನ ನೈಸ್‌ ರೋಡ್‌ (NICE Road) ಸಂಚಾರಕ್ಕೆ ಟೋಲ್‌ ಹೆಚ್ಚಳದ ಬರೆ ಬೀಳಲಿದೆ. ಜುಲೈ 1ರಿಂದ ಅನ್ವಯವಾಗುವಂತೆ ನೈಸ್‌ ಟೋಲ್‌ ದರ ಶೇ. 13ರಷ್ಟು ಹೆಚ್ಚಳವಾಗಲಿದೆ.

ರಾಜ್ಯ ಸರ್ಕಾರ ಮತ್ತು ನಂದಿ ಎಕಾನಮಿಕ್‌ ಕಾರಿಡಾರ್‌ ಎಂಟರ್‌ಪ್ರೈಸಸ್‌ ಲಿಮಿಟೆಡ್‌ ನಡುವೆ ನಡೆದ 2000ದಲ್ಲಿ ನಡೆದ ಒಪ್ಪಂದದ ಪ್ರಕಾರ ಈ ಹೆಚ್ಚಳ ನಡೆದಿದೆ. ಈ ಹಿಂದೆ 2022ರ ಜೂನ್‌ನಲ್ಲಿ ಟೋಲ್‌ ದರವನ್ನು ಶೇ 17ರಷ್ಟು ಹೆಚ್ಚಿಸಲಾಗಿತ್ತು.

ಹೆಸರಿಗೆ ಇದು ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಪ್ರಾಜೆಕ್ಟ್‌ ಆಗಿದ್ದರೂ ಅದು ಸುತ್ತುವರಿದಿರುವುದು ಬೆಂಗಳೂರನ್ನು ಮಾತ್ರ. ನೈಸ್ ರಸ್ತೆಯು ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನಿಂದ ನಿರ್ಮಿಸಲ್ಪಟ್ಟ ಮತ್ತು ನಿರ್ವಹಿಸಲ್ಪಡುವ ಖಾಸಗಿ ಎಕ್ಸ್‌ಪ್ರೆಸ್‌ ವೇ ಆಗಿದೆ. ಆರು ಪಥಗಳ ಖಾಸಗಿ ಎಕ್ಸ್‌ಪ್ರೆಸ್‌ ವೇ ಬೆಂಗಳೂರಿನ ವಿವಿಧ ಭಾಗಗಳನ್ನು ಸಂಪರ್ಕಿಸುತ್ತದೆ. ಏಳು ರಸ್ತೆಗಳ ಒಟ್ಟಾರೆ ಉದ್ದ 50 ಕಿಲೋಮೀಟರ್‌ ಇದೆ.

ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಕ್ಲೋವರ್ ಲೀಫ್ ಜಂಕ್ಷನ್, ಮೈಸೂರು ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆ ಮತ್ತು ಲಿಂಕ್ ರಸ್ತೆ ಮಾರ್ಗಗಳಲ್ಲಿ ನೈಸ್ ರಸ್ತೆಯನ್ನು ಆಗಾಗ್ಗೆ ಬಳಸುವ ಪ್ರಯಾಣಿಕರು ಶನಿವಾರದಿಂದ ಹೆಚ್ಚುವರಿ ದರ ತೆರಬೇಕಾಗುತ್ತದೆ.

NICE Road toll New charges

ಯಾವುದಕ್ಕೆ ಎಷ್ಟು ಹೆಚ್ಚಳವಾಗಿದೆ?

ಕಾರುಗಳು: 5 ರೂ.ನಿಂದ 10 ರೂ.
ಬಸ್‌: 20 ರೂ.
ಟ್ರಕ್‌: 5 ರೂ.ನಿಂದ 15 ರೂ.
ಲಘು ವಾಣಿಜ್ಯ ವಾಹನ (LMV): 5 ರಿಂದ 10 ರೂ.
ದ್ವಿಚಕ್ರ ವಾಹನಗಳು: 2 ರೂ.ನಿಂದ 5 ರೂ.

ಇದನ್ನೂ ಓದಿ: Bangalore Mysore Expressway: ನಾಳೆಯಿಂದ ಮತ್ತೊಂದು ಕಡೆ ವಸೂಲಿ ಆರಂಭ, ಮಂಡ್ಯ ಜನತೆಗೆ ಟೋಲ್‌ ಬರೆ! ದರ ಹೀಗಿದೆ

ಯಾವ ಮಾರ್ಗದಲ್ಲಿ ಯಾವುದಕ್ಕೆ ಎಷ್ಟು?

  1. ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆಗೆ (8.74 ಕಿ.ಮೀ.): ಕಾರಿನಲ್ಲಿ 50 ರೂ, ಬಸ್ಸು 145 ರೂ., ಟ್ರಕ್ಕು 100 ರೂ., ಲಘು ವಾಣಿಜ್ಯ ವಾಹನ 55 ರೂ., ದೊಡ್ಡ ವಾಣಿಜ್ಯ ವಾಹನಗಳಿಗೆ 105 ರೂ. ಮತ್ತು ದ್ವಿಚಕ್ರ ವಾಹನಗಳಿಗೆ 25 ರೂ.
  2. ಬನ್ನೇರುಘಟ್ಟ ರಸ್ತೆಯಿಂದ ಕನಕಪುರ ರಸ್ತೆಗೆ (6.79 ಕಿ.ಮೀ.): ಕಾರಿನಲ್ಲಿ 40 ರೂ, ಬಸ್ಸು 115 ರೂ., ಟ್ರಕ್ಕು 75 ರೂ., ಲಘು ವಾಣಿಜ್ಯ ವಾಹನ 40 ರೂ., ದೊಡ್ಡ ವಾಣಿಜ್ಯ ವಾಹನಗಳಿಗೆ 80 ರೂ. ಮತ್ತು ದ್ವಿಚಕ್ರ ವಾಹನಗಳಿಗೆ 15 ರೂ.
  3. ಕನಕಪುರ ರಸ್ತೆಯಿಂದ ಕ್ಲೋವರ್‌ ಲೀಫ್‌ ಜಂಕ್ಷನ್‌ (4.36 ಕಿ.ಮೀ): ಕಾರಿನಲ್ಲಿ 30 ರೂ, ಬಸ್ಸು 75 ರೂ., ಟ್ರಕ್ಕು 45 ರೂ., ಲಘು ವಾಣಿಜ್ಯ ವಾಹನ 30 ರೂ., ದೊಡ್ಡ ವಾಣಿಜ್ಯ ವಾಹನಗಳಿಗೆ 45 ರೂ. ಮತ್ತು ದ್ವಿಚಕ್ರ ವಾಹನಗಳಿಗೆ 10 ರೂ.
  4. ಕ್ಲೋವರ್‌ ಲೀಫ್‌ ಜಂಕ್ಷನ್‌ನಿಂದ ಮೈಸೂರು ರಸ್ತೆಗೆ (3.88 ಕಿ.ಮೀ.): ಕಾರಿನಲ್ಲಿ 25 ರೂ, ಬಸ್ಸು 65 ರೂ., ಟ್ರಕ್ಕು 40 ರೂ., ಲಘು ವಾಣಿಜ್ಯ ವಾಹನ 30 ರೂ., ದೊಡ್ಡ ವಾಣಿಜ್ಯ ವಾಹನಗಳಿಗೆ 45 ರೂ. ಮತ್ತು ದ್ವಿಚಕ್ರ ವಾಹನಗಳಿಗೆ 10 ರೂ.
  5. ಮೈಸೂರು ರಸ್ತೆಯಿಂದ ಮಾಗಡಿ ರಸ್ತೆಗೆ (9.55 ಕಿ.ಮೀ.): ಕಾರಿನಲ್ಲಿ 55 ರೂ, ಬಸ್ಸು 155 ರೂ., ಟ್ರಕ್ಕು 105 ರೂ., ಲಘು ವಾಣಿಜ್ಯ ವಾಹನ 65 ರೂ., ದೊಡ್ಡ ವಾಣಿಜ್ಯ ವಾಹನಗಳಿಗೆ 110 ರೂ. ಮತ್ತು ದ್ವಿಚಕ್ರ ವಾಹನಗಳಿಗೆ 25 ರೂ.
  6. ಮಾಗಡಿ ರಸ್ತೆಯಿಂದ ತುಮಕೂರು ರಸ್ತೆಗೆ (7.84 ಕಿ.ಮೀ.): ಕಾರಿನಲ್ಲಿ 45 ರೂ, ಬಸ್ಸು 120 ರೂ., ಟ್ರಕ್ಕು 80 ರೂ., ಲಘು ವಾಣಿಜ್ಯ ವಾಹನ 45 ರೂ., ದೊಡ್ಡ ವಾಣಿಜ್ಯ ವಾಹನಗಳಿಗೆ 85 ರೂ. ಮತ್ತು ದ್ವಿಚಕ್ರ ವಾಹನಗಳಿಗೆ 15 ರೂ.
  7. ಲಿಂಕ್‌ ರಸ್ತೆ (8.10 ಕಿ.ಮೀ.) ಕಾರಿನಲ್ಲಿ 80 ರೂ, ಬಸ್ಸು 150 ರೂ., ಟ್ರಕ್ಕು 80 ರೂ., ಲಘು ವಾಣಿಜ್ಯ ವಾಹನ 45 ರೂ., ದೊಡ್ಡ ವಾಣಿಜ್ಯ ವಾಹನಗಳಿಗೆ 85 ರೂ. ಮತ್ತು ದ್ವಿಚಕ್ರ ವಾಹನಗಳಿಗೆ 15 ರೂ.
NICE Road toll New charges
Exit mobile version