Site icon Vistara News

Nisha Yogeshwar : ಡಿ.ಕೆ ಶಿವಕುಮಾರ್‌ ಭೇಟಿಯಾದ ನಿಶಾ ಯೋಗೇಶ್ವರ್‌; ಏನಿದು ರಾಜಕೀಯ ಕಾರ್ಯತಂತ್ರ?

Nisha Yogeshwar

ಬೆಂಗಳೂರು: ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ (CP Yogeshwar) ಅವರ ಪುತ್ರಿ ನಿಶಾ ಯೋಗೇಶ್ವರ್‌ (Nisha Yogeshwar) ಅವರು ಮಂಗಳವಾರ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ಅವರನ್ನು ಭೇಟಿಯಾದರು. ಡಿ.ಕೆ. ಶಿವಕುಮಾರ್‌ ಅವರ ಕೆ.ಕೆ ಗೆಸ್ಟ್‌ ಹೌಸ್‌ಗೆ ಆಗಮಿಸಿದ ನಿಶಾ ಅವರು ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾದರು.

ಇದು ಖಾಸಗಿ ಭೇಟಿನಾ?‌ ನಿಶಾ ಅವರು ತಮ್ಮ ಸಂಸ್ಥೆಯ ವಿಚಾರದ ಬಗ್ಗೆ ಮಾತನಾಡಲು ಬಂದಿದ್ದರಾ? ಅಥವಾ ಇದೊಂದು ರಾಜಕೀಯ ಭೇಟಿಯಾ ಎನ್ನುವ ಕುರಿತು ಊಹಾಪೋಹಗಳು ಎದ್ದಿವೆ. ಡಿ.ಕೆ. ಶಿವಕುಮಾರ್‌ ಅವರ ಮೂಲಗಳ ಪ್ರಕಾರ, ಇದೊಂದು ರಾಜಕೀಯ ಮಾತುಕತೆಗಾಗಿ ನಡೆದ ಭೇಟಿ. ಹಾಗಿದ್ದರೆ ಏನು ರಾಜಕೀಯ ಎನ್ನುವುದು ಸ್ಪಷ್ಟವಾಗಿಲ್ಲ.‌

ನಿಜವೆಂದರೆ, ಸಿ.ಪಿ. ಯೋಗೀಶ್ವರ್‌ ಅವರು ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದು, ಜೆಡಿಎಸ್‌ಗೆ ಹೋಗಿ ಈಗ ಬಿಜೆಪಿಯಲ್ಲಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಸರ್ಕಾರವನ್ನು ಉರುಳಿಸಿ ಬಿಜೆಪಿ ಸರ್ಕಾರ ಸ್ಥಾಪನೆಯಲ್ಲಿ ಸಿ.ಪಿ. ಯೋಗೇಶ್ವರ್‌ ಅವರ ಪಾತ್ರವೂ ದೊಡ್ಡದಿತ್ತು.

ಇದೀಗ ಅದೇ ಸಿ.ಪಿ. ಯೋಗೇಶ್ವರ್‌ ಅವರು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರ ಜತೆಗೆ ರಾಜಕೀಯ ಮೈತ್ರಿಯ ಮಾತುಕತೆ ಶುರು ಮಾಡಿದ್ದಾರೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳುವ ನಿಟ್ಟಿನ ಮಾತುಕತೆಗೆ ಚಾಲನೆ ನೀಡಿದ್ದು ಯೋಗೇಶ್ವರ್‌ ಎನ್ನಲಾಗುತ್ತಿದೆ. ಅವರು ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗುವ ಕನಸು ಕಾಣುತ್ತಿದ್ದಾರೆ.

ಇದರ ನಡುವೆಯೇ ಇದೀಗ ನಿಶಾ ಯೋಗೇಶ್ವರ್‌ ಅವರು ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ. 33ರ ಹರೆದಯ ನಿಶಾ ಯೋಗೇಶ್ವರ್‌ ಅವರು ಚಿತ್ರನಟಿ ಮತ್ತು ರೂಪದರ್ಶಿಯಾಗಿದ್ದಾರೆ. ಇದರ ಜತೆಗೆ ಕೆಲವು ಉದ್ಯಮಗಳನ್ನೂ ನಡೆಸುತ್ತಿದ್ದಾರೆ. ಮದ್ದೂರಿನಲ್ಲಿ ಅವರಿಗೆ ಡೆಕ್ಕನ್ ಫೀಲ್ಡ್ ಆಗ್ರೋ ಇಂಡಸ್ಟ್ರೀಸ್ ಇದೆ.

ಈ ಹಿಂದೆ ನಿಶಾ ಯೋಗೀಶ್ವರ್‌ ಅವರು ರಾಜಕೀಯಕ್ಕೆ ಬರುತ್ತಾರೆ, ಬಿಜೆಪಿಯಿಂದ ಕಣಕ್ಕಿಳಿಯುತ್ತಾರೆ ಎಂಬ ಸುದ್ದಿ ಹರಡಿತ್ತು. ನಿಶಾ ಅವರಿಗೆ ರಾಜಕೀಯದಲ್ಲಿ ಆಸಕ್ತಿಯೂ ಇದೆ ಎನ್ನಲಾಗಿದೆ.

ಇಂಥ ಪರಿಸ್ಥಿತಿಯಲ್ಲಿ ಅವರು ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿರುವುದು ಮತ್ತು ಡಿ.ಕೆ.ಶಿ ಅವರ ಆಪ್ತರು ಇದೊಂದು ರಾಜಕೀಯ ಭೇಟಿ ಎಂದು ಹೇಳುತ್ತಿರುವುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: Karnataka Politics : ಸರ್ಕಾರದಲ್ಲಿ ಅನುದಾನ ಎಲ್ಲಿದೆ? ಕಾಂಗ್ರೆಸ್‌ ಶಾಸಕರಿಗೆ ಡಿಕೆಶಿ ತಿರುಗೇಟು!

Exit mobile version