Site icon Vistara News

ST Somashekhar: ನನ್ನ ಹೆದರಿಸಲು ಯಾವ ಮಗನೂ ಹುಟ್ಟಿಲ್ಲ: ಬಿಜೆಪಿ ವಿರುದ್ಧ ಎಸ್‌.ಟಿ. ಸೋಮಶೇಖರ್‌ ಗುಡುಗು

No one can scare me says ST Somashekhar

ಬೆಂಗಳೂರು: ನಾನೇನು ಪಾಕೀಸ್ತಾನದಲ್ಲಿ‌ ಇದ್ದೀನಾ? ಇವರು ನನನ್ನು ಹೆದರಿಸಲು ಆಗಲ್ಲ. ನನ್ನನ್ನು ಹೆದರಿಸುವುದಕ್ಕೆ ಯಾವ ಮಗನೂ ಹುಟ್ಟಿಲ್ಲ. ನಾನು ಇವರಂತೆ ಇಲ್ಲೀಗಲ್‌ ಇಲ್ಲ. ನೇರವಾಗಿಯೇ ಇದ್ದೇನೆ. ತಾಕತ್ತು ಇದ್ದರೆ ನನನ್ನು ಹೆದರಿಸಲಿ, ಏನ್ ಮಾಡ್ತಾರೆ ನೋಡೋಣ ಎಂದು ಮಾಜಿ ಸಚಿವ ಎಸ್‌.ಟಿ. ಸೋಮಶೇಖರ್‌ (ST Somashekhar) ಅವರು ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.

ಮಂಗಳವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ (Rajya Sabha Election) ಎಸ್‌.ಟಿ. ಸೋಮಶೇಖರ್‌ ಅಡ್ಡ ಮತದಾನ ಮಾಡಿದ್ದರ ಕುರಿತು ವಿಧಾನಸಭಾ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ ಹಾಗೂ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಎಸ್‌ಟಿಎಸ್‌, ನನ್ನ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರಲ್ಲವೇ? ಇವರು ನನ್ನ ಎದುರಿಗೆ ಬಂದು ಮಾಡಲಿ. ಒಬ್ಬೊಬ್ಬರದ್ದು ಒಂದೊಂದೇ ಒಂದೊಂದೇ ವಿಷಯವನ್ನು ಹೊರಗೆ ತೆಗೆಯುತ್ತೇನೆ‌ ಎಂದು ಕಿಡಿಕಾರಿದರು.

ಮೂರು ವರ್ಷದಲ್ಲಿ ಇವರ ಆಟಗಳನ್ನೆಲ್ಲ ನೋಡಿದ್ದೇನೆ. ಬಿ.ಎಸ್. ಯಡಿಯೂರಪ್ಪ ಅವರಿಗಿಂತ ‌ಮುನ್ನ ಯಾರೆಲ್ಲ ನನ್ನ ಹತ್ತಿರ ಮಾತನಾಡಿದರು. ಬಿ.ಎಸ್.‌ ಯಡಿಯೂರಪ್ಪ ಅವರನ್ನು 100% ಇಳಿಸುತ್ತೇನೆ ಅಂತ ಯಾರು ಹೇಳಿದರು? ಅವೆಲ್ಲವನ್ನು ಸಾಕ್ಷಿ ಸಮೇತ ನಾನು ಹೇಳಬೇಕಾಗುತ್ತದೆ. ಯಾರು ಯಾರಿಗೆ ಹೇಗೆ ಹೇಗೆ ಮೋಸ ಮಾಡಿದರು ಎಂಬುದನ್ನೆಲ್ಲವನ್ನೂ ತೆರೆದಿಡುತ್ತೇನೆ. ಇದುವರೆಗೂ ಆ ರೀತಿ ಪಾಲಿಟಿಕ್ಸ್ ಮಾಡಿಲ್ಲ. ಇವರು ಹಾಗೇ ಮಾಡಲು ಹೋದರೆ ನಾನು ಬಿಡಲ್ಲ ಎಂದು ಎಸ್.ಟಿ. ಸೋಮಶೇಖರ್‌ ಹೇಳಿದರು.

ತಾಯಿಗೆ ದ್ರೋಹ ಮಾಡಿದ್ರು ಅಂತ ಎಲ್ಲ ಮಾತನಾಡಿದರೆ ಹೇಗೆ? ಹೌದು ಕ್ರಾಸ್‌ ವೋಟ್‌ ಮಾಡಿದ್ದೇನೆ. ಏನ್ ಇವಾಗ? ಯೆಸ್.. ಐ ಡನ್‌ ಇಟ್. ಏನ್ ಇವಾಗ? 20 ವರ್ಷದಿಂದ ನಾನು ರಾಜಕೀಯದಲ್ಲಿ ಇದ್ದೇನೆ. ನಾನು ಆ ರೀತಿ ರಾಜಕೀಯ ಮಾಡಿಲ್ಲ. ಇವಾಗ ಇವರು ಮಾಡಿದರೆ, ನಾನು ಎಲ್ಲವನ್ನೂ ತೆರದಿಡಬೇಕಾಗುತ್ತದೆ. ಬಿಜೆಪಿಯವರು ಏನ್ ಬೇಕಿದ್ದರೂ ಕ್ರಮ ಕೈಗೊಳ್ಳಲು ಸ್ವತಂತ್ರರಿದ್ದಾರೆ. ನನ್ನನ್ನು ಅನರ್ಹ ಮಾಡಬಹುದು, ಪಕ್ಷದಿಂದ ಕಿತ್ತಾಕಬಹುದು.
ಅವರ ತಾಕತ್ತು ಏನೇನಿದೆ ಎಲ್ಲವನ್ನೂ ಮಾಡಲಿ ಎಂದು ಎಸ್‌.ಟಿ. ಸೋಮಶೇಖರ್ ಸವಾಲು ಹಾಕಿದರು.

ನನ್ನ ವಿರುದ್ಧ ಮೂರು ಪಕ್ಷದವರು ಒಗ್ಗಟ್ಟಾಗಿದ್ದರು!

ಚುನಾವಣೆ ಸಂದರ್ಭದಲ್ಲಿ ಇದೆಲ್ಲವನ್ನೂ ಮಾತನಾಡಬೇಕು. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಚುನಾವಣೆಗೆ ಸ್ಪರ್ಧೆ ಮಾಡಬಹುದು. ಸೋಲು ಗೆಲುವು ಜನರ ಕೈಯಲ್ಲಿರೋದು. ಕಳೆದ ಚುನಾವಣೆಯಲ್ಲಿಯೂ ಎಲ್ಲರೂ ಒಗಟ್ಟಾಗಿ ನನ್ನ ವಿರುದ್ಧವೇ ಕೆಲಸ ಮಾಡಿದರು. ಕಾಂಗ್ರೆಸ್ , ಬಿಜೆಪಿ, ಜೆಡಿಎಸ್ ಮೂವರೂ ಒಗ್ಗಟ್ಟಾಗಿ ನನ್ನ ವಿರುದ್ಧ ಫೈಟ್ ಮಾಡಿದರು. ನಾಲ್ಕು ಸಾರಿ ಆ ಕ್ಷೇತ್ರದಲ್ಲಿ ಗೆದಿದ್ದೇನೆ, ಚುನಾವಣೆ ಯಾರು ಬೇಕಾದರೂ ನಿಲ್ಲಬಹುದು. ಯಾರು ಬೇಕಾದರೂ ಗೆಲ್ಲಬಹುದು ಎಂದು ಎಸ್.ಟಿ. ಸೋಮಶೇಖರ್‌ ಹೇಳಿದರು.

ಇದನ್ನೂ ಓದಿ: Sedition Case: ಪಾಕ್‌ ಪರ ಘೋಷಣೆ ವಿವಾದ; FSL ವರದಿಯೇ ಅಂತಿಮ, ಬಳಿಕವೇ ಕ್ರಮೆವಂದ ಪರಮೇಶ್ವರ್‌

ಇದು ಜೆಡಿಎಸ್‌ಗೆ ಬಿಜೆಪಿ ಮಾಡಿದ ದ್ರೋಹ!

ಹೌದು. ಅಡ್ಡ ಮತ ಮಾಡಿದ್ದೇನೆ. ಯಾವುದಕ್ಕೂ ಹೆದುರುವ ಮನುಷ್ಯ ನಾನಲ್ಲ. ಇದೇ ಹಿಮಾಚಲ ಪ್ರದೇಶದಲ್ಲಿ ಎಷ್ಟು ಜನ ಬಿಜೆಪಿಗೆ ವೊಟ್ ಹಾಕಿಲ್ಲ? ಕೋರ್ಟ್ ಆದೇಶ ಕೂಡಾ ಇದೆ. ಆತ್ಮಸಾಕ್ಷಿ ಮತ ಯಾರಿಗೆ ಹಾಕಬೇಕು ಅವರಿಗೆ ಹಾಕಿದ್ದೇನೆ. ಇದು ಅಪವಿತ್ರ ಮೈತ್ರಿ, ಎಂಪಿ ಎಲೆಕ್ಷನ್‌ಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕೈಕಾಲು ಹಿಡಿದು ಮಾಡಿಕೊಂಡಿದ್ದಾರೆ. ಇದು ರಾಜ್ಯಸಭಾ ಎಲೆಕ್ಷನ್‌ಗಾಗಿ ಅಲ್ಲ. ಜೆಡಿಎಸ್ ಅವರಿಗೆ ಅರ್ಥ ಆಗಬೇಕು. ಜೆಡಿಎಸ್‌ಗೆ ಬಿಜೆಪಿ ಮಾಡಿರುವ ದ್ರೋಹ ಇದು. ಆ ಕುಮಾರಸ್ವಾಮಿ ಅವರಿಗೆ ಅರ್ಥ ಆಗಬೇಕಿತ್ತು. ಈಗ ನನ್ನ ವಿರುದ್ಧ ಮಾತನಾಡುವುದಲ್ಲ. ಅವರಿಗೆ ನಾನೇನು ಹೇಳಿ ಕೊಡಬೇಕಾದ ಅವಶ್ಯಕತೆ ಇಲ್ಲ. ಕುಮಾರ ಸ್ವಾಮಿ ಅವರ ತಟ್ಟೆಯಲ್ಲಿ ಹೆಗ್ಗಣ ಬಿದಿದ್ದೆ. ಪ್ರಜಾಪ್ರಭುತ್ವ ಸೋತಿರುವ ಹತಾಶೆಯಲ್ಲಿ ಮಾತನಾಡುತ್ತಿದ್ದಾರೆ. ಅವರಷ್ಟೆ ಶಕ್ತಿಯನ್ನು ದೇವರು ನನಗೆ ಕೊಟ್ಟಿದ್ದಾರೆ ಎಂದು ಎಸ್‌.ಟಿ. ಸೋಮಶೇಖರ್‌ ಹೇಳಿದರು.

Exit mobile version