Site icon Vistara News

Sultanpuri Like Mishaps | ಉತ್ತರ ಪ್ರದೇಶದಲ್ಲಿ ದೆಹಲಿ ರೀತಿ 2 ಪ್ರತ್ಯೇಕ ಅಪಘಾತ, ಇಬ್ಬರ ದಾರುಣ ಸಾವು

Accidents In Uttar Pradesh

ಲಖನೌ: ದೆಹಲಿಯ ಸುಲ್ತಾನ್‌ಪುರಿಯಲ್ಲಿ ಅಪಘಾತ ಸಂಭವಿಸಿ ಕಾರಿನ ಅಡಿಗೆ ಸಿಲುಕಿದ ಯುವತಿಯನ್ನು 12 ಕಿ.ಮೀ ಎಳೆದ ಪ್ರಕರಣವು ದೇಶಾದ್ಯಂತ ಸುದ್ದಿಯಾದ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಇದೇ ರೀತಿ (Sultanpuri Like Mishaps) ಎರಡು ಅಪಘಾತ ಸಂಭವಿಸಿವೆ. ಕಾರಿನ ಅಡಿಗೆ ಸಿಲುಕಿ ಸ್ವಿಗ್ಗಿ ಡೆಲಿವರಿ ಬಾಯ್‌ ಮೃತಪಟ್ಟರೆ, ಟ್ರಕ್‌ ಅಡಿಗೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

500 ಮೀಟರ್‌ ಎಳೆದ ಕಾರು
ಉತ್ತರ ಪ್ರದೇಶದ ನೊಯ್ಡಾ ಸೆಕ್ಟರ್‌ನಲ್ಲಿ ಕೌಶಲ್‌ ಎಂಬ ಸ್ವಿಗ್ಗಿ ಡೆಲಿವರಿ ಬಾಯ್‌ಗೆ ಕಾರು ಡಿಕ್ಕಿಯಾಗಿದ್ದು, ಕಾರಿನ ಅಡಿಗೆ ಸಿಲುಕಿದ ಆತನನ್ನು 500 ಮೀಟರ್‌ ಎಳೆಯಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಕೌಶಲ್‌ ಮೃತಪಟ್ಟಿದ್ದಾನೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

3 ಕಿ.ಮೀ ಎಳೆದ ಟ್ರಕ್‌
ಉತ್ತರ ಪ್ರದೇಶದ ಬಾಂಡಾ ಜಿಲ್ಲೆಯಲ್ಲಿ ಸ್ಕೂಟಿ ಚಲಾಯಿಸುತ್ತಿದ್ದ ಪುಷ್ಪಾ ದೇವಿ ಎಂಬ ಮಹಿಳೆಗೆ ಟ್ರಕ್‌ ಡಿಕ್ಕಿಯಾಗಿದೆ. ಇದಾದ ಬಳಿಕ ಮಹಿಳೆಯು ಟ್ರಕ್‌ ಅಡಿಗೆ ಸಿಲುಕಿದ್ದು, ಆಕೆಯನ್ನು ಮೂರು ಕಿಲೋಮೀಟರ್‌ ಎಳೆಯಲಾಗಿದೆ. ಬಳಿಕ ಮಹಿಳೆ ಮೃತಪಟ್ಟಿದ್ದಾರೆ. ಇದಾದ ಬಳಿಕ ಟ್ರಕ್‌ಗೆ ಬೆಂಕಿ ಹತ್ತಿದೆ. ಚಾಲಕ ಪರಾರಿಯಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ | Accident In Delhi | ಅಂಜಲಿ ವಿಲವಿಲ ಎನ್ನುತ್ತಿದ್ದರೆ ಪೊಲೀಸರು ನಿರ್ಲಕ್ಷಿಸಿದರು, 9 ವ್ಯಾನ್‌ನಿಂದಲೂ ಕಾರ್‌ ಚೇಸ್‌ ಮಾಡಲು ಆಗಲಿಲ್ಲ?

Exit mobile version