ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿ ಕಡೂರಿನ ಮಾಜಿ ಶಾಸಕ ವೈ.ಎಸ್.ವಿ. ದತ್ತ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನುರಹಿತ ವಾರಂಟ್ (Court Warrant) ಜಾರಿಗೊಳಿಸಿದೆ. ದತ್ತ ಅವರನ್ನು ಮಾರ್ಚ್ 27ರಂದು ನಡೆಯುವ ವಿಚಾರಣೆ ವೇಳೆ ಹಾಜರುಪಡಿಸುವಂತೆ ನ್ಯಾಯಾಧೀಶರು ಪೋಲಿಸರಿಗೆ ಸೂಚಿಸಿದರು.
ವೈಎಸ್ ವಿ ದತ್ತ ವಿರುದ್ಧ ಸಿ.ಎಸ್ ಸೋಮೇಗೌಡ ಎಂಬುವವರು ಚೆಕ್ ಬೌನ್ಸ್ ಸಂಬಂಧ ಖಾಸಗಿ ದೂರು ದಾಖಲಿಸಿದ್ದರು. ಈ ಸಂಬಂಧ ಜನಪ್ರತಿನಿಧಿಗಳ ನ್ಯಾಯಾಲಯ ವಿಚಾರಣೆ ಕೈಗೆತ್ತಿಕೊಂಡಿತ್ತು.
ಆದರೆ, ವಿಚಾರಣೆಗೆ ದತ್ತ ಹಾಜರಾಗದ ಹಿನ್ನೆಲೆಯಲ್ಲಿ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿ 42 ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶೆ ಜೆ.ಪ್ರೀತ್ ಆದೇಶಿಸಿದ್ದಾರೆ.
ಮುಂದಿನ ವಿಚಾರಣೆ ಮಾ. 27ರಂದು ನಡೆಯಲಿದ್ದು, ವೈ.ಎಸ್. ವಿ ದತ್ತಾ ಅವರನ್ನು ಹಾಜರುಪಡಿಸಲು ಬೆಂಗಳೂರು ಉತ್ತರ ವಿಭಾಗ ಡಿಸಿಪಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ : Karnataka Election | ವೈಎಸ್‌ವಿ ದತ್ತ, ಎಚ್. ನಾಗೇಶ್ ಕೈ ಸೇರ್ಪಡೆ, ಇನ್ನು ನಿತ್ಯವೂ ಕಾಂಗ್ರೆಸ್ ಪರ್ವ ಎಂದ ಡಿಕೆಶಿ