ಬೆಳಗಾವಿ: ವಾಯವ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹನುಮಂತ ನಿರಾಣಿ ಎರಡನೇ ಬಾರಿ ಗೆಲುವು ಖಚಿತಪಟ್ಟಿದೆ.
ಐದನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದು, ಹನುಮಂತ ನಿರಾಣಿ 35,000 ಮತಗಳನ್ನು ಪಡೆದು ಗೆಲುವಿನ ಓಟದಲ್ಲಿ ಬಹಳ ಮುಂದಿದ್ದಾರೆ.
ಇನ್ನೂ ಹದಿನಾರು ಸಾವಿರ ಮತಗಳ ಎಣಿಕೆ ಬಾಕಿ ಇದೆಯಾದರೂ ಕಾಂಗ್ರೆಸ್ ಅಭ್ಯರ್ಥಿಗಿಂತ ಇವರು ೨೭, ೫೦೦ ಮುನ್ನಡೆ ಸಾಧಿಸಿರುವುದರಿಂದ ಗೆಲುವು ಖಚಿತವಾಗಿದೆ. ಹೀಗಾಗಿ ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆ ಒಂದೇ ಬಾಕಿ ಇದೆ ಎಂದು ಹೇಳಲಾಗುತ್ತಿದೆ.
ಇದುವರೆಗೆ ಬಿಜೆಪಿ ಅಭ್ಯರ್ಥಿ ಹನುಮಂತ ನಿರಾಣಿಗೆ 35,000ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಸಂಕ 7,500ಮತಗಳನ್ನು ಮಾತ್ರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ | 3ನೇ ಬಾರಿ ಅರುಣ್ ಶಹಾಪುರ ಕೈಹಿಡಿಯದ ಮತದಾರ: ವಾಯವ್ಯದಲ್ಲಿ ಹುಕ್ಕೇರಿಗೆ ಜಯ