ಬೆಂಗಳೂರು: ನೈಜೀರಿಯಾ ಡ್ರಗ್ ಪೆಡ್ಲರ್ ಜತೆ ನಂಟು ಆರೋಪದಲ್ಲಿ ವಿಚಾರಣೆಗೆ ಹಾಜರಾಗುವಂತೆ ಪುಲಿಕೇಶಿನಗರ ಕಾರ್ಪೊರೇಟರ್ ಎ.ಆರ್. ಜಾಕೀರ್‌ಗೆ (Drugs case) ಡಿಜೆ ಹಳ್ಳಿ ಪೊಲೀಸರು ನೋಟಿಸ್ ನೀಡಿದ್ದಾರೆ.
ಡ್ರಗ್ ಪೆಡ್ಲರ್ ಡೇವಿಡ್ ಜತೆ ಝಾಕೀರ್ ನಿರಂತರ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಸಿಡಿಆರ್‌ನಲ್ಲಿ ಝಾಕೀರ್ ಹಾಗೂ ನೈಜೀರಿಯಾ ಡ್ರಗ್ ಪೆಡ್ಲರ್ ಡೇವಿಡ್ ನಡುವೆ ಸಂಪರ್ಕ ಇರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ವಿಚಾರಣೆ ಮಾಡಲು ಪೊಲೀಸರು ನೋಟಿಸ್ ಕಳುಹಿಸಿದ್ದಾರೆ.
ಇದನ್ನೂ ಓದಿ | IT Raid | ಬೆಂಗಳೂರಿನಲ್ಲಿ ಚಿನ್ನದ ವ್ಯಾಪಾರಿಗಳ ಮೇಲೆ ಐಟಿ ದಾಳಿ, 25ಕ್ಕೂ ಹೆಚ್ಚು ಮನೆಗಳಿಗೆ ಅಧಿಕಾರಿಗಳ ಲಗ್ಗೆ
ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯ ವೇಳೆ ಹುಡುಗರನ್ನು ಕಳುಹಿಸಿ ಗಲಭೆ ಸೃಷ್ಟಿಸಿದ್ದ ಝಾಕೀರ್, ಅದೇ ಸಂದರ್ಭದಲ್ಲಿ ಗಲಾಟೆ ನಡೆಸಲು ಹುಡುಗರಿಗೆ ಡ್ರಗ್ಸ್ ಪೂರೈಕೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಬರುವಂತೆ 3 ದಿನಗಳ ಹಿಂದೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರ ಮನೆಗೆ ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಝಾಕೀರ್ ಬಂಧನವಾಗಿ ಏಳು ತಿಂಗಳು ಜೈಲಿನಲ್ಲಿದ್ದರು.