ಬೆಂಗಳೂರು: ನಗರದಲ್ಲಿ ಕಳ್ಳತನ ಮಾಡಿ, ಕಾಡನ್ನು ವಾಸಸ್ಥಾನ ಮಾಡಿಕೊಂಡಿದ್ದ ನಟೋರಿಯಸ್ ಕಳ್ಳನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕದ್ದ ಆಭರಣಗಳೊಂದಿಗೆ ಕಾಡಿಗೆ ಎಸ್ಕೇಪ್ ಆಗುತ್ತಿದ್ದ ಆಸಾಮಿ, ಪೊಲೀಸರು ಬೆನ್ನತ್ತಿದಾಗ ಚಾಲೆಂಜ್ ಮಾಡಿ ಪರಾರಿಯಾಗುತ್ತಿದ್ದ. ಸುಮಾರು 50ಕ್ಕೂ ಹೆಚ್ಚು ಪ್ರಕರಣಗಳಲ್ಲಿ (Notorious Thief) ಭಾಗಿಯಾಗಿದ್ದ ಆರೋಪಿಯನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಗಿರಿನಗರ ಪೊಲೀಸರಿಂದ ನೆಲಮಂಗಲದ ಸೋಲೂರು ಮೂಲದ ಆರೋಪಿ ನರಸಿಂಹ ರೆಡ್ಡಿ ಬಂಧನವಾಗಿದೆ. ಸುಮಾರು 50ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆಸಾಮಿ, ಇತ್ತೀಚಿಗೆ ಗಿರಿನಗರ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡಿದ್ದ. ಕದ್ದ ಆಭರಣ ಸಮೇತ ಕಾಡಿಗೆ ಎಸ್ಕೇಪ್ ಆಗಿದ್ದ.
ನೆಲಮಂಗಲ ಬಳಿಯ ಗುಡೇಮಾರನಹಳ್ಳಿ ಹಾಗೂ ಕೃಷ್ಣಗಿರಿಯ ಫಾರೆಸ್ಟ್‌ನಲ್ಲಿರುತ್ತಿದ್ದ ಈತ, ಕಾಡಿನ ಬಂಡೆಗಳ ಮೇಲೆ ಮಲಗುತ್ತಿದ್ದ. ಪೊಲೀಸರು ಬೆನ್ನತ್ತಿದರೆ ಚಾಲೆಂಜ್ ಮಾಡಿ ಪರಾರಿಯಾಗುತ್ತಿದ್ದ. ಪೊಲೀಸರು ನನ್ನ ಹಿಂದೆ ಬರಬೇಕು, ಬೆನ್ನತ್ತಬೇಕು ಅಂತ ಚಾಲೆಂಜ್ ಮಾಡಿ ಹೋಗುತ್ತಿದ್ದ. ಹೀಗೆ ಗುಡೇಮಾರನಹಳ್ಳಿ ಕಾಡಿನಲ್ಲಿದ್ದ ವೇಳೆ ಆರೋಪಿಯನ್ನು ಬಂಧಿಸಲಾಗಿದೆ. ಆತನಿಂದ 70 ಲಕ್ಷ ಮೌಲ್ಯದ ಒಂದು ಕೆ.ಜಿ. ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ | False Case: ಪಿಎಸ್ಐ ಮನೆಯಲ್ಲಿ 12 ಲಕ್ಷ ಕಳವು ಕೇಸ್; ತನಿಖೆ ವೇಳೆ ಬಯಲಾಯ್ತು ನಕಲಿ ದೂರಿನ ಅಸಲಿ ಕತೆ!
ಡಿಜಿಟಲ್ ಅರೆಸ್ಟ್ ಮಾಡಿ 2.2 ಕೋಟಿ ರೂ. ವಂಚನೆ; ಐವರು ಸೈಬರ್ ಕಳ್ಳರ ಬಂಧನ
ಬೆಂಗಳೂರು: ಸಾರ್ವಜನಿಕರನ್ನು ಡಿಜಿಟಲ್ ಅರೆಸ್ಟ್ (Digital Arrest) ಮಾಡುತ್ತಿದ್ದ ದುಬೈ ಮೂಲದ ವ್ಯಕ್ತಿ ಸೇರಿ ಐವರು ಸೈಬರ್ ವಂಚಕರನ್ನು ಬಂಧಿಸುವಲ್ಲಿ ಸಿಐಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 1.70 ಕೋಟಿ ರೂಪಾಯಿ, 7700 ಯುಎಸ್ ಡಾಲರ್ (6,46,441 ರೂ.) ಸೇರಿ 1.76 ಕೋಟಿ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ.
ದುಬೈನ ಯುಸುಫ್ ಸೇಠ್, ಬೆಂಗಳೂರಿನ ಮಹಮ್ಮದ್ ಶಾಕಿಬ್, ಮಹಮ್ಮದ್ ಅಯಾನ್, ಅಹಸಾನ್ ಅನ್ಸಾರಿ, ಸೊಲೋಮನ್ ರಾಜ ಬಂಧಿತರು. ನಿಮ್ಮ ಹೆಸರಿನ ಪಾರ್ಸೆಲ್‌ನಲ್ಲಿ ಡ್ರಗ್ಸ್ ಇದೆ ಎಂದು ಸಾರ್ವಜನಿಕರಿಗೆ ಕರೆ ಮಾಡುತ್ತಿದ್ದ ಆರೋಪಿಗಳು, ನಾವು ಪೊಲೀಸರು. ಇದನ್ನು ಬಗೆಹರಿಸಲು ಹಣ ಕೊಡಬೇಕು ಎಂದು ಬೇಡಿಕೆ ಇಡುತ್ತಿದ್ದರು.
ಇದನ್ನೂ ಓದಿ | Crime News: ಕುಡಿದ ಮತ್ತಿನಲ್ಲಿ ಪತ್ನಿಯ ಕುತ್ತಿಗೆ ಕಡಿದು ಕೈಯಲ್ಲಿ ಕತ್ತಿ ಹಿಡಿದು ನರ್ತಿಸಿದ ಪತಿ
ಈ ರೀತಿ ಬೆದರಿಕೆ ಹಾಕಿ ಕೊಡುಗು ಮೂಲದ ವ್ಯಕ್ತಿಯಿಂದ 2.21 ಕೋಟಿ ರೂ.ಗಳನ್ನು ಆರ್‌ಟಿಜಿಎಸ್ ಮಾಡಿಸಿಕೊಂಡಿದ್ದರು. ಆರೋಪಿಗಳು ದುಬೈನಲ್ಲಿ ವಂಚನೆ ಮಾಡಲು ಭಾರತೀಯ ಬ್ಯಾಂಕ್ ಅಕೌಂಟ್ ಅನ್ನು ಬಳಸಿದ್ದರು. ಈ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿತ್ತು. ಸದ್ಯ ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ವಂಚನೆ ಹಣದಿಂದ ಬೆನ್ಜ್ ಕಾರು ಖರೀದಿಸಿದ್ದರು. ಅವರಿಂದ ಒಟ್ಟು 1.76 ಕೋಟಿ ರೂ.ಗಳನ್ನು ಸಿಐಡಿ ವಶಕ್ಕೆ ಪಡೆದಿದ್ದು, ಸಿಐಡಿ ಪೊಲೀಸರಿಂದ ತನಿಖೆ ಮುಂದುವರಿದಿದೆ.