Site icon Vistara News

Self Harming: ಅನಿವಾಸಿ ಭಾರತೀಯ ಮಹಿಳೆ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌; ಆಸ್ಟ್ರೇಲಿಯಾದ ಕಠಿಣ ಕಾನೂನುಗಳೇ ಸಾವಿಗೆ ಕಾರಣ?

woman self harm

ಧಾರವಾಡ: ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದ ಧಾರವಾಡ ಮೂಲದ ಮಹಿಳೆಯ ಆತ್ಮಹತ್ಯೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಮಗನ ಅನಾರೋಗ್ಯದಿಂದ ನೊಂದಿದ್ದ ಮಹಿಳೆ ಆಸ್ಟ್ರೇಲಿಯಾದಿಂದ ಬಂದು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದರು. ಆದರೆ, ಈಗ ಮಹಿಳೆ‌ ತವರು ಮನೆಗೆ ಕೊರಿಯರ್ ಒಂದು ತಲುಪಿದ್ದು, ಅದರಲ್ಲಿದ್ದ ಬ್ಯಾಗ್ ಹಾಗೂ ಪತ್ರ ವಿದೇಶದಲ್ಲಿ ಕಹಿ ಸತ್ಯವನ್ನು ಬಿಚ್ಚಿಟ್ಟಿವೆ. ಮಹಿಳೆ ಸಾವಿಗೆ ಆಸ್ಟ್ರೇಲಿಯಾದಲ್ಲಿನ ಕಠಿಣ ಕಾನೂನುಗಳೇ ಕಾರಣ ಎಂದು ತಿಳಿದುಬಂದಿದೆ.

ಧಾರವಾಡ ಮೂಲದ ಪ್ರಿಯದರ್ಶಿನಿ ಲಿಂಗರಾಜ್ ಪಾಟೀಲ್(40) ಅವರ ಮೃತದೇಹ ಸವದತ್ತಿ ತಾಲೂಕಿನ ಗೊರವನಕೊಳ್ಳದ ಮಲಪ್ರಭಾ ಹಿನ್ನೀರಿನಲ್ಲಿ ಆ.20ರಂದು ಪತ್ತೆಯಾಗಿತ್ತು. ಪ್ರಿಯದರ್ಶಿನಿ ಹಾಗೂ ಪತಿ ಲಿಂಗರಾಜ್ ಇಬ್ಬರೂ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಇವರು ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರು. ಆಗಸ್ಟ್ 18ರಂದು ರಾಜ್ಯಕ್ಕೆ ಮರಳಿದ್ದ ಪ್ರಿಯದರ್ಶಿನಿ ಮಲಪ್ರಭಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದರು.

ಇದನ್ನೂ ಓದಿ | Murder Case: ಸುಪಾರಿ ಕೊಟ್ಟು ಹೆತ್ತ ಮಗನನ್ನೇ ಕೊಲೆಗೈದ ತಂದೆ; ಸುಣ್ಣದ ಡಬ್ಬಿಯಲ್ಲಿತ್ತು ಹಂತಕನ ನಂಬರ್‌!

ಧಾರವಾಡದ ಎಸ್.ಎಸ್. ದೇಸಾಯಿ ಹಾಗೂ ಶೋಭಾ ದೇಸಾಯಿ ದಂಪತಿ ಮಗಳು ಪ್ರಿಯದರ್ಶಿನಿಗೆ ಕಲ್ಯಾಣ ನಗರ ಬಡಾವಣೆಯ ಲಿಂಗರಾಜ್ ಪಾಟೀಲ್ ಎಂಬುವರೊಂದಿಗೆ ವಿವಾಹವಾಗಿತ್ತು. ಬಳಿಕ ಇಬ್ಬರೂ ಎಂಜಿನಿಯರ್ ಆಗಿದ್ದರಿಂದ ಆಸ್ಟ್ರೇಲಿಯಾಕ್ಕೆ ಹೋಗಿ ನೆಲೆಸಿದ್ದರು. ಇವರಿಗೆ ಅಮರ್ತ್ಯ (17), ಅಪರಾಜಿತಾ (13) ಇಬ್ಬರು ಮಕ್ಕಳು ಕೂಡ ಇದ್ದರು. ಮಗ ಅಮರ್ತ್ಯನಿಗೆ ಕೆಲ ದಿನಗಳ ಹಿಂದೆ ಆರೋಗ್ಯ ಸಮಸ್ಯೆಯಾಗಿದ್ದರಿಂದ ಅಲ್ಲಿನ ವೈದ್ಯರಿಗೆ ತೋರಿಸಲಾಗಿತ್ತು. ಆಗ ವೈದ್ಯರು ನೀಡಿದ್ದ ಔಷಧಗಳಿಂದಾಗಿ ಅಡ್ಡಪರಿಣಾಮ ಬೀರಿತ್ತು. ಇದನ್ನು ಪ್ರಶ್ನಿಸಿ ಸಂಬಂಧಿಸಿದವರ ವಿರುದ್ಧ ಪ್ರಿಯದರ್ಶಿನಿ ದೂರು ನೀಡಿದ್ದರು.

ಔಷಧ ಅಡ್ಡ ಪರಿಣಾಮದಿಂದ ಮಗನಿಗೆ ಆರೋಗ್ಯ ಸಮಸ್ಯೆ ಉಂಟಾಗಿದೆ ಎಂದು ದೂರು ನೀಡಿದ್ದರಿಂದ ಪ್ರಿಯದರ್ಶಿನಿಗೆ ಸಮಸ್ಯೆ ಶುರುವಾಗಿದೆ. ಆಸ್ಟ್ರೇಲಿಯಾ ಕಾನೂನಿನ ಪ್ರಕಾರ ಮಕ್ಕಳನ್ನು ಸರಿಯಾಗಿ ನೋಡಿಕೊಂಡಿಲ್ಲ ಎಂಬ ಆರೋಪ ಮಹಿಳೆ ವಿರುದ್ಧ ಕೇಳಿಬಂದಿದೆ. ಇದರಿಂದಾಗಿ ಮನನೊಂದ ಪ್ರಿಯದರ್ಶಿನಿ ಭಾರತಕ್ಕೆ ಬಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೃತಳ ತಾಯಿ ಶೋಭಾ ಆರೋಪಿಸಿದ್ದಾರೆ.

ಮಕ್ಕಳನ್ನು ಸುಪರ್ದಿಗೆ ಪಡೆದಿದ್ದ ಸರ್ಕಾರ

ಎಂಟು ವರ್ಷಗಳ ಹಿಂದೆ ಮಗ ಅಮರ್ತ್ಯನಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಸ್ಪತ್ರೆಗೆ ತೋರಿಸಲಾಗಿತ್ತು. ವೈದ್ಯರು ಚಿಕಿತ್ಸೆ ನೀಡಿದ್ದರಾದರೂ ಅವರು ನೀಡಿದ್ದ ಔಷಧಗಳಿಂದಾಗಿ ಆತನಿಗೆ ಅಡ್ಡ ಪರಿಣಾಮ ಉಂಟಾಗಿತ್ತು. ಹೀಗಾಗಿ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ಆಸ್ಟ್ರೇಲಿಯಾ ಸರ್ಕಾರಕ್ಕೆ ಪ್ರಿಯದರ್ಶಿನಿ ದೂರು ಸಲ್ಲಿಸಿದ್ದರು. ಆದರೆ, ಆಸ್ಪತ್ರೆ ಕುತಂತ್ರದಿಂದ ಮಕ್ಕಳನ್ನು ಸರಿಯಾಗಿ ನೋಡಿಕೊಂಡಿಲ್ಲ. ನಿಮ್ಮಲ್ಲಿಯೇ ಸಮಸ್ಯೆ ಇದೆಯೆಂದು ದೂಷಿಸಿ, ಅಲ್ಲಿನ ಸರ್ಕಾರ ಪ್ರಿಯದರ್ಶಿನಿ ಅವರ ಇವರ ಇಬ್ಬರು ಮಕ್ಕಳನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿತ್ತು. ಮಕ್ಕಳನ್ನು ಮರಳಿ ಕೊಡುವಂತೆ ಎಷ್ಟೇ ಹೋರಾಟ ಮಾಡಿದರೂ ಸರ್ಕಾರ ಒಪ್ಪಿರಲಿಲ್ಲ. ಇದರಿಂದ ಮನನೊಂದು ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಧಾರವಾಡದ ತವರು ಮನೆಗೆ ಕೊರಿಯರ್‌

ಕಳೆದ ವಾರ ಆಸ್ಟ್ರೇಲಿಯಾದಿಂದ ಬೆಂಗಳೂರಿಗೆ ಬಂದಿದ್ದ ಪ್ರಿಯದರ್ಶಿನಿ, ಆಗಸ್ಟ್ 19 ರಂದು ಧಾರವಾಡಕ್ಕೆ ಬರಲು ಬಸ್ ಕೂಡ ಬುಕ್ ಮಾಡಿದ್ದರು. ಆದರೆ ಆ ಬಸ್‌ನಲ್ಲಿ ಪ್ರಯಾಣ ಮಾಡಿರಲಿಲ್ಲ. ಬಳಿಕ ಆಕೆ ಮತ್ತೊಂದು ಬಸ್ ಮೂಲಕ ಹುಬ್ಬಳ್ಳಿಗೆ ಬಂದು, ಅಲ್ಲಿಂದ ಕೊರಿಯರ್ ಮೂಲಕ ತಮ್ಮಲ್ಲಿದ್ದ ಹಣ ಹಾಗೂ ಚಿನ್ನಾಭರಣಗಳನ್ನು ಬ್ಯಾಗ್ ನಲ್ಲಿ ಹಾಕಿ ತಮ್ಮ ತಂದೆಯ ಹೆಸರಿನಲ್ಲಿ ಪಾರ್ಸೆಲ್ ಬುಕ್ ಮಾಡಿದ್ದಾರೆ. ಅದೇ ಬ್ಯಾಗ್‌ನಲ್ಲಿ ಪತ್ರವೊಂದನ್ನು ಬರೆದು ಕೂಡ ಇಟ್ಟಿದ್ದಾರೆ.

ಹುಬ್ಬಳ್ಳಿಯಿಂದ ಸವದತ್ತಿ ತಾಲೂಕಿನ ಮುನವಳ್ಳಿಗೆ ಹೋದ ಆಕೆ ಅಲ್ಲಿ ಇಳಿದುಕೊಂಡಿದ್ದಾರೆ. ಬಳಿಕ ಬಳಿಕ ಅಲ್ಲಿಂದ ಮಲಪ್ರಭಾ ನದಿಗುಂಟ ನಡೆದು ಬಂದ ಪ್ರಿಯದರ್ಶಿನಿ ನದಿಗೆ ಹಾರಿದ್ದಾರೆ. ಮರುದಿನ ಶವ ನವಿಲುತೀರ್ಥ ಜಲಾಶಯದ ಹಿನ್ನೀರಿನಲ್ಲಿ ಪತ್ತೆಯಾಗಿತ್ತು. ಮನೆಗೆ ಬಂದಿದ್ದ ಪತ್ರದಲ್ಲಿ ತಮ್ಮ ಸಾವಿಗೆ ಕಾರಣ ಹಾಗೂ ಆಸ್ಟ್ರೇಲಿಯಾ ಕಾನೂನು ವ್ಯವಸ್ಥೆ ಬಗ್ಗೆ ಮಗಳು ತಿಳಿಸಿದ್ದಾರೆ.

ಇದನ್ನೂ ಓದಿ | Murder Case : ಯುವತಿಯ ಕತ್ತುಸೀಳಿ ಕೊಲ್ಲುವ ಮುನ್ನ ಅಂಗಡಿಗೆ ಬಂದು MOBILE ಕಸಿದುಕೊಂಡಿದ್ದ ಹಂತಕ

ಪತಿ ಲಿಂಗರಾಜ ಪಾಟೀಲ್ ಆಸ್ಟ್ರೇಲಿಯಾದಿಂದ ಬಂದ ಬಳಿಕ ಪ್ರಿಯದರ್ಶಿನಿ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಇನ್ನು ತಾವು ಬರುವಾಗ ಪ್ರಿಯದರ್ಶಿನಿ ಎರಡೂ ಮಕ್ಕಳ ಪಾಸ್‌ಪೋರ್ಟ್‌ ಕೂಡ ತಂದಿದ್ದರು. ಹೀಗಾಗಿ ಈ ವೇಳೆ ಮಕ್ಕಳಿಗೆ ಬರಲು ಅವಕಾಶವೇ ಸಿಕ್ಕಿಲ್ಲ. ಇದೇ ವೇಳೆ ಕುಟುಂಬಸ್ಥರು ತಮಗೆ ಆಗಿರೋ ಅನ್ಯಾಯದ ವಿರುದ್ಧ ಭಾರತ ಸರ್ಕಾರದ ಮೂಲಕ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ.

Exit mobile version