Site icon Vistara News

Child theft: ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ 2 ದಿನದ ಹಸುಗೂಸು ಕಳ್ಳತನ; ನರ್ಸ್‌ ವೇಷಧಾರಿಯಿಂದ ಕೃತ್ಯ

Child theft Nurse disguised as nurse steals 2 day old baby born in Haveri district hospital

ಹಾವೇರಿ: ಇಲ್ಲಿನ ಜಿಲ್ಲಾಸ್ಪತ್ರೆಯಿಂದ ನವಜಾತ ಶಿಶುವನ್ನು ಕಳ್ಳತನ (Child theft) ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಶುಕ್ರವಾರ ಸಾಯಂಕಾಲ ಹುಟ್ಟಿದ್ದ ಶಿಶುವನ್ನು ಶನಿವಾರ ಸಂಜೆ ಕಳ್ಳತನ ಮಾಡಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಬ್ಯಾಡಗಿ ತಾಲೂಕಿನ ಗುಡ್ಡದಹೊಸಳ್ಳಿ ಗ್ರಾಮದ ರಂಜಿತಾ ಕುಂಬಾರ ಎಂಬುವವರಿಗೆ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು. ರಂಜಿತಾ ಕುಂಬಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ನರ್ಸ್‌ ವೇಷದಲ್ಲಿ ಬಂದ ಮಹಿಳೆಯೊಬ್ಬಳು ಶಿಶುವಿನ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

ಶಿಶುವಿನ ಅಜ್ಜಿ

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದಾಗಿ ನಂಬಿಸಿ ಕಳ್ಳತನ ಮಾಡಿದ್ದಾರೆಂದು ಹೇಳಲಾಗುತ್ತಿದೆ. ನವಜಾತ ಶಿಶುವನ್ನು ಕಾಳಜಿ ಮಾಡುತ್ತಿದ್ದ ಅದರ ಅಜ್ಜಿಯನ್ನು ಯಾಮಾರಿಸಿ ಕಳ್ಳತನ ಮಾಡಿರುವುದು ಗೊತ್ತಾಗಿದೆ.

ಜಿಲ್ಲಾಸ್ಪತ್ರೆಗೆ ಬಂದಿದ್ದ ನರ್ಸ್‌ ವೇಷಧಾರಿ ಮಹಿಳೆ, ನಗರದ ವಿವಿಧ ಖಾಸಗಿ ಆಸ್ಪತ್ರೆಗೆ ಶಿಶು ಹಾಗೂ ಅಜ್ಜಿಯನ್ನು ಕರೆದುಕೊಂಡು ಹೋಗಿದ್ದಾಳೆ. ಅಲ್ಲಿಂದ ಮರಳಿ ಜಿಲ್ಲಾಸ್ಪತ್ರೆಗೆ ಬರುವಾಗ ಮಾರ್ಗ ಮಧ್ಯದಲ್ಲಿ ಅಜ್ಜಿಯನ್ನು ಯಾಮಾರಿಸಿ ಶಿಶುವಿನ ಕಳ್ಳತನ ಮಾಡಿದ್ದಾಳೆ. ಹಣ್ಣು ತೆಗೆದುಕೊಂಡು ಬರುವುದಾಗಿ ಹೇಳಿ ನಂಬಿಸಿ ಕಳ್ಳತನ ಮಾಡಿದ್ದಾಗಿ ಅಜ್ಜಿ ದೂರಿದ್ದಾಳೆ. ಮಗುವಿನ ಪೋಷಕರು ಕಣ್ಣೀರು ಹಾಕುತ್ತಿದ್ದು, ಶೀಘ್ರ ಮಗುವನ್ನು ಹುಡುಕಿಕೊಡುವಂತೆ ಗೋಳಾಡುತ್ತಿದ್ದಾರೆ.

ಇದನ್ನೂ ಓದಿ: Modi in Karnataka: ರಾಜ್ಯಕ್ಕೆ ಇಂದು ಮೋದಿ ಭೇಟಿ, ಮಂಡ್ಯ, ಧಾರವಾಡದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಮೋಡಿ

ಹಾವೇರಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಸ್ಪತ್ರೆ ಸಿಸಿಟಿಯಲ್ಲಿ ಮಗು ಕಳ್ಳತನದ ದೃಶ್ಯ ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Exit mobile version