ಮೈಸೂರು: ಬೆಂಗಳೂರಿನ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ (ಕ್ರೆಡಲ್) ಯೋಜನಾ ನಿರ್ದೇಶಕರಾಗಿದ್ದ ಡಿ.ಕೆ. ದಿನೇಶ್ ಕುಮಾರ್ ಮೈಸೂರಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಮೈಸೂರಲ್ಲಿ ವಾಸವಾಗಿರುವ ಅವರು ಮೃತಪಟ್ಟು ಒಂದೂವರೆ ದಿನದ ಬಳಿ ಗೊತ್ತಾಗಿದೆ. ಅವರ ಪತ್ನಿ ಮತ್ತು ಪುತ್ರ ಕೂಡಾ ಅಸ್ವಸ್ಥರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಷ
ದಿನೇಶ್ ಅವರು ಮಲಗಿದಲ್ಲೇ ಮೃತಪಟ್ಟ ರೀತಿಯಲ್ಲಿ ಪತ್ತೆಯಾಗಿದ್ದಾರೆ. ಅವರು ಈ ರೀತಿ ಬಿದ್ದಿರುವುದನ್ನು ನೋಡಿ ನಾವು ಕೂಡಾ ಮೂರ್ಛೆ ಹೋದೆವು ಎಂದು ಪತ್ನಿ ಮಾಹಿತಿ ನೀಡಿದ್ದಾರೆ. ಆದರೆ, ಮೃತಪಟ್ಟು ಒಂದುವರೆ ದಿನದವರೆಗೆ ಅವರನ್ನು ಯಾರೂ ವಿಚಾರಿಸಿರಲಿಲ್ಲವೇ ಎಂಬುದೂ ಸೇರಿದಂತೆ ಕೆಲವೊಂದು ಗಂಭೀರ ಪ್ರಶ್ನೆಗಳು ಎದ್ದುಬಂದಿವೆ.
ಬಂಧುಗಳ ವಿಚಾರಣೆ ಆಗ್ರಹಿಸಿ ದೂರು
ಈ ಮಧ್ಯೆ ದಿನೇಶ್ ಅವರದ್ದು ಅನುಮಾನಾಸ್ಪದ ಸಾವು ಎಂದು ದಿನೇಶ್ ಕುಟುಂಬಿಕರು ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪತ್ನಿ, ಪುತ್ರ ಹಾಗೂ ಕೆಲಸದವರನ್ನು ವಿಚಾರಣೆ ಮಾಡುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ.
ದಿನೇಶ್ ಮೂಲತಃ ಶ್ರೀರಂಗಪಟ್ಟಣದ ದೊಡ್ಡಪಾಳ್ಯ ಗ್ರಾಮದ ನಿವಾಸಿಯಾಗಿದ್ದು, ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು.
ಇದನ್ನೂ ಓದಿ Suspicious death | ಗಗನಸಖಿ ಕನಸು ಹೊತ್ತ ಹುಡುಗಿ ನಿಗೂಢ ಸಾವು, ಬೆಂಗಳೂರಿಂದ ಬೆಳಗಾವಿಗೆ ಕರೆತಂದ ಯುವಕ ಯಾರು?