Site icon Vistara News

ವಾರ್ಡ್‌ಗೊಂದೇ ಗಣಪತಿ | ಇನ್ನೂ ತೀರ್ಮಾನ ಆಗಿಲ್ಲ, ಸರಕಾರ ಹೇಳಿದ್ದೇ ಅಂತಿಮ ಎಂದ ಆಯುಕ್ತರು

Ganesh idol

ಬೆಂಗಳೂರು: ರಾಜಧಾನಿಯಲ್ಲಿ ಈ ಬಾರಿ ವಾರ್ಡ್‌ಗೊಂದೇ ಗಣಪತಿ ಕೂರಿಸಲು ಅವಕಾಶ ಎಂಬ ವರದಿಗಳ ಬಗ್ಗೆ ಬಿಬಿಎಂಪಿ ಸ್ಪಷ್ಟೀಕರಣ ನೀಡಿದ್ದು, ಈ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಆಗಿಲ್ಲ. ಮುಂದಿನ ದಿನದಲ್ಲಿ ರಾಜ್ಯ ಮಟ್ಟದಲ್ಲಿ ಸಭೆ ನಡೆಸಿ ತೆಗೆದುಕೊಳ್ಳುವ ನಿರ್ಧಾರಗಳೇ ಅಂತಿಮ ಎಂದು ಹೇಳಿದೆ.

ಕಳೆದ ವರ್ಷದಂತೆ ಈ ಬಾರಿಯೂ ಒಂದು ವಾರ್ಡ್‌ನಲ್ಲಿ ಒಂದೇ ಗಣೇಶ ಮೂರ್ತಿ ಕೂರಿಸಲು ಅವಕಾಶ ಎಂದು ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದ್ದಾರೆಂದು ವರದಿಯಾಗಿತ್ತು.ಅವರ ಈ ಹೇಳಿಕೆ ಭಾರಿ ಸದ್ದು ಮಾಡಿತ್ತು. ಈ ಬಾರಿ ಕೊರೊನಾ ಇಲ್ಲದಿದ್ದರೂ ಗಣೇಶೋತ್ಸವದ ಮೇಲೆ ಕಡಿವಾಣ ಹಾಕುತ್ತಿರುವುದೇಕೆ ಎಂದು ಹಲವರು ಪ್ರಶ್ನಿಸಿದ್ದರು.

ಇದಕ್ಕೆ ಸ್ಪಷ್ಟೀಕರಣ ನೀಡಿರುವ ಬಿಬಿಎಂಪಿ, ʻʻಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ವರ್ಷ ವಾರ್ಡ್‌ಗೆ ಒಂದೇ ಗಣೇಶ ಮೂರ್ತಿ ಇಡಲು ಜಾರಿಗೊಳಿಸಿದ್ದ ನಿಯಮಗಳಂತೆ ಈ ವರ್ಷವೂ ಅದೇ ನಿಯಮಗಳನ್ನು ಜಾರಿಗೊಳಿಸುತ್ತಾ? ಎಂಬುದರ ಬಗ್ಗೆ ಇಂದು ಬೆಳಗ್ಗೆ ಮಾಧ್ಯಮ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಮಾನ್ಯ ಮುಖ್ಯ ಆಯುಕ್ತರು ಪ್ರತಿಕ್ರಿಯಿಸುತ್ತಾ, ‘ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ವರ್ಷ ರೂಪಿಸಿರುವ ನಿಯಮಗಳನ್ನು ಪರಿಶೀಲಿಸುತ್ತೇವೆ. ಅದಕ್ಕಾಗಿ ರಾಜ್ಯಮಟ್ಟದಲ್ಲಿ ಸಭೆ ನಡೆದು ಸರ್ಕಾರ ನೀಡುವ ನಿರ್ದೇಶನಗಳೇ ಅಂತಿಮ ತೀರ್ಮಾನವಾಗಿರುತ್ತದೆ. ಅದರನುಸಾರ ಪಾಲಿಕೆ ಯೋಜನೆಗಳನ್ನು ರೂಪಿಸಿಕೊಂಡು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಈಗ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಉತ್ತರಿಸಿರುತ್ತಾರೆʼʼ ಎಂದಿದೆ.

ಹಿಂದಿನ ಸುದ್ದಿ| ಬೆಂಗಳೂರಿನಲ್ಲಿ ಈ ಬಾರಿಯೂ ವಾರ್ಡ್‌ಗೊಂದೇ ಗಣೇಶ ಕೂರಿಸಲು ಅವಕಾಶ

Exit mobile version