ಬೆಂಗಳೂರು: ನಗರದ ಕೆ.ಆರ್.ಮಾರ್ಕೇಟ್ ಸಮೀಪದ ಅವೆನ್ಯೂ ರಸ್ತೆಯಲ್ಲಿ ಹಳೇ ಹಜರತ್ ದರ್ಗಾ ಕಟ್ಟಡ (Dargah Collapse) ತೆರವು ಮಾಡುವಾಗ ಏಕಾಏಕಿ ಮೇಲಿನ ಮಹಡಿ ಕುಸಿದು ಒಬ್ಬ ಕಾರ್ಮಿಕ ಮೃತಪಟ್ಟು, ಮತ್ತೊಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ.
ಅಜರ್ ಉಲ್ ಹಕ್ ಮೃತ, ಸೆಂಥಿಲ್ ಗಾಯಾಳುವಾಗಿದ್ದಾರೆ. ಅವಘಡ ನಡೆದಾಗ ಕಟ್ಟಡ ಅವಶೇಷದಡಿಯಲ್ಲಿ ಸಿಲುಕಿ ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅಜರ್ ಉಲ್ ಹಕ್ ಮೃತಪಟ್ಟಿದ್ದು, ಮತ್ತೊಬ್ಬರಿಗೆ ಚಿಕಿತ್ಸೆ ಮುಂದುವರಿದಿದೆ.
ಇದನ್ನೂ ಓದಿ | Murder Case: ಹಣಕ್ಕಾಗಿ ಪೀಡಿಸುತ್ತಿದ್ದ ಕುಡುಕ ಮಗನನ್ನು ಅಪ್ಪನೇ ಆಯುಧದಿಂದ ತಲೆಗೆ ಹೊಡೆದು ಕೊಂದ
ಕಾಮಗಾರಿ ವೇಳೆ ಮೋರಿಯಲ್ಲಿ ಸಿಲುಕಿ ಕೂಲಿ ಕಾರ್ಮಿಕ ಸಾವು
ಬೆಂಗಳೂರು: ನಗರದ ಬಿನ್ನಿಮಿಲ್ ಸಮೀಪದ ಮಾರ್ಕಂಡೇಯ ಲೇಔಟ್‌ನಲ್ಲಿ ಮೋರಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದಾಗ ಮೋರಿಯೊಳಗೆ ಸಿಲುಕಿ ಕೂಲಿ ಕಾರ್ಮಿಕ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗೌರಿ ಪಾಳ್ಯ ನಿವಾಸಿ ಮಧುಸೂಧನ್ ಮೃತವ್ಯಕ್ತಿ. ಫೆಬ್ರವರಿ 19 ರಂದು ಬಿಬಿಎಂಪಿ ಮೋರಿ ಕೆಲಸ ಮಾಡಲು ವ್ಯಕ್ತಿಯನ್ನು ಮೇಸ್ತ್ರಿ ನೇಮಿಸಿಕೊಂಡಿದ್ದರು. ಆದರೆ, ಮೋರಿಯೊಳಗೆ ಕಾರ್ಮಿಕ ಮೃತಪಟ್ಟಿದ್ದಾನೆ. 9 ದಿನಗಳ ಮೃತದೇಹವನ್ನು ಹೊರತೆಗೆಯಲಾಗಿದ್ದು, ಜೆಜೆನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.