Site icon Vistara News

Online Fraud : ನಿಮ್ಮ ಮೊಬೈಲ್‌ಗೆ ಕಾಲ್‌ ಬಂದಾಗ ಈ ನಂಬರ್‌ ಒತ್ತಲೇಬೇಡಿ

online fraud

ಬೆಂಗಳೂರು: ಈ ನಯ ವಂಚಕರಿಗೆ (Online Fraud) ಮಾತಷ್ಟೇ ಬಂಡವಾಳ. ಹಣ ಲೂಟಿ ಮಾಡಲು ಇವರು ನಿಮ್ಮ ಮನೆಗೆ ರಾತ್ರೋರಾತ್ರಿ ನುಗ್ಗುವುದಿಲ್ಲ. ಬದಲಿಗೆ ದೂರದಲ್ಲಿ ಕುಳಿತುಕೊಂಡು ನಿಮ್ಮ‌ ಮೊಬೈಲ್‌ಗೆ ಒಂದು ಫೋನ್ ಕಾಲ್‌ ಮಾಡುತ್ತಾರೆ ಅಷ್ಟೇ. ಅವರು ಹೇಳುವ ಆ ಒಂದು ನಂಬರ್‌ ಅನ್ನು ನೀವೆನಾದರೂ ಮೊಬೈಲ್‌ನಲ್ಲಿ ಒತ್ತಿದ್ದರೆ ಮುಗಿತು. ಲಕ್ಷ ಲಕ್ಷ ಕ್ಷಣಾರ್ಧದಲ್ಲಿ ಮಯವಾಗುತ್ತದೆ. ಹೀಗೆ ಬೆಂಗಳೂರಿನ ವ್ಯಕ್ತಿಯೊಬ್ಬರು ಹಣವನ್ನು ಕಳೆದುಕೊಂಡಿದ್ದಾರೆ.

ಬಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪರಮೇಶ್ವರಯ್ಯ ಎಂಬುವವರು ಹಂತ ಹಂತವಾಗಿ ಹಣವನ್ನು ಕಳೆದುಕೊಂಡಿದ್ದಾರೆ. ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿ ವಂಚನೆ ಆಗಿದೆ ಎಂದು ಹೇಳಿ ಎಚ್ಚರಿಕೆ ನೀಡುವ ನೆಪದಲ್ಲಿ ಕಸ್ಟಮರ್ ಕೇರ್ ಹೆಸರಿನಲ್ಲಿ ಫೋನ್‌ ಕಾಲ್‌ ಮಾಡುತ್ತಾರೆ.

ಇದನ್ನೂ ಓದಿ: Peacock Attack : ಎಲ್ಲ ಆಯ್ತು ಈಗ ನವಿಲು ದಾಳಿ; ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅಟ್ಯಾಕ್

ನಿಮ್ಮ ಕ್ರೆಡಿಟ್ ಕಾರ್ಡ್‌ನಿಂದ ಅವ್ಯವವಹಾರ ಆಗಿದೆ. ಇದನ್ನು ಸಕ್ರಿಯಗೊಳಿಸಲು ಒಂದನ್ನು ಒತ್ತಿ, ನಿಷ್ಕ್ರಿಯಗೊಳಿಸಲು 9 ಅನ್ನು ಒತ್ತಿ ಎಂದಿದ್ದಾರೆ. ಇದನ್ನು ನಂಬಿ ಪರಮೇಶ್ವರಯ್ಯ ಮೊಬೈಲ್‌ನಲ್ಲಿ 9 ಅನ್ನು ಒತ್ತಿದ್ದರೆ, ಕೂಡಲೇ 9,999 ಹಣ ಕಡಿತವಾಗಿದೆ. ನಂತರ ಹಂತ ಹಂತವಾಗಿ 79, 999 ರೂ ಹಣವು ಅಕೌಂಟ್‌ನಿಂದ ಕಡಿತವಾಗಿದೆ. ಸದ್ಯ ವಂಚನೆ ಆಗಿದ್ದು ತಿಳಿಯುತ್ತಿದ್ದಂತೆ ಪರಮೇಶ್ಚರಯ್ಯ ಬ್ಯಾಂಕ್‌ ಸಿಬ್ಬಂದಿಗೆ ಕರೆ ಮಾಡಿ ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡಿಸಿದ್ದಾರೆ. ಈ ಸಂಬಂಧ ಬಗಲಗುಂಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಲಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version