Site icon Vistara News

Operation Leopard | ಗಾವರಾಳದ ಜನರ ನಿದ್ದೆಗೆಡಿಸಿದ್ದ ಚಿರತೆ ಬೋನಿನಲ್ಲಿ ಸೆರೆ

Leopard

ಕೊಪ್ಪಳ: ಇಲ್ಲಿನ ಕುಕನೂರು ತಾಲೂಕಿನ ಗಾವರಾಳ ಬಳಿ ಚಿರತೆಯೊಂದು ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿತ್ತು. ಚಿರತೆ ಸೆರೆಗೆ ನಾನಾ ಕಸರತ್ತು ನಡೆಸಿದ್ದ(Operation Leopard) ಅರಣ್ಯಾಧಿಕಾರಿಗಳು ಕ್ವಾರಿಯಲ್ಲಿ ಬೋನು ಇರಿಸಿದ್ದರು.

ಕಳೆದ 15 ದಿನಗಳಿಂದ ಗಾವರಾಳ ಬಳಿಯ ಗ್ರಾನೈಟ್ ಕ್ವಾರಿಗಳಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆ ಭಾನುವಾರ ಸೆರೆಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಇರಿಸಿದ್ದ ಬೋನಿಗೆ ಭಾನುವಾರ ಚಿರತೆ ಬಿದ್ದಿದ್ದು, ಗಾವರಾಳ ಹಾಗೂ ಸುತ್ತಮುತ್ತಲ ಗ್ರಾಮಗಳ ಜನತೆ ನಿಟ್ಟುಸಿರು ಬಿಡುವಂತಾಗಿದೆ.

ಇದನ್ನೂ ಓದಿ | Operation Leopard | ಮಿಂಚಾಗಿ ಬಂದು ಮರೆಯಾಗುತ್ತಿರುವ ಚಿರತೆ ಸೆರೆಗೆ ವರುಣ ಅಡ್ಡಿ

Exit mobile version