Site icon Vistara News

Opposition Meet: ನಾಳೆ ಬೆಂಗಳೂರಿನಲ್ಲಿ ಪ್ರತಿಪಕ್ಷಗಳ ಸಭೆ; ಜೆಡಿಎಸ್‌, ಆಪ್‌ ಭಾಗಿ? ತಿರುಗೇಟಿಗೆ ಬಿಜೆಪಿ ಸಜ್ಜು

Opposition Party Leaders To Meet In Bengaluru

Opposition Key Meet In Bengaluru, NDA Meet Comes On The Same Day

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಶತಾಯ ಗತಾಯ ಬಿಜೆಪಿಯನ್ನು ಸೋಲಿಸಲು ಪ್ರತಿಪಕ್ಷಗಳು ಸಜ್ಜಾಗಿವೆ. ಲೋಕಸಭೆ ಚುನಾವಣೆಗೆ ರಣತಂತ್ರ, ಪ್ರತಿಪಕ್ಷಗಳಲ್ಲಿ ಒಗ್ಗಟ್ಟು ಮೂಡಿಸುವುದು ಸೇರಿ ಹಲವು ವಿಷಯಗಳ ಕುರಿತು ಬೆಂಗಳೂರಿನಲ್ಲಿ ಸೋಮವಾರದಿಂದ ಎರಡು ದಿನ (ಜುಲೈ 17 ಹಾಗೂ 18) ಪ್ರತಿಪಕ್ಷಗಳ ಸಭೆ (Opposition Meet) ನಡೆಯಲಿದೆ. ಪ್ರತಿಪಕ್ಷಗಳ ಸಭೆಗೆ ಯಾವ ಪಕ್ಷ ಹಾಜರಾಗುತ್ತವೆ, ಯಾವ ಪಕ್ಷಗಳು ಇಲ್ಲ ಎಂಬ ಕುರಿತು ಇನ್ನೂ ಅಂತಿಮವಾಗಿಲ್ಲ. ಇದರ ಬೆನ್ನಲ್ಲೇ, ಎನ್‌ಡಿಎ ಮೈತ್ರಿಕೂಟವೂ ಜುಲೈ 18ರಂದು ಸಭೆ ನಡೆಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.

ಎಂಟು ಪಕ್ಷಗಳಿಂದ ಬೆಂಬಲ ಘೋಷಣೆ

ಕಾಂಗ್ರೆಸ್‌ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಪಕ್ಷಗಳ ನಾಯಕರಿಗೆ ಆಹ್ವಾನ ನೀಡಿದ್ದಾರೆ. ಅದರಂತೆ, ಎಂಡಿಎಂಕೆ, ಕೇರಳ ಕಾಂಗ್ರೆಸ್‌ (ಜೋಸೆಫ್)‌, ಕೆಡಿಎಂಕೆ ಸೇರಿ ಹಲವು ಪ್ರತಿಪಕ್ಷಗಳು ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿವೆ. ಡಿಎಂಕೆ, ಜೆಡಿಯು, ಆರ್‌ಜೆಡಿ ಸೇರಿ ಹಲವು ಪ್ರಮುಖ ಪಕ್ಷಗಳ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಸಭೆ ಕುರಿತು ಪರಮೇಶ್ವರ್‌ ಹೇಳಿದ್ದೇನು?

ಆಪ್‌, ಜೆಡಿಎಸ್‌, ಎನ್‌ಸಿಪಿ ಕತೆ ಏನು?

ಪ್ರತಿಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳುವ ದಿಸೆಯಲ್ಲಿ ಆಮ್‌ ಆದ್ಮಿ ಪಕ್ಷವು ಶಾಸಕಾಂಗ ಪಕ್ಷದ ಸಭೆ ಕರೆದಿದೆ. ಶಾಸಕಾಂಗ ಪಕ್ಷದ ಸಭೆ ಬಳಿಕ ಅದು ಅಂತಿಮ ನಿರ್ಧಾರ ಪ್ರಕಟಿಸಲಿದೆ. ಇನ್ನು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ಜೆಡಿಎಸ್‌ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಇದುವರೆಗೆ ಪ್ರತಿಪಕ್ಷಗಳ ಸಭೆಯಲ್ಲಿ ಪಾಳ್ಗೊಳ್ಳುವ ಕುರಿತು ನಿರ್ಧಾರ ತಿಳಿಸಿಲ್ಲ. ಇನ್ನು, ಅಜಿತ್‌ ಪವಾರ್‌ ಅವರು ಶಾಸಕರನ್ನು ಸೆಳೆದುಕೊಂಡು ಹೋದ ಬಳಿಕ ಎನ್‌ಸಿಪಿ ಇಬ್ಭಾಗವಾಗಿದ್ದು, ಆರ್‌ಜೆಡಿ ವರಿಷ್ಠ ನಾಯಕ ಶರದ್‌ ಪವಾರ್‌ ಅವರು ಸಭೆಯಲ್ಲಿ ಪಾಲ್ಗೊಳ್ಳುತ್ತಾರೋ, ಇಲ್ಲವೋ ಎಂಬ ಪ್ರಶ್ನೆ ಮೂಡಿದೆ.

ಲೋಕಸಭೆ ಚುನಾವಣೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿ, ಬಿಜೆಪಿಯನ್ನು ಸೋಲಿಸುವ ದಿಸೆಯಲ್ಲಿ ಜೂನ್‌ 23ರಂದು ಬಿಹಾರದ ಪಟನಾದಲ್ಲಿ ಮೊದಲ ಬಾರಿಗೆ ಪ್ರತಿಪಕ್ಷಗಳ ಸಭೆ ನಡೆದಿತ್ತು. ಬಿಹಾರ ಸಿಎಂ ನಿತೀಶ್‌ ಕುಮಾರ್‌ ನೇತೃತ್ವದಲ್ಲಿ ಸಭೆ ನಡೆದಿತ್ತು. ಇದರಲ್ಲಿ ಹಲವು ಪ್ರತಿಪಕ್ಷಗಳ ನಾಯಕರು ಪಾಲ್ಗೊಂಡು, ಒಗ್ಗಟ್ಟಿನ ಮಂತ್ರ ಜಪಿಸಿದ್ದರು. ಈಗ ಎರಡನೇ ಸಭೆ ನಡೆಯುತ್ತಿದ್ದು, ಇಲ್ಲೂ ಒಗ್ಗಟ್ಟು, ರಣತಂತ್ರ, ಇನ್ನಷ್ಟು ಹೊಸ ಪಕ್ಷಗಳನ್ನು ಸೆಳೆಯುವುದು ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಬಸವರಾಜ ಬೊಮ್ಮಾಯಿ ರಿಯಾಕ್ಷನ್

ಇದನ್ನೂ ಓದಿ: Maharashtra Politics: ಪ್ರತಿಪಕ್ಷ ಕೂಟಕ್ಕೆ ಬಿಜೆಪಿಯಿಂದ ‘ಮಹಾ’ ಹೊಡೆತ; ಎನ್​ಸಿಪಿಯ 9 ಶಾಸಕರಿಗೆ ಮಂತ್ರಿಗಿರಿ

ರಣತಂತ್ರ ರೂಪಿಸಿದ ಬಿಜೆಪಿ

ಪ್ರತಿಪಕ್ಷಗಳು ನಡೆಸುವ ದಿನದಂದೇ ಅಂದರೆ, ಜುಲೈ 18ರಂದು ಎನ್‌ಡಿಎ ಕೂಡ ಮೈತ್ರಿ ಪಕ್ಷಗಳ ಸಭೆ ನಡೆಸಲು ತೀರ್ಮಾನಿಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಈಗಾಗಲೇ ಸಭೆಯಲ್ಲಿ ಭಾಗವಹಿಸುವಂತೆ ಲೋಕ ಜನಶಕ್ತಿ ಪಕ್ಷದ (ರಾಮ್‌ವಿಲಾಸ್‌ ಪಾಸ್ವಾನ್) ನಾಯಕ ಚಿರಾಗ್‌ ಪಾಸ್ವಾನ್‌ ಅವರನ್ನು ಆಹ್ವಾನಿಸಿದೆ. ಇನ್ನು, ಉತ್ತರ ಪ್ರದೇಶದಲ್ಲಿ ಓಂ ಪ್ರಕಾಶ್ ರಾಜಭರ್ ಅವರ ಸುಹೇಲ್​ದೇವ್​ ಭಾರತೀಯ ಸಮಾಜ ಪಕ್ಷ (Suheldev Bharatiya Samaj Party-SBSP) ಮತ್ತೆ ಎನ್​ಡಿಎ ಒಕ್ಕೂಟವನ್ನು ಸೇರಿಕೊಂಡಿದೆ. ಸಭೆಗೂ ಮುನ್ನವೇ ಬಿಜೆಪಿಗೆ ಸಿಕ್ಕ ಮುನ್ನಡೆ ಇದಾಗಿದೆ. ಎನ್‌ಡಿಎ ಮೈತ್ರಿಕೂಟಕ್ಕೆ ಹೊಸ ಪಕ್ಷಗಳ ಸೇರ್ಪಡೆ, ಮೈತ್ರಿಕೂಟದಲ್ಲಿ ಒಗ್ಗಟ್ಟು, ಪ್ರತಿಪಕ್ಷಗಳಿಗೆ ತಿರುಗೇಟು ಸೇರಿ ಹಲವು ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Exit mobile version