Site icon Vistara News

Organ Donation | ಮೆದುಳು ನಿಷ್ಕ್ರಿಯ: ಅಂಗಾಂಗ ದಾನ ಮಾಡಿದ ಕುಟುಂಬ; ಗೌರವ ನಮನ ಸಲ್ಲಿಸಿದ ಆಸ್ಪತ್ರೆ ಸಿಬ್ಬಂದಿ

ಬೆಂಗಳೂರು: ಮನೆಯ ಆಧಾರ ಸ್ತಂಭವಾಗಿದ್ದ ಯಜಮಾನನನ್ನು ಕಳೆದುಕೊಂಡು ಆ ಕುಟುಂಬ ಸದಸ್ಯರು ಕುಸಿದು ಹೋಗಿದ್ದರು. ಅಗಲಿಕೆಯ ಅತೀವ ನೋವಿನಲ್ಲೂ ಮೆದುಳು ನಿಷ್ಕ್ರಿಯಗೊಂಡಿದ್ದ ಪತಿಯ ಅಂಗಾಂಗ ದಾನ (Organ Donation) ಮಾಡುವ ಮೂಲಕ ಸಾರ್ಥಕತೆ ಮರೆಯಲಾಗಿದೆ.

ಅನುಭವನಗರದ ಮೂಡಲಪಾಲ್ಯದ ನಿವಾಸಿ ಶ್ರೀನಿವಾಸ್ (54) ಜ.9ರಂದು ಅಧಿಕ ರಕ್ತದೊತ್ತಡದಿಂದ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಸೆಂಟರ್‌ಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಜನವರಿ 14ರಂದು ಮೆದುಳು ನಿಷ್ಕ್ರಿಯಗೊಂಡಿದ್ದರ ಬಗ್ಗೆ ವೈದ್ಯರು ಖಚಿತಪಡಿಸಿದ್ದರು. ಬಳಿಕ ಮೃತರ ಪತ್ನಿ ಹಾಗೂ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಸಮ್ಮತಿಸಿದ್ದರು.

ಅದರಂತೆ ಹೃದಯ ಕವಾಟುಗಳು, ಯಕೃತ್ತು, ಮೂತ್ರಪಿಂಡ, ಕಾರ್ನಿಯಾಗಳ ದಾನ ಮಾಡಿದ್ದು, ಟ್ರಾಮಾ ಸೆಂಟರ್ ಟಿಇಸಿಸಿ ಮತ್ತು ಬಿಎಂಸಿಆರ್‌ಐ ತಂಡದಿಂದ ಯಶಸ್ವಿ ಅಂಗ ಪಡೆಯುವ ಪ್ರಕ್ರಿಯೆ ಮುಗಿದಿದೆ. ಅಂಗಾಂಗ ದಾನದ ಬಳಿಕ ವಿಕ್ಟೋರಿಯ ಆಸ್ಪತ್ರೆ ಸಿಬ್ಬಂದಿ, ವೈದ್ಯರಿಂದ ಮೃತ ವ್ಯಕ್ತಿಗೆ ಹಾಗೂ ಕುಟುಂಬದವರಿಗೆ ಚಪ್ಪಾಳೆ ತಟ್ಟುವ ಮೂಲಕ ಗೌರವ ನಮನ ಸಲ್ಲಿಸಿದರು.

ಇದನ್ನೂ ಓದಿ |40% Commission | ಮತ್ತೆ ಸಿಡಿದೆದ್ದ ಗುತ್ತಿಗೆದಾರರು: ಜ. 18ರಿಂದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ, 19ರಂದು ಕೋರ್ಟ್‌ಗೆ ದಾಖಲೆ

Exit mobile version