Organ Donation | ಮೆದುಳು ನಿಷ್ಕ್ರಿಯ: ಅಂಗಾಂಗ ದಾನ ಮಾಡಿದ ಕುಟುಂಬ; ಗೌರವ ನಮನ ಸಲ್ಲಿಸಿದ ಆಸ್ಪತ್ರೆ ಸಿಬ್ಬಂದಿ - Vistara News

ಆರೋಗ್ಯ

Organ Donation | ಮೆದುಳು ನಿಷ್ಕ್ರಿಯ: ಅಂಗಾಂಗ ದಾನ ಮಾಡಿದ ಕುಟುಂಬ; ಗೌರವ ನಮನ ಸಲ್ಲಿಸಿದ ಆಸ್ಪತ್ರೆ ಸಿಬ್ಬಂದಿ

ಪತಿಯ ಅಗಲಿಕೆಯ ನೋವಿನಲ್ಲೂ ಅಂಗಾಂಗ ದಾನದ (Organ Donation) ಮೂಲಕ ಸಾರ್ಥಕತೆ ಮರೆಯಲಾಗಿದೆ. ಹಲವರ ಬಾಳಿಗೆ ಬೆಳಕಾದ ಕುಟುಂಬಕ್ಕೆ ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿ, ವೈದ್ಯರು ಗೌರವ ನಮನ ಸಲ್ಲಿಸಿದ್ದರು.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮನೆಯ ಆಧಾರ ಸ್ತಂಭವಾಗಿದ್ದ ಯಜಮಾನನನ್ನು ಕಳೆದುಕೊಂಡು ಆ ಕುಟುಂಬ ಸದಸ್ಯರು ಕುಸಿದು ಹೋಗಿದ್ದರು. ಅಗಲಿಕೆಯ ಅತೀವ ನೋವಿನಲ್ಲೂ ಮೆದುಳು ನಿಷ್ಕ್ರಿಯಗೊಂಡಿದ್ದ ಪತಿಯ ಅಂಗಾಂಗ ದಾನ (Organ Donation) ಮಾಡುವ ಮೂಲಕ ಸಾರ್ಥಕತೆ ಮರೆಯಲಾಗಿದೆ.

ಅನುಭವನಗರದ ಮೂಡಲಪಾಲ್ಯದ ನಿವಾಸಿ ಶ್ರೀನಿವಾಸ್ (54) ಜ.9ರಂದು ಅಧಿಕ ರಕ್ತದೊತ್ತಡದಿಂದ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಸೆಂಟರ್‌ಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಜನವರಿ 14ರಂದು ಮೆದುಳು ನಿಷ್ಕ್ರಿಯಗೊಂಡಿದ್ದರ ಬಗ್ಗೆ ವೈದ್ಯರು ಖಚಿತಪಡಿಸಿದ್ದರು. ಬಳಿಕ ಮೃತರ ಪತ್ನಿ ಹಾಗೂ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಸಮ್ಮತಿಸಿದ್ದರು.

Organ Donation

ಅದರಂತೆ ಹೃದಯ ಕವಾಟುಗಳು, ಯಕೃತ್ತು, ಮೂತ್ರಪಿಂಡ, ಕಾರ್ನಿಯಾಗಳ ದಾನ ಮಾಡಿದ್ದು, ಟ್ರಾಮಾ ಸೆಂಟರ್ ಟಿಇಸಿಸಿ ಮತ್ತು ಬಿಎಂಸಿಆರ್‌ಐ ತಂಡದಿಂದ ಯಶಸ್ವಿ ಅಂಗ ಪಡೆಯುವ ಪ್ರಕ್ರಿಯೆ ಮುಗಿದಿದೆ. ಅಂಗಾಂಗ ದಾನದ ಬಳಿಕ ವಿಕ್ಟೋರಿಯ ಆಸ್ಪತ್ರೆ ಸಿಬ್ಬಂದಿ, ವೈದ್ಯರಿಂದ ಮೃತ ವ್ಯಕ್ತಿಗೆ ಹಾಗೂ ಕುಟುಂಬದವರಿಗೆ ಚಪ್ಪಾಳೆ ತಟ್ಟುವ ಮೂಲಕ ಗೌರವ ನಮನ ಸಲ್ಲಿಸಿದರು.

ಇದನ್ನೂ ಓದಿ |40% Commission | ಮತ್ತೆ ಸಿಡಿದೆದ್ದ ಗುತ್ತಿಗೆದಾರರು: ಜ. 18ರಿಂದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ, 19ರಂದು ಕೋರ್ಟ್‌ಗೆ ದಾಖಲೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

How Much Salt Is Too Much: ಉಪ್ಪು ಅತಿಯಾಗದಿರಲಿ; ದಿನಕ್ಕೆ ನಾವೆಷ್ಟು ಉಪ್ಪು ತಿನ್ನುತ್ತಿದ್ದೇವೆ ಗೊತ್ತಿರಲಿ

How Much Salt Is Too Much ಉಪ್ಪು ಇಂದು ಅನೇಕ ಇತರ ಆಹಾರಗಳ ಮೂಲಕವೂ ನಮ್ಮ ದೇಹ ಸೇರುತ್ತದೆ. ಅಗತ್ಯಕ್ಕಿಂತ ಹೆಚ್ಚಾಗಿ ನಾವು ಉಪ್ಪನ್ನು ನಮ್ಮ ದೇಹಕ್ಕೆ ನೀಡುತ್ತಿದ್ದೇವೆ. ಹೊರಗೆ ಪ್ಯಾಕೆಟ್ಟುಗಳಲ್ಲಿ ದೊರಕುವ ಕುರುಕಲು ಸೇರಿದಂತೆ ನಾನಾ ಆಹಾರ ವಸ್ತುಗಳಲ್ಲಿ ಇಂದು ಅಗತ್ಯಕ್ಕಿಂತ ಹೆಚ್ಚೇ ಉಪ್ಪು ಇರುತ್ತದೆ. ಹೀಗಾಗಿ ನಮ್ಮ ಬದಲಾದ ಆಹಾರ ಶೈಲಿಯ ಪರಿಣಾಮವಾಗಿ ಇಂದು ನಮ್ಮ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚೇ ಉಪ್ಪು ಸೇರುವ ಮೂಲಕ ಇದರ ವ್ಯತಿರಿಕ್ತ ಪರಿಣಾಮಗಳನ್ನೂ ನಾವು ಎದುರಿಸುತ್ತಿದ್ದೇವೆ.

VISTARANEWS.COM


on

How Much Salt Is Too Much
Koo

ಉಪ್ಪು ಎಂಬ ವಸ್ತು ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗ. ಉಪ್ಪಿಲ್ಲದೆ ಒಂದು ದಿನವನ್ನು ದೂಡುವುದು ಕೂಡಾ ಕಷ್ಟವೇ ಸರಿ. ಉಪ್ಪಿಗಿಂತ ಬೇರೆ ರುಚಿಯೇ ಇಲ್ಲ ಎಂದು ಹಿರಿಯರು ಹೇಳಿದ್ದು ಇದಕ್ಕಾಗಿಯೇ. ಉಪ್ಪಿನ ರುಚಿ, ಉಪ್ಪು ಹಾಕಿದ ಆಹಾರದ ಜೊತೆಗಿದ್ದರೆ ತಿಳಿದೀತು. ಉಪ್ಪಿಲ್ಲದ ಊಟ ನೀರಸವಾಗಿ, ಬದುಕೇ ವ್ಯರ್ಥವಾಗಿ ಕಂಡೀತು. ಇಂತಹ ಉಪ್ಪು ನಮಗೆ ನಿತ್ಯ ಜೀವನದಲ್ಲಿ ಕೇವಲ ಊಟಕ್ಕೆ, ಆಹಾರಕ್ಕೆ ಮಾತ್ರವೇ ಅಲ್ಲ, ಹಲವಾರು ಕೆಲಸಗಳಿಗೂ ಸಹಾಯ ಮಾಡುತ್ತದೆ. ವಸ್ತುಗಳನ್ನು ಶುದ್ಧವಾಗಿ ತೊಳೆಯಲು ಉಪ್ಪು ಕೆಲಸಕ್ಕೆ ಬರುತ್ತದೆ. ಆಹಾರವನ್ನು ಹೆಚ್ಚು ಕಾಲ ಕೆಡದಂತೆ ಸಂರಕ್ಷಿಸಿಡುವಲ್ಲಿಯೂ ಉಪ್ಪು ಬಹುಮುಖ್ಯ ಪಾತ್ರ ವಹಿಸುತ್ತದೆ. ಉಪ್ಪಿನಲ್ಲಿರುವ ಸೋಡಿಯಂ ಹಾಗೂ ಇತರ ಖನಿಜಾಂಶಗಳು ನಮ್ಮ ದೇಹಕ್ಕೆ ಪೋಷಣೆಯನ್ನು ಒದಗಿಸುತ್ತದೆ. ಇಂತಹ ಉಪ್ಪು ಇಂದು ಅನೇಕ ಇತರ ಆಹಾರಗಳ ಮೂಲಕವೂ ನಮ್ಮ ದೇಹ ಸೇರುತ್ತದೆ. ಅಗತ್ಯಕ್ಕಿಂತ ಹೆಚ್ಚಾಗಿ ನಾವು ಉಪ್ಪನ್ನು ನಮ್ಮ ದೇಹಕ್ಕೆ ನೀಡುತ್ತಿದ್ದೇವೆ. ಹೊರಗೆ ಪ್ಯಾಕೆಟ್ಟುಗಳಲ್ಲಿ ದೊರಕುವ ಕುರುಕಲು ಸೇರಿದಂತೆ ನಾನಾ ಆಹಾರ ವಸ್ತುಗಳಲ್ಲಿ ಇಂದು ಅಗತ್ಯಕ್ಕಿಂತ ಹೆಚ್ಚೇ ಉಪ್ಪು ಇರುತ್ತದೆ. ಹೀಗಾಗಿ ನಮ್ಮ ಬದಲಾದ ಆಹಾರ ಶೈಲಿಯ ಪರಿಣಾಮವಾಗಿ ಇಂದು ನಮ್ಮ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚೇ ಉಪ್ಪು ಸೇರುವ ಮೂಲಕ ಇದರ ವ್ಯತಿರಿಕ್ತ ಪರಿಣಾಮಗಳನ್ನೂ ನಾವು ಎದುರಿಸುತ್ತಿದ್ದೇವೆ. ಹೃದ್ರೋಗ, ಹೈಪರ್‌ಟೆನ್ಶನ್‌ ಸೇರಿದಂತೆ ಹಲವು ಸಮಸ್ಯೆಗಳು ಸಣ್ಣ ವಯಸ್ಸಿನಲ್ಲೇ ಎಡತಾಕುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಾರ ಒಬ್ಬ ಆರೋಗ್ಯವಂತ ದಿನಕ್ಕೆ ೫ ಗ್ರಾಂಗಿಂತ ಹೆಚ್ಚು ಸೋಡಿಯಂ ಸೇವಿಸಬಾರದು. ಐಸಿಎಂಆರ್‌ ಹೇಳುವಂತೆ ಒಬ್ಬನಿಗೆ ಪ್ರತಿನಿತ್ಯ ೧.೧ರಿಂದ ೩.೩ ಗ್ರಾಂ ಸೋಡಿಯಂ ಅಥವಾ ೨.೮ರಿಂದ ೮.೩ ಗ್ರಾಂ ಸೋಡಿಯಂ ಕ್ಲೋರೈಡ್‌ ಅಗತ್ಯವಿದೆ. ಆದರೆ, ಸದ್ಯ ನಾವೆಲ್ಲರೂ ನಮ್ಮ ದೇಹಕ್ಕೆ ನೀಡುತ್ತಿರುವ ಸೋಡಿಂ ಇದರ ದುಪ್ಪಟ್ಟಿದೆ. ಆಧುನೀಕರಣ, ಆಧುನಿಕ ಆಹಾರ ಶೈಲಿಯ ಪರಿಣಾಮದಿಂದ ನಾವು ನಮ್ಮ ದೇಹಕ್ಕೆ ಅಗತ್ಯವಿರುವ ಸೋಡಿಯಂಗಿಂತ ಹೆಚ್ಚೇ ಸೋಡಿಯಂ ತಿನ್ನುವ ಕಾರಣ ಈ ಬಗ್ಗೆ ನಾವು ಗಂಭೀರವಾಗಿ ಯೋಚನೆ ಮಾಡಬೇಕಿದೆ.
ಹಾಗಾದರೆ, ಸೋಡಿಯಂ ನಮ್ಮ ದೇಹಕ್ಕೆ ಅನಗತ್ಯವಾಗಿ ಸೇರದಂತೆ ಮಾಡಲು ನಾವು ಯಾವ ಕ್ರಮ ಕೈಗೊಳ್ಳಬಹುದು ಎಂಬ ಪ್ರಶ್ನೆ ನಿಮ್ಮದಾಗಿದ್ದರೆ, ಈ ಕೆಲವು ಕ್ರಮಗಳನ್ನು ನೀವು ಗಂಭೀರವಾಗಿ (How Much Salt Is Too Much) ಪರಿಗಣಿಸಬಹುದು.

Salt Effect On Body
  • ಬೇಳೆಕಾಳುಗಳಲ್ಲಿ ಸೋಡಿಯಂ ಅತ್ಯಂತ ಕಡಿಮೆ ಇದೆ. ಇವುಗಳಲ್ಲಿ ಆರೋಗ್ಯಕ್ಕೆ ಅತ್ಯಂತ ಅಗತ್ಯವಾದ ಪ್ರೊಟೀನ್‌, ಪೊಟಾಶಿಯಂ, ಪಾಸ್ಪರಸ್‌ ಹಾಗೂ ನಾರಿನಂಶವಿದೆ. ಹಾಗಾಗಿ, ಬೇಳೆ ಕಾಳುಗಳ ಸೇವನೆಯನ್ನು ಹೆಚ್ಚು ಮಾಡಿ. ಮಾಂಸ ಸೇವಿಸುವವರಾಗಿದ್ದರೆ, ಸಂಸ್ಕರಿಸಿದ ಮಾಂಸಕ್ಕೆ ಬದಲಾಗಿ ತಾಜಾ ಮಾಂಸವನ್ನೇ ಬಳಸಿ.
  • ತಾಜಾ ಹಾಲು, ಪನೀರ್‌, ಮೊಸರು ಇವುಗಳಲ್ಲಿ ಕಡಿಮೆ ಸೋಡಿಯಂ ಇರುತ್ತದೆ. ಸಂಸ್ಕರಿಸಿದ ಚೀಸ್‌ನಲ್ಲಿ ಹೆಚ್ಚು ಸೋಡಿಯಂ ಇರುತ್ತದೆ.
  • ಹಣ್ಣುಗಳು ಹಾಗೂ ತರಕಾರಿಗಳ ಪೈಕಿ, ಆಯಾ ಕಾಲಕ್ಕೆ ದೊರೆಯುವುದನ್ನೇ ಹೆಚ್ಚು ಬಳಸಿ. ಋತುಮಾನಕ್ಕೆ ಅನುಗುಣವಾಗಿ ದೊರೆಯುವ ತರಕಾರಿ ಹಣ್ಣುಗಳನ್ನು ಸೇವನೆ ಮಾಡಿ. ತಾಜಾ ಆಹಾರಗಳಲ್ಲಿ ಸೋಡಿಯಂ ಕಡಿಮೆ ಇರುತ್ತದೆ. ಸೋಡಿಯಂ ಕಡಿಮೆ ಇರುವ ಆಹಾರಗಳಲ್ಲಿ ಸಹಜವಾಗಿಯೇ ಪೊಟಾಶಿಯಂ ಹೆಚ್ಚು ಇರುತ್ತದೆ. ಪೊಟಾಶಿಯಂ ಹೈಪರ್‌ ಟೆನ್ಶನ್‌ ಸೇರಿದಂತೆ ಹಲವು ಸಮಸ್ಯೆಗೆ ಆರೋಗ್ಯಕರವಾದ ಪೋಷಕಾಂಶವಾಗಿದೆ. ಒಣಹಣ್ಣುಗಳನ್ನೂ ತಿನ್ನಬಹುದು. ಆದರೆ, ಒಣಹಣ್ಣುಗಳನ್ನು ಸಂಸ್ಕರಿಸಿ ಮಾಡಿದ ಆರೋಗ್ಯಕರದ ಹೆಸರಿನಲ್ಲಿ ಉಪ್ಪು ಸಕ್ಕರೆ ಸೇರಿಸಿದ ಪ್ಯಾಕೆಟ್ಟುಗಳ ಆಹಾರಗಳನ್ನು ಕಡಿಮೆ ಮಾಡಿ. ತಾಜಾ ಒಣಹಣ್ಣುಗಳಾಗಿದ್ದರೆ ಒಳ್ಳೆಯದೇ. ಟೊಮೆಟೋ ಕೆಚಪ್‌ಗಳು, ಸಾಸ್‌ಗಳು, ಡಿಪ್‌ಗಳು ಇತ್ಯಾದಿಗಳ ಬಳಕೆ ಆದಷ್ಟು ಕಡಿಮೆ ಮಾಡಿ.
  • ಪುಡಿ ಉಪ್ಪಾದರೂ ಸರಿ, ಹಿಮಾಲಯನ್‌ ಕಲ್ಲುಪ್ಪಾದರೂ ಸರಿ, ಉಪ್ಪು ಉಪ್ಪೇ. ಅದು ಅತಿಯಾಗಬಾರದು. ಹೀಗಾಗಿ, ಬಹುಮುಖ್ಯವಾಗಿ ನಿಯಂತ್ರಣ ಸಾಧಿಸಬೇಕಾದ ಆಹಾರ ಎಂದರೆ ಅದು ಕುರುಕಲು ತಿಂಡಿಗಳು. ಹೊರಗೆ ದೊರೆಯುವ ಚಿಪ್ಸ್‌ ಸೇರಿದಂತೆ ನಾನಾ ಬಗೆಯ ಆಕರ್ಷಕ ಕುರುಕಲು ತಿಂಡಿಗಳ ಬಳಕೆ ಆದಷ್ಟೂ ಕಡಿಮೆ ಮಾಡಿ. ಇದನ್ನು ನಿಯಂತ್ರಿಸಿದರೆ ನಿಮ್ಮ ದೇಹಕ್ಕೆ ಅಧಿಕವಾಗ ಸೇರುವ ಉಪ್ಪಿನ ಪ್ರಮಾಣ ಒಂದು ಹಂತಕ್ಕೆ ನಿಯಂತ್ರಣಕ್ಕೆ ಬರುತ್ತದೆ. ಹಾಗಂತ ಯಾವುದಕ್ಕೂ ಉಪ್ಪು ಹಾಕದೆ ತಿನ್ನಬೇಕಾಗಿಲ್ಲ. ಅಗತ್ಯ ಪ್ರಮಾಣದ ಉಪ್ಪು ದೇಹಕ್ಕೆ ಬೇಕೇ ಬೇಕು ಎಂಬುದೂ ನೆನಪಿನಲ್ಲಿರಲಿ.
Continue Reading

ಆರೋಗ್ಯ

Beer Side Effect: ಬಿಯರ್‌ ಕುಡಿದರೆ ತೂಕ ಹೆಚ್ಚುತ್ತದೆ ಎನ್ನುವುದು ನಿಜವೇ?

ಬೇಸಿಗೆಗೆ ತಂಪಾಗುವುದಕ್ಕೆ, ಮಳೆಗಾಲಕ್ಕೆ ಬೆಚ್ಚಗಿರುವುದಕ್ಕೆ, ಚಳಿಗಾಲದ ಶೀತ ಓಡಿಸುವುದಕ್ಕೆ… ಹೀಗೆ ಯಾವುದೇ ಕಾರಣಕ್ಕಾದರೂ ಬಿಯರ್‌ ಹಿಡಿದು ʻಚಿಯರ್ಸ್‌ʼ ಹೇಳುವವರಿದ್ದಾರೆ. ಆದರೆ ಬೇಡವೆಂದರೂ ಹೊರಗಿಣುಕಿ ಎಲ್ಲರೆದುರು ಮರ್ಯಾದೆಯನ್ನು ಹರಾಜು ಹಾಕುವ ʻಬಿಯರ್‌ ಬೆಲ್ಲಿʼಗಳಿಗೆ ಏನು ಮದ್ದು ಮಾಡುವುದು? ಇಷ್ಟಕ್ಕೂ ಬಿಯರ್‌ ಕುಡಿಯುವುದರಿಂದ ತೂಕ ಹೆಚ್ಚುವುದು ನಿಜವೇ? ಈ (Beer Side Effect) ಬರಹ ಓದಿ.

VISTARANEWS.COM


on

Beer Side Effect
Koo

ಬಿಯರ್‌ ಕೈಯಲ್ಲಿ ಹಿಡಿದು ʻಚಿಯರ್ಸ್‌ʼ ಹೇಳುವವರ ಸಂಖ್ಯೆ ಆಗಸದಲ್ಲಿನ ಚುಕ್ಕಿಗಳಂತೆ… ಎಣಿಸಲಾಗದು. ಮನದಲ್ಲಿರುವ ಭಾವ ಯಾವುದೇ ಇರಲಿ, ಅವೆಲ್ಲಕ್ಕೂ ಕೈಯಲ್ಲಿರುವ ಗ್ಲಾಸೇ ಮದ್ದು ಎಂದು ನಂಬಿದವರಿದ್ದಾರೆ. ಅಂದರೆ ಬೇಸರ, ಖುಷಿ, ಶೋಕ, ಉತ್ಸಾಹ, ಮುರಿದೋದ ಮನಸ್ಸು, ಆಫೀಸಿನ ಪ್ರಮೋಶನ್ನು ಮುಂತಾದ ಎಲ್ಲವಕ್ಕೂ ಇದೊಂದೇ ಪಥ್ಯ. ಬಿಯರನ್ನು ʻನಂಬಿ ಕೆಟ್ಟವರಿಲ್ಲʼ ಎಂಬುದು ಇವರ ನಿಷ್ಠೆಗೆ ಸಾಕ್ಷಿ. ಆದರೂ ತಂತಮ್ಮ ʻಹೊಟ್ಟೆಪಾಡನ್ನುʼ ನೋಡಿಕೊಳ್ಳಬೇಡವೇ? ಬೇಡವೆಂದರೂ ಹೊರಗಿಣುಕಿ ಎಲ್ಲರೆದುರು ಮರ್ಯಾದೆಯನ್ನು ಹರಾಜಾಕುವ ʻಬಿಯರ್‌ ಬೆಲ್ಲಿʼಗಳಿಗೆ ಏನು ಮದ್ದು ಮಾಡುವುದು? ಇಷ್ಟಕ್ಕೂ ಬಿಯರ್‌ ಕುಡಿಯುವುದರಿಂದ (Beer Side Effect) ತೂಕ ಹೆಚ್ಚುವುದು ನಿಜವೇ?

beer

ಏನಿದು ಬಿಯರ್‌?

ಬಿಯರ್‌ ಎಂದರೆ ಆಲ್ಕೋಹಾಲ್‌ ಅಲ್ಲವೇ ಅಲ್ಲ ಎಂದು ಯಾರಾದರೂ ನಂಬಿಸಲು ಯತ್ನಿಸಿದರೆ, ಯಾವುದಕ್ಕೂ ಇರಲಿ ಈ ವಿಷಯ ನಿಮ್ಮಲ್ಲಿ! ಗೋದಿ, ಬಾರ್ಲಿ ಮುಂತಾದ ಧಾನ್ಯಗಳಿಂದ ಸಿದ್ಧವಾಗುವ ಆಲ್ಕೋಹಾಲ್‌ ಇರುವಂಥ ಪೇಯವಿದು. ಮೊದಲಿಗೆ ಈ ಧಾನ್ಯಗಳನ್ನು ಹುರಿದು ಒಡೆದುಕೊಳ್ಳಲಾಗುತ್ತದೆ. ಅದನ್ನು ನೀರಿನಲ್ಲಿ ನೆನೆಸಿಟ್ಟು, ಅದರ ನೈಸರ್ಗಿಕ ಸಕ್ಕರೆಯಂಶವನ್ನು ಬೇರ್ಪಡಿಸಿ, ಸಂಸ್ಕರಿಸಿ, ಯೀಸ್ಟ್‌ ಸೇರಿಸಿ ಬಿಯರ್‌ ಸಿದ್ಧ ಮಾಡಲಾಗುತ್ತದೆ.
ಈ ಪ್ರಕ್ರಿಯೆಯಲ್ಲಿ ಆಲ್ಕೋಹಾಲ್‌ ಎಲ್ಲಿದೆ? ಯೀಸ್ಟ್‌ ಸೇರಿಸಿದ ನಂತರ ಇದರಲ್ಲಿ ಆಲ್ಕೋಹಾಲ್‌ ಮತ್ತು ಇಂಗಾಲದ ಡೈಆಕ್ಸೈಡ್‌ ಬಿಡುಗಡೆ ಆಗುತ್ತದೆ. ಸಾಮಾನ್ಯವಾಗಿ ಬಿಯರ್‌ನಲ್ಲಿ 4-6 ಶೇ. ಆಲ್ಕೋಹಾಲ್‌ ಇರುತ್ತದೆ. ಆದರೆ ಪಾನಪ್ರಿಯರ ಪಾಲಿಗೆ ಇದು ಏನೂ ಅಲ್ಲ! ಹಾಗಾಗಿ ಸ್ಟ್ರಾಂಗ್‌ ಬಿಯರ್‌ಗಳಿಗೆ ಬೇಡಿಕೆ ಹೆಚ್ಚು. ಇನ್ನು, ಶೇ. ೪೦ರಷ್ಟು ಆಲ್ಕೋಹಾಲ್‌ ಹೊಂದಿರುವ ಕಠೋರ ಬಿಯರ್‌ಗಳೂ ಲಭ್ಯವಿವೆ. ಇದರಲ್ಲಿ ಬಳಸುವ ಧಾನ್ಯ, ಆಲ್ಕೋಹಾಲ್‌ ಪ್ರಮಾಣ ವ್ಯತ್ಯಾಸವಾದಂತೆ ಬಿಯರ್‌ನ ರುಚಿ, ಬಣ್ಣಗಳೂ ಭಿನ್ನವಾಗುತ್ತವೆ. ಇದಿಷ್ಟು ಬಿಯರ್‌ನ ಪ್ರವರ. ಇದನ್ನು ಕುಡಿದರೆ ಡೊಳ್ಳು ಹೊಟ್ಟೆ ಗುಂಡಂದಿರಾಗುವುದು ಹೌದೇ? ಅರೆ! ಇದೇನು ಸುಮ್ಮನೆ ಹೇಳುವುದಲ್ಲ… ಕುಡಿದು ತಲೆ ಬೆಳ್ಳಗಾದವರ ಅನುಭವದ ಮಾತುಗಳಿವು. ಆಲ್ಕೋಹಾಲ್‌ ಪೇಯಗಳ ಕ್ಯಾಲರಿಗಳು ಹೆಚ್ಚು. ಅವೆಲ್ಲ ಶರೀರಕ್ಕೆ ಬೇಕಾಗುವಂಥ ಸತ್ವಗಳಲ್ಲದೆ, ಖಾಲಿ ಕ್ಯಾಲರಿಗಳು. ಇದರ ಸಮಸ್ಯೆಯೆಂದರೆ ಹೊಟ್ಟೆ ತುಂಬುವುದಿಲ್ಲ. ಅಂದರೆ ದೇಹಕ್ಕೆ ಕ್ಯಾಲರಿಗಳು ಹೋಗಿದ್ದು ಹೌದು, ಆದರೆ ಹೊಟ್ಟೆ ಹಸಿದೇ ಇರುತ್ತದೆ. ಹಾಗಾಗಿ ಈಗ ಕುಡಿದಿದ್ದು ಸಾಲದೆಂಬಂತೆ ಮತ್ತಷ್ಟು ತಿನ್ನುವುದು ಅನಿವಾರ್ಯ. ಜೊತೆಗೆ, ಈ ಪೇಯಗಳ ಜೊತೆಗೆ ತಿನ್ನುವುದೆಲ್ಲ, ಜಿಡ್ಡು ಮತ್ತು ಉಪ್ಪಿನ ತಿನಿಸುಗಳು. ಇವೆಲ್ಲವುಗಳ ಪರಿಣಾಮವೆಂದರೆ, ಅಗತ್ಯಕ್ಕಿಂತ ಅತಿ ಹೆಚ್ಚಿನ ಕ್ಯಾಲರಿ ಒಳಗೆ ಹೋಗುವುದು. ಜೊತೆಗೆ, ದೇಹದಲ್ಲಿ ಕೊಬ್ಬು ಕರಗಿಸುವ ಪ್ರಯತ್ನದಲ್ಲಿ ಇದ್ದವರಿಗೆ ಹಿನ್ನಡೆಯಾಗುವುದು. ನೋಡಿ, ಪಾನಪ್ರಿಯರ ಜೀವನಾನುಭವ ಸುಳ್ಳೇನಲ್ಲವಲ್ಲ!

ಇದನ್ನೂ ಓದಿ: Drinks for Summer: ಬೇಸಿಗೆಯಲ್ಲಿ ತಂಪಾಗಿರಬೇಕೆ? ಈ ಪೇಯಗಳನ್ನು ತಪ್ಪದೇ ಕುಡಿಯಿರಿ

ಫೈಟೊಈಸ್ಟ್ರೋಜೆನ್‌

ಬಿಯರ್‌ನ ರುಚಿ ಹೆಚ್ಚಿಸುವುದಕ್ಕೆ ಹಾಪ್‌ ಗಿಡದ ಹೂವುಗಳನ್ನು ಬಳಸಲಾಗುತ್ತದೆ. ಈ ಹೂವುಗಳಿಗೆ ವಿಭಿನ್ನ ಕಹಿ ರುಚಿಯೊಂದಿದ್ದು, ಬಿಯರ್‌ನ ರುಚಿ ಹತ್ತಿಸುವ ಕಹಿಗೆ ಇದೇ ಕಾರಣ. ಇದರ ರುಚಿ ಹೆಚ್ಚಿಸಲು ಸಾಕಷ್ಟು ಸಿಹಿಯನ್ನು ಸೇರಿಸುವುದರಿಂದ, ಈ ಕಹಿ ರುಚಿಯನ್ನೂ ಇದಕ್ಕೆ ಸೇರಿಸಲಾಗುತ್ತದೆ. ಈ ಹಾಪ್‌ ಹೂವುಗಳಲ್ಲಿ ಫೈಟೊ ಈಸ್ಟ್ರೋಜೆನ್‌ಗಳು ಹೇರಳವಾಗಿವೆ. ಅಂದರೆ, ಸ್ತ್ರೀ ಹಾರ್ಮೋನುಗಳಾದ ಈಸ್ಟ್ರೋಜೆನ್‌ಗಳಂತೆ ವರ್ತಿಸುವ, ಆದರೆ ಅದಲ್ಲದ, ಅಂಶಗಳಿವು. ಇದರಲ್ಲಿರುವ ಗಮ್ಮತ್ತೇನೆಂದರೆ, ಪುರುಷರ ಹಾರ್ಮೋನುಗಳನ್ನು ಏರುಪೇರು ಮಾಡುವ ಈ ಫೈಟೊ ಈಸ್ಟ್ರೋಜೆನ್‌ಗಳು, ಹೊಟ್ಟೆಯ ಸುತ್ತಳತೆಯನ್ನು ಹಿಗ್ಗಿಸುತ್ತಾ ಹೋಗುತ್ತವೆ. ಅಲ್ಲಿಗೆ ತಪ್ಪು ಕುಡಿಯುವವರದ್ದಲ್ಲ, ಫೈಟೊಈಸ್ಟ್ರೋಜೆನ್‌ದು! ಹಾಗಾಗಿ, ಬಿಯರ್‌ ಕುಡಿಯುವುದು ಕೇವಲ ಹೊಟ್ಟೆಯ ಸುತ್ತಳತೆಯನ್ನು ಹೆಚ್ಚಿಸುವುದಷ್ಟೇ ಅಲ್ಲ, ದೇಹದ ಒಟ್ಟಾರೆ ತೂಕವನ್ನೂ ಏರಿಸುತ್ತದೆ. ಇದರಿಂದ ಹೃದಯದ ತೊಂದರೆಗಳು, ಯಕೃತ್ತಿನ ಸಮಸ್ಯೆಗಳು, ರಕ್ತದೊತ್ತಡ, ಮಧುಮೇಹ, ಟ್ರೈಗ್ಲಿಸರೈಡ್‌ ಹೆಚ್ಚಳ ಮುಂತಾದ ಹತ್ತಾರು ಸಮಸ್ಯೆಗಳು ಅಮರಿಕೊಳ್ಳುತ್ತವೆ. ಪಾನಪ್ರಿಯರಿಗೆ ಯಾವ ರೋಗ ಆದೀತು ಎಂಬುದನ್ನು ಆಯ್ದುಕೊಳ್ಳುವುದಕ್ಕೂ ದಾರಿಯಿಲ್ಲ. ಇರುವ ದಾರಿಯೆಂದರೆ, ಇಂಥವನ್ನೆಲ್ಲ ಮಿತಗೊಳಿಸುವುದು.

Continue Reading

Latest

Health Tips Kannada: ನೆನಪಿಡಿ, ನಾಲಿಗೆ ಬಯಸುವ ಆಹಾರಗಳನ್ನೆಲ್ಲ ನಿಮ್ಮ ಮಿದುಳು ಬಯಸದು!

Health Tips Kannada: ಆಧುನಿಕ ಜೀವನಶೈಲಿಯೂ ಒಂದಿಲ್ಲೊಂದು ಬಗೆಯ ತಿನಿಸುಗಳನ್ನು ವಾರಕ್ಕೆರಡು ಬಾರಿಯಾದರೂ ತಿನ್ನುವಂತೆ ಮಾಡುತ್ತದೆ. ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ತಿಳಿದಿದ್ದರೂ ಇವನ್ನು ನೋಡಿದಾಗ, ನೆನೆಸಿಕೊಂಡಾಗ ಬಾಯಲ್ಲಿ ನೀರೂರುವಂತೆ ಮಾಡುತ್ತವೆ. ಈ ಎಲ್ಲ ಆಹಾರಗಳು ನಮಗೆ ಆಯಾ ಕ್ಷಣಕ್ಕೆ ಸಂತೋಷವನ್ನು ನೀಡಬಲ್ಲವಾದರೂ, ನಿಜಕ್ಕೂ ನಮ್ಮ ಮಿದುಳಿಗೆ ಸಂತೋಷ ನೀಡಬಲ್ಲವೇ? ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Health Tips Kannada
Koo

ಬಗೆಬಗೆಯ (Health Tips Kannada) ಐಸ್‌ಕ್ರೀಂ, ಚಾಕೋಲೇಟ್‌, ಬ್ರೌನಿ ಡೋನಟ್‌ಗಳು, ಕೇಕ್‌-ಪೇಸ್ಟ್ರಿಗಳು, ಪಿಜ್ಜಾ ಬರ್ಗರ್‌ಗಳು ಬಾಯಲ್ಲಿ ನೀರೂರಿಸುವ ತಿನಿಸುಗಳೇ ಎಂಬುದರಲ್ಲಿ ಎರಡು ಮಾತಿಲ್ಲ. ಇವೆಲ್ಲ ನಮಗಿಷ್ಟವಿಲ್ಲ ಎಂದು ಹೇಳುವ ಮಂದಿ ಸಿಗುವುದು ಬಹಳ ಕಷ್ಟ. ಪುಟಾಣಿ ಮಕ್ಕಳಿಂದ ಹಿಡಿದು, ಮುದುಕರವರೆಗೆ ಎಲ್ಲರೂ ಇಂತಹ ಆಹಾರದ ಹೆಸರು ಕೇಳುತ್ತಲೇ ಬಾಯಿ ಚಪ್ಪರಿಸುವವರೇ. ಗೆಳೆಯರೆಲ್ಲ ಜೊತೆ ಸೇರಿದಾಗ, ಯಾಕೋ ಬೇಸರವೆನಿಸಿದಾಗ, ಬೇಸಿಗೆಯ ಬಿಸಿಲಿಗೆ, ಮಳೆಗಾಲದ ಚಳಿಗೆ ಅಥವಾ ʻಯಾರು ಅಡುಗೆ ಮಾಡುತ್ತಾರೆʼ ಎಂದೆನಿಸುವ ಉದಾಸೀನದ ಸಂಜೆಗಳಲ್ಲಿ ಈ ಎಲ್ಲ ತಿನಿಸುಗಳೂ ನಮ್ಮನ್ನು ತಮ್ಮ ಬಳಿಗೆ ಕರೆಯುತ್ತವೆ. ಆಧುನಿಕ ಜೀವನಶೈಲಿಯೂ ಕೂಡಾ ಇಂತಹ ಒಂದಿಲ್ಲೊಂದು ಬಗೆಯ ತಿನಿಸುಗಳನ್ನು ವಾರಕ್ಕೆರಡು ಬಾರಿಯಾದರೂ ತಿನ್ನುವಂತೆ ಮಾಡುತ್ತವೆ. ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ತಿಳಿದಿದ್ದರೂ ಇವನ್ನು ನೋಡಿದಾಗ,, ನೆನೆಸಿಕೊಂಡಾಗ ಬಾಯಲ್ಲಿ ನೀರೂರುವಂತೆ ಮಾಡುತ್ತವೆ. ಈ ಎಲ್ಲ ಆಹಾರಗಳು ನಮಗೆ ಆಯಾ ಕ್ಷಣಕ್ಕೆ ಸಂತೋಷವನ್ನು ನೀಡಬಲ್ಲವಾದರೂ, ನಿಜಕ್ಕೂ ನಮ್ಮ ಮಿದುಳಿಗೆ ಸಂತೋಷ ನೀಡಬಲ್ಲವೇ?

Health Tips Kannada

ಖಿನ್ನತೆಗೆ ದೂಡಬಹುದು:

ಖಂಡಿತಾ ಇಲ್ಲ. ಇವಾವುವೂ ನಿಮ್ಮ ಮಿದುಳಿಗೆ ಸಂತೋಷ ನೀಡುವ ಆಹಾರಗಳಲ್ಲ. ಬದಲಾಗಿ ನಿಮ್ಮ ದುಃಖವನ್ನು, ಬೇಸರವನ್ನು, ಏಕತಾನತೆಯ ಭಾವವನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ. ಹೌದು. ಆ ಕ್ಷಣದಲ್ಲಿ, ಸಂತೋಷ ಸಿಕ್ಕರೂ, ಖುಷಿಯೆನಿಸದರೂ, ಇಂತಹ ಆಹಾರಗಳಿಗೆ ನಮ್ಮನ್ನು ಬೇಸರಕ್ಕೆ ತಳ್ಳುವ ಗುಣವಿದೆ. ಇನ್ನಷ್ಟು ಮತ್ತಷ್ಟು ಇಂತಹ ಆಹಾರವನ್ನು ಬಯಸುವ ನಮ್ಮ ಮನಸ್ಸು ನಮ್ಮನ್ನು ಮತ್ತಷ್ಟು ಖಿನ್ನತೆಗೆ ದೂಡುತ್ತದೆ.

ಒಂದು ಅಧ್ಯಯನದ ಪ್ರಕಾರ, ಇಂತಹ ಆಹಾರಗಳನ್ನು ಅಥವಾ, ಪೋಷಕಾಂಶಗಳ ಕೊರತೆಯಿರುವ ಆಹಾರವನ್ನೇ ತಿಂದ ಮಂದಿಯ ಮಿದುಳಿನ ಆರೋಗ್ಯ ದಿನೇದಿನೇ ಹದಗೆಟ್ಟಿವೆ. ಅಷ್ಟೇ ಅಲ್ಲ, ಕಾಲಕ್ರಮೇಣ ಇಂತಹ ಆಹಾರ ತಿಂದವರು ಬಹುಬೇಗನೆ ಖಿನ್ನತೆ ಹಾಗೂ ಮಾನಸಿಕ ಒತ್ತಡದಂತಹ ಸಮಸ್ಯೆಗಳಿಗೆ ಒಳಗಾಗಿರುವುದು ಅದ್ಯಯನಗಳಿಂದ ತಿಳಿದುಬಂದಿದೆ.

ನಮಗೆ ಖುಷಿಯೆನಿಸುವ ಆಹಾರ ನಮ್ಮ ಮಿದುಳಿಗೆ ಖುಷಿಕೊಡಬೇಕೆಂದೇನಿಲ್ಲ. ಮಿದುಳಿಗೆ ಖುಷಿ ಕೊಡುವ ಆಹಾರಗಳೇ ಬೇರೆ. ತಾಜಾ ಹಣ್ಣುಗಳು ಹಾಗೂ ತರಕಾರಿಗಳು, ಬೇಳೆ ಕಾಳುಗಳು, ಹಿತಮಿತವಾಗಿ ಎಣ್ಣೆ (ಒಳ್ಳೆಯ ಎಣ್ಣೆ), ಮೊಳಕೆ ಕಾಳುಗಳು, ಮೀನು, ಒಣ ಬೀಜಗಳು, ಹಾಲು ಹಾಗೂ ಹಾಲಿನ ಉತ್ಪನ್ನಗಳು, ಮೊಟ್ಟೆ, ಕೋಳಿ ಇತ್ಯಾದಿ ನಮ್ಮ ಮಿದುಳನ್ನೂ ಆರೋಗ್ಯವಾಗಿ ಖಷಿಯಾಗಿ ಇಡುವಂತಹ ಆಹಾರಗಳು ಎಂದು ಅದ್ಯಯನ ಹೇಳುತ್ತದೆ.

Health Tips Kannada

ಮಿದುಳಿನ ಮೇಲೆ ಪರಿಣಾಮ:

ಈ ಎಲ್ಲ ಆಹಾರಗಳೂ ನಮ್ಮ ಮಿದುಳನ್ನು ಇದ್ದಕ್ಕಿದ್ದಂತೆ ಉಲ್ಲಾಸದಾಯಕವನ್ನಾಗಿ ಮಾಡಲಾಗದಿದ್ದರೂ, ಇವು ದೀರ್ಘಕಾಲಿಕವಾಗಿ ಮಿದುಳಿನ ಮೇಲೆ ಉತ್ತಮ ಪರಿಣಾಮ ಬೀರುವ ಸಾಮರ್ಥ್ಯ ಉಳ್ಳವಾಗಿವೆ. ಸಂಸ್ಕರಿಸಿದ ಆಹಾರಗಳು ಹಾಗೂ ಫಟಾಫಟ್‌ ಆಧುನಿಕ ತಿನಿಸುಗಳು ನಮ್ಮನ್ನು ದಿಢೀರ್‌ ಸೆಳೆವ ಹಾಗೂ ಉಲ್ಲಾಸದಾಯಕವನ್ನಾಗಿ ಮಾಡುವ ಗೂಣ ಹೊಂದಿದ್ದರೂ ನಮ್ಮ ದೇಹದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವಂತೆಯೇ ಮಿದುಳಿನ ಮೇಲೆಯೂ ಕೆಟ್ಟ ಪರಿಣಾಮ ಬೀರಬಲ್ಲವು.

ಇದನ್ನೂ ಓದಿ:Video Viral: ಮಹಿಳೆಯನ್ನು ತಿವಿದು ರಸ್ತೆಯುದ್ದಕ್ಕೂ ಎಳೆದೊಯ್ದ ಎಮ್ಮೆ! ವಿಡಿಯೊ ಇದೆ

ಮಾನಸಿಕವಾಗಿ ಖಿನ್ನತೆ ಹಾಗೂ ಇನ್ನಿತರ ಸಮಸ್ಯೆಗಳಿಂದ ಬಳಲುವ ಮಂದಿಯ ಆಹಾರಕ್ರಮ ಗಮನಿಸಿದರೂ ಇದಕ್ಕೆ ಪುಷ್ಟಿ ದೊರೆಯುತ್ತದೆ. ನಿಮ್ಮ ನಾಲಿಗೆ ಬಯಸುವ ಆಹಾರಗಳನ್ನು ನಿಮ್ಮ ಮಿದುಳು ಬಯಸದು ಎಂಬುದನ್ನು ನೆನಪಿನಲ್ಲಿಡಿ. ಪ್ಯಾಕೇಜ್ಡ್‌ ಸ್ನ್ಯಾಕ್‌ಗಳು, ಆಲ್ಕೋಹಾಲ್‌, ಸೋಡಾ ಹಾಗೂ ಮಾರುಕಟ್ಟೆಯ ಇತರ ಪ್ಯಾಕೇಜ್ಡ್‌ ಡ್ರಿಂಕ್‌ಗಳು, ಪ್ರೆಂಚ್‌ ಫ್ರೈಗಳು, ಡೋನಟ್‌, ವೈಟ್‌ ಬ್ರೆಡ್‌, ಸಂಸ್ಕರಿಸಿದ ಮಾಂಸ, ಬೆಣ್ಣೆ ಹಾಗೂ ಫುಲ್‌ ಕೊಬ್ಬಿರುವ ಚೀಸ್‌, ಕೆಚಪ್‌, ಸಿರಪ್‌, ಡಿಪ್‌ ಹಾಗೂ ಡ್ರೆಸ್ಸಿಂಗ್‌ಗಳು ಎಲ್ಲವೂ ಮಿದುಳಿಗೆ ನಿಜಕ್ಕೂ ಖುಷಿ ಕೊಡದ ಆಹಾರಗಳು ಎಂಬುದನ್ನು ನೆನಪಿಡಿ.

Continue Reading

Latest

International Yoga Day 2024: ಕುತ್ತಿಗೆ ನೋವಿನ ನಿವಾರಣೆಗೆ ಯಾವ ಆಸನಗಳು ಸೂಕ್ತ?

International Yoga Day 2024: ನಿಯಮಿತವಾದ ಯೋಗಾಭ್ಯಾಸದಿಂದ ಶರೀರವನ್ನು ಕಾಡುವ ಹಲವು ಬಗೆಯ ನೋವುಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ, ಬಾಧಿಸುವ ಕುತ್ತಿಗೆ ನೋವನ್ನು ಕಡಿಮೆ ಮಾಡಲು ಉಪಯುಕ್ತವಾದ ಆಸನಗಳನ್ನು ಇಲ್ಲಿ ತಿಳಿಸಲಾಗಿದೆ. ಆದರೆ ಇದಕ್ಕೆಲ್ಲ ಸ್ವಯಂ ವೈದ್ಯ ಮಾಡದೆಯೆ, ಸರಿಯಾದ ಮಾರ್ಗದರ್ಶನದ ಜೊತೆಗೆ ಇದನ್ನು ಅಭ್ಯಾಸ ಮಾಡುವುದು ಅಗತ್ಯ.

VISTARANEWS.COM


on

International Yoga Day 2024
Koo

ದೇಹ ಮತ್ತು ಮನಸ್ಸುಗಳ ಮೇಲಿನ ಮನಸ್ಸಿನ ಒತ್ತಡ ನಿವಾರಣೆಗೆ ಯೋಗ (International Yoga Day 2024) ಬಹು ಉಪಯುಕ್ತ. ಸರಿಯಾದ ಉಸಿರಾಟ ಕ್ರಮದೊಂದಿಗೆ ಸೂಕ್ತ ಮಾರ್ಗದರ್ಶನದ ಜೊತೆಗೆ ಇದನ್ನು ನಿಯಮಿತವಾಗಿ ಅಭ್ಯಾಸ ಮಾಡಿದರೆ ಮೈ-ಮನಗಳ ಸಮನ್ವಯವನ್ನು ಸಾಧಿಸಬಹುದು. ಜೊತೆಗೆ, ಹಲವಾರು ನೋವುಗಳಿಗೆ, ಶರೀರದ ತೊಂದರೆಗಳಿಗೆ ಉಪಶಮನವನ್ನೂ ಪಡೆಯಬಹುದು. ಈ ನಿಟ್ಟಿನಲ್ಲಿ, ಕುತ್ತಿಗೆ ನೋವಿನ ಶಮನಕ್ಕೆ ಉಪಯುಕ್ತವಾದ ಆಸನಗಳನ್ನು ಇಲ್ಲಿ ನೀಡಲಾಗಿದೆ. ಆದರೆ ಇವುಗಳನ್ನೆಲ್ಲ ಅಭ್ಯಾಸ ಮಾಡುವ ಮುನ್ನ ವೈದ್ಯರ ಸಲಹೆಯನ್ನು ಪಡೆಯುವುದು ಅಗತ್ಯ. ಜೊತೆಗೆ ಅನುಭವಿಯಾದ ಯೋಗ ತರಬೇತುದಾರರ ಮಾರ್ಗದರ್ಶನವೂ ಅಗತ್ಯ.

ಕುತ್ತಿಗೆ ನೋವು:

ಬೆನ್ನು ಹುರಿಯ ಸರ್ವೈಕಲ್‌ ಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು ಇತ್ತೀಚಿನ ವರ್ಷಗಳ ಬಹಳಷ್ಟು ಜನರು ಅನುಭವಿಸುವ ತೊಂದರೆ. ಜೀವನಶೈಲಿಯ ದೋಷಗಳು, ಸ್ಕ್ರೀನ್‌ ಸಮಯ ಅತಿಯಾಗುವುದು, ಜೀರ್ಣಾಂಗದ ತೊಂದರೆಗಳು, ಗಾಯ, ವಯಸ್ಸು ಮುಂತಾದ ಹಲವು ಕಾರಣಗಳು ಇದಕ್ಕಿರಬಹುದು. ತಲೆಯ ಹಿಂಭಾಗದಲ್ಲಿ ನೋವು, ಕುತ್ತಿಗೆ, ಭುಜ, ಮೊಣಕೈಗಳಲ್ಲಿ ನೋವು, ತಲೆಸುತ್ತು ಮುಂತಾದ ಹಲವು ಲಕ್ಷಣಗಳು. ಈ ನೋವು ಕಡಿಮೆ ಮಾಡುವುದಕ್ಕೆ ಉಪಯುಕ್ತ ಎನ್ನಬಹುದಾದ ಆಸನಗಳಿವು.

International Yoga Day 2024

ಮಕರಾಸನ:

ಕುತ್ತಿಗೆಯಿಂದ ಹಿಡಿದು ಬೆನ್ನಿನ ಕೆಳಭಾಗದವರೆಗಿನ ನೋವು ಶಮನಕ್ಕೆ ಇದು ಪರಿಣಾಮಕಾರಿ. ಮೊದಲಿಗೆ, ಹೊಟ್ಟೆ ಅಡಿ ಮಾಡಿ, ಕಾಲುಚಾಚಿ ನೇರ ಮಲಗಿ. ಕೈಗಳೆರಡನ್ನೂ ಮುಖದ ಅಡಿಭಾಗಕ್ಕೆ ಬರುವಂತೆ ಮಡಿಸಿಟ್ಟುಕೊಳ್ಳಿ. ಕೈಗಳ ಮೇಲೆ ಗಲ್ಲ ಇರಿಸಿ, ಅದಾಗದಿದ್ದರೆ ಹಣೆಯನ್ನಾದರೂ ಇರಿಸಬಹುದು. ಹಲವು ನಿಮಿಷಗಳವರೆಗೆ ಹೀಗೆ ಮಲಗಿ, ದೇಹವನ್ನೆಲ್ಲ ಸಡಿಲ ಬಿಡಿ.

International Yoga Day 2024

ಸೇತುಬಂಧಾಸನ:

ದೇಹಕ್ಕೆ ಬಲ ನೀಡುವುದು ಮಾತ್ರವಲ್ಲದೆ, ಶರೀರದ ಸಮನ್ವಯವನ್ನೂ ಈ ಆಸನ ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಯಾವುದೇ ‌ʻಬ್ರಿಜ್ ಪೋಸ್ʼ ಎಂದು ಕರೆಸಿಕೊಳ್ಳುವಂಥ ಆಸನಗಳು ಕಾಲಿನಿಂದ ಹಿಡಿದು ಕುತ್ತಿಗೆಯವರೆಗಿನ ನಾನಾ ಭಾಗಗಳ ಬಲವನ್ನು ಹೆಚ್ಚಿಸುತ್ತವೆ. ಎರಡೂ ಪಾದಗಳನ್ನು ಊರಿ ನೆಲಕ್ಕೆ ಒತ್ತಿ, ಮುಂಡದ ಭಾಗವನ್ನು ಮೇಲಕ್ಕೆತ್ತುವ ಈ ಆಸನ ರಕ್ತಪರಿಚಲನೆಯನ್ನೂ ಸುಧಾರಿಸುತ್ತದೆ.

International Yoga Day 2024

ಭುಜಂಗಾಸನ:

ಬೆನ್ನುಹುರಿಯ ಬಲವರ್ಧನೆಗೆ ಅಗತ್ಯವಾದ ಆಸನವಿದು. ಬೆನ್ನುಹುರಿಯ ಅಕ್ಕಪಕ್ಕದ ಸ್ನಾಯುಗಳು ಸಹ ಇದರಿಂದ ಬಲಗೊಳ್ಳುತ್ತವೆ. ಜೊತೆಗೆ, ಸೊಂಟ, ಕಿಬ್ಬೊಟ್ಟೆ, ಎದೆ, ಭುಜ ಮತ್ತು ತೋಳುಗಳ ಸ್ನಾಯುಗಳ ಮೇಲೂ ಇದು ಕೆಲಸ ಮಾಡುತ್ತದೆ. ಹೆಡೆ ಎತ್ತಿದ ಹಾವಿನಂತೆ ಕಾಣುವ ಭಂಗಿಯಿದು. ಮೊದಲಿಗೆ ಮುಖ ಅಡಿ ಮಾಡಿ ಮಲಗಿ. ಹಸ್ತಗಳನ್ನು ಎದೆಯ ಪಕ್ಕದಲ್ಲಿ ಊರಿ, ಕಟಿಯಿಂದ ಮೇಲೆ ಭಾಗವನ್ನು ನಿಧಾನಕ್ಕೆ ಮೇಲೆತ್ತಿ ನಿಲ್ಲಿಸಿ.

International Yoga Day 2024

ಧನುರಾಸನ:

ಈ ಆಸನ ಮಾಡುವ ಲಾಭಗಳು ಬಹಳಷ್ಟಿವೆ. ಬೆನ್ನು ಮತ್ತು ಸೊಂಟದ ಬಲವರ್ಧನೆಗೆ ಇದು ಸಹಾಯಕ. ಇದಲ್ಲದೆ, ದೇಹದ ಚಯಾಪಚಯವನ್ನು ಹೆಚ್ಚಿಸಿ, ಹೊಟ್ಟೆ ಮತ್ತು ತೊಡೆಗಳು ಬೊಜ್ಜು ನಿವಾರಿಸಿ, ಜೀರ್ಣಾಂಗಗಳ ಆರೋಗ್ಯ ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ಶಮನ ಮಾಡುತ್ತದೆ. ಮುಟ್ಟಿನ ಹೊಟ್ಟೆ ನೋವಿನ ಉಪಶಮನಕ್ಕೂ ಇದು ಉಪಯುಕ್ತವಾಗಿದೆ. ಮೊದಲಿಗೆ, ಮುಖ ಅಡಿಯಾಗುವಂತೆ ಮಲಗಿ, ಕೈಕಾಲುಗಳನ್ನು ನೇರವಾಗಿ ಚಾಚಬೇಕು. ಕಾಲು ಮಡಿಸಿ, ಗಜ್ಜೆ ಹಾಕುವ ಭಾಗವನ್ನು ಕೈಗಳಿಂದ ಹಿಡಿಯಬೇಕು. ಕಾಲುಗಳನ್ನು ದೇಹದ ಅಗಲಕ್ಕಿಂತ ಹೆಚ್ಚು ಅಗಲ ಇರಿಸುವಂತಿಲ್ಲ. ಈಗ ಕೈಗಳಿಂದ ಕಾಲೆಳೆಯುತ್ತಾ, ಕಾಲುಗಳಿಂದ ಕೈ ಎಳೆಯುತ್ತಾ ಎರಡೂ ಕಾಲುಗಳನ್ನು ಮತ್ತು ಮುಖವನ್ನು ಮೇಲಕ್ಕೆತ್ತಬೇಕು. ನೋಡುವುದಕ್ಕೆ ಬಿಲ್ಲಿನಂತೆ ಬಾಗಿರುವಂತೆ ಕಾಣುತ್ತದೆ ದೇಹ.

ಇದನ್ನೂ ಓದಿ:Video Viral: ಮಹಿಳೆಯನ್ನು ತಿವಿದು ರಸ್ತೆಯುದ್ದಕ್ಕೂ ಎಳೆದೊಯ್ದ ಎಮ್ಮೆ! ವಿಡಿಯೊ ಇದೆ

International Yoga Day 2024

ಗೋಮುಖಾಸನ:

ಎದೆ, ತೋಳು, ಭುಜ, ಕುತ್ತಿಗೆ, ಕಾಲುಗಳನ್ನು ಬಲಗೊಳಿಸುವ ಆಸನವಿದು. ಹೆಚ್ಚಿನ ವ್ಯಾಯಾಮವಿಲ್ಲದೆ ಜಡ ಬದುಕನ್ನು ನಡೆಸುತ್ತಿರುವವರಿಗೆ ಇದು ಹೆಚ್ಚು ಉಪಯುಕ್ತ. ಈ ಆಸನದಲ್ಲಿ ಬೆನ್ನು ಹುರಿ ಸರಿಯಾಗಿ ಹಿಗ್ಗಿ, ಅದರ ಮೇಲಿನ ಒತ್ತಡ ಕಡಿಮೆ ಆಗುತ್ತದೆ. ಬೆನ್ನು ನೇರವಾಗಿರಿಸಿಕೊಂಡು, ಕಾಲುಗಳೆರನ್ನು ಮುಂದೆ ಚಾಚಿ ಕುಳಿತುಕೊಳ್ಳಿ. ಮೊದಲಿಗೆ, ಬಲಗಾಲನ್ನು ಮಡಿಸಿ, ಬಲಪಾದ ಎಡಪೃಷ್ಠದ ಪಕ್ಕ ಬರುವಂತೆ ಇರಿಸಿ, ನಂತರ ಎಡಮಂಡಿಯನ್ನು ಬಲಮಂಡಿಯ ಮೇಲೆ ಬರುವಂತೆ ಮಡಿಸಿಡಿ. ಬಲಗೈ ಮೇಲೆತ್ತಿ, ಬೆನ್ನಿನ ಹಿಂದೆ ಮಡಿಸಿ, ಎಡಗೈಯನ್ನು ಕೆಳಗಿನಿಂದಲೇ ಮಡಿಸಿ, ಬಲಗೈ ಬೆರಳುಗಳನ್ನು ಹಿಡಿದುಕೊಳ್ಳಿ.

Continue Reading
Advertisement
Viral Video
ಕ್ರಿಕೆಟ್9 mins ago

Viral Video: ಅಭಿಮಾನಿ ಮೇಲೆ ಹಲ್ಲೆಗೆ ಯತ್ನಿಸಿದ ಪಾಕ್​ ವೇಗಿ; ತಡೆದು ನಿಲ್ಲಿಸಿದ ಪತ್ನಿ

Kempegowda Jayanti
ಕರ್ನಾಟಕ15 mins ago

Kempegowda Jayanti: ಬೆಂಗಳೂರಲ್ಲಿ ಜೂನ್ 27ಕ್ಕೆ ಕೆಂಪೇಗೌಡ ಜಯಂತಿ: ಡಿಸಿಎಂ ಡಿ.ಕೆ.ಶಿವಕುಮಾರ್‌

Train Accident
ದೇಶ16 mins ago

Train Accident: ಸಿಬ್ಬಂದಿ ನಿರ್ಲಕ್ಷ್ಯ, ಸಿಗ್ನಲ್‌ ದೋಷ; ಬಂಗಾಳ ರೈಲು ಅಪಘಾತಕ್ಕೇನು ಕಾರಣ?

Mumbai News
ದೇಶ46 mins ago

‘ಯಾಕ್‌ ಹೀಗ್‌ ಮೋಸ ಮಾಡ್ದೆ’ ಎನ್ನುತ್ತಲೇ ಪ್ರೇಯಸಿಯನ್ನು ನಡು ರಸ್ತೆಯಲ್ಲಿ ಬಡಿದು ಕೊಂದ ಪ್ರೇಮಿ; Video ಇದೆ

prajwal revanna case test
ಪ್ರಮುಖ ಸುದ್ದಿ48 mins ago

Prajwal Revanna Case: ʼಮತ್ತೆ ಮತ್ತೆ ಅದನ್ನು ತೋರಿಸೋಕೆ ಮುಜುಗರ….ʼ ಜಡ್ಜ್‌ ಮುಂದೆ ಅಲವತ್ತುಕೊಂಡ ಪ್ರಜ್ವಲ್!‌

Gemini Mobile App
ತಂತ್ರಜ್ಞಾನ54 mins ago

Gemini Mobile App: ಕನ್ನಡ ಸೇರಿದಂತೆ 9 ಭಾರತೀಯ ಭಾಷೆಗಳಲ್ಲಿ ಗೂಗಲ್ ಜೆಮಿನಿ ಆ್ಯಪ್; ಏನಿದರ ಉಪಯೋಗ?

SA vs USA
ಕ್ರೀಡೆ1 hour ago

SA vs USA: ನಾಳೆ ಮೊದಲ ಸೂಪರ್​-8 ಪಂದ್ಯ; ಅಮೆರಿಕ ಸವಾಲಿಗೆ ಹರಿಣ ಪಡೆ ಸಿದ್ಧ

Kolar News
ಕೋಲಾರ1 hour ago

Kolar news : ಬ್ಲಾಸ್ಟಿಂಗ್‌ ವೇಳೆ ಉರುಳಿ ಬಿದ್ದ ಬಂಡೆಕಲ್ಲು, ಟ್ರ್ಯಾಕ್ಟರ್‌-ಹಿಟಾಚಿ ಅಪ್ಪಚ್ಚಿ; ಮೂವರು ಕಾರ್ಮಿಕರು ನಾಪತ್ತೆ

Actor Darshan
ಕರ್ನಾಟಕ1 hour ago

Actor Darshan: ದರ್ಶನ್ ಮನೆ ಒತ್ತುವರಿ ತೆರವಿಗೆ ಸರ್ಕಾರ ಗ್ರೀನ್‌ ಸಿಗ್ನಲ್‌; ಬುಲ್ಡೋಜರ್‌ ರೆಡಿ ಮಾಡುತ್ತಿದೆ ಬಿಬಿಎಂಪಿ

Reliance Jio Down
ದೇಶ1 hour ago

Reliance Jio Down: ದೇಶಾದ್ಯಂತ ಜಿಯೋ ನೆಟ್‌ವರ್ಕ್‌ ಡೌನ್;‌ ಇಂಟರ್‌ನೆಟ್‌ ಇಲ್ಲದೆ ಅಲ್ಲೋಲಕಲ್ಲೋಲ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು1 day ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 day ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ2 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ2 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ2 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ3 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ4 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ4 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌