ಬೆಂಗಳೂರು: ಭಯೋತ್ಪಾದನೆ ಕೃತ್ಯಗಳು ಹಾಗೂ ದೇಶದ್ರೋಹ ಚಟುವಟಿಕೆಗಳಲ್ಲಿ ಭಾಗಿ, ದೇಶದ ಸೌಹಾರ್ದ ಮತ್ತು ಶಾಂತಿಯನ್ನು ಕದಡುತ್ತಿದ್ದ ಕಾರಣಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಸಂಘಟನೆಯನ್ನು ಕೇಂದ್ರ ಸರ್ಕಾರವು ನಿಷೇಧಿಸಿದೆ(PFI Banned). ಇದೇ ರೀತಿಯ ಕಾರಣಕ್ಕೆ ಕೇಂದ್ರ ಗೃಹ ಸಚಿವಾಲಯವು ಈ ಹಿಂದೆಯೂ ಅನೇಕ ಸಂಘಟನೆಗಳನ್ನು ನಿಷೇಧ ಮಾಡಿದೆ.
ಯಾವುದೇ ಸಂಘಟನೆ ಮತ್ತು ಸಂಘಟನೆಗಳನ್ನು ರಚಿಸಿಕೊಳ್ಳಲು ನಮ್ಮ ಸಂವಿಧಾನವೇ ಅವಕಾಶವನ್ನು ನೀಡಿದೆ. ಆದರೆ, ಹಾಗೆ ರಚಿತವಾದ ಸಂಸ್ಥೆಗಳು, ಸಂಘಟನೆಗಳು ಕಾನೂನುಬದ್ಧವಾಗಿ ನಡೆದುಕೊಳ್ಳಬೇಕಾಗುತ್ತದೆ. ಒಂದು ವೇಳೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅಂಥ ಸಂಘಟನೆಗಳನ್ನು ನಿಷೇಧ ಮಾಡಲು ಯುಎಪಿಎ ಕಾಯ್ದೆಯಡಿ ಕೇಂದ್ರ ಸರ್ಕಾರಕ್ಕೆ ಅವಕಾಶವಿದೆ. ಈಗ ಕೇಂದ್ರ ಗೃಹ ಸಚಿವಾಲಯವು ಇದೇ ಕಾಯಿದೆಯನ್ನು ಬಳಸಿಕೊಂಡು ಪಿಎಫ್ಐ ನಿಷೇಧ ಮಾಡಿದೆ. ಇದೇ ರೀತಿ ನಿಷೇಧಕ್ಕೆ ಒಳಗಾದ ಸಂಘಟನೆಗಳ ಮಾಹಿತಿ ಇಲ್ಲಿದೆ.
ಯಾವೆಲ್ಲ ಸಂಘಟನೆಗಳು ನಿಷೇಧಿಸಲಾಗಿದೆ?
- ಬಬ್ಬರ್ ಖಾಲ್ಸಾ ಇಂಟರ್ ನ್ಯಾಷನಲ್
- ಖಲಿಸ್ತಾನ್ ಕಮಾಂಡೋ ಫೋರ್ಸ್
- ಖಲಿಸ್ತಾನ್ ಜಿಂದಾಬಾದ್ ಫೋರ್ಸ್
- ಇಂಟರ್‌ನ್ಯಾಷನಲ್ ಸಿಖ್ ಯೂಥ್ ಫೆಡರೇಷನ್
- ಲಷ್ಕರ್-ಇ-ತಯ್ಬಾ/ಪಸ್ಬಾನ್-ಇ-ಅಹ್ಲೆ ಹದಿಸ್
- ಜೈಷ್-ಇ-ಮೊಹಮ್ಮದ್/ತಾಹ್ರಿಕ್-ಇ-ಫುರ್ಕಾನ್
- ಹರ್ಕತ್-ಉಲ್-ಮುಜಾಹೀದಿನ್/ಹರ್ಕತ್ ಉಲ್ ಅನ್ಸಾರ್/ ಹರ್ಕತ್ ಉಲ್ ಜೆಹಾದ್ ಇ ಇಸ್ಲಾಮಿ
- ಹಿಜಾಬ್-ಉಲ್-ಮಜಾಹೀದಿನ್/ಹಿಜಾಬ್ ಉಲ್ ಮುಜಾಹೀದಿನ್ ಪಿರ್ ಪಂಜಲ್ ರೆಜಿಮೆಂಟ್
- ಅಲ್-ಉಮರ್-ಮುಜಾಹೀದಿನ್
- ಜಮ್ಮು ಆ್ಯಂಡ್ ಕಾಶ್ಮೀರ್ ಇಸ್ಲಾಮಿಕ್ ಫ್ರಂಟ್
- ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸಾಮ್(ಉಲ್ಫಾ)
- ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್(ಎನ್‌ಡಿಎಫ್‌ಬಿ) ಇನ್ ಅಸ್ಸಾಮ್
- ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ಎ)
- ಯುನೈಟೆಡ್ ನ್ಯಾಷನಲ್ ಲಿಬರೇಷನ್ ಫ್ರಂಟ್ (ಯುಎನ್ಎಲ್ಎಫ್)
- ಪೀಪಲ್ಸ್ ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೀಪಾಕ್(ಪಿಆರ್‌ಇಪಿಎಕೆ)
- ಕಾಂಗ್ಲೀಪಾಕ್ ಕಮ್ಯುನಿಸ್ಟ್ ಪಾರ್ಟಿ(ಕೆಸಿಪಿ)
- ಕಾಂಗ್ಲೀ ಯಾಲೋ ಕನ್ಬಾ ಲುಪ್(ಕೆವೈಕೆಎಲ್)
- ಮಣಿಪುರ್ ಪೀಪಲ್ಸ್ ಲಿಬರೇಷನ್ ಫ್ರಂಟ್(ಎಂಪಿಎಲ್ಎಫ್)
- ಆಲ್ ತ್ರಿಪುರಾರ ಟೈಗರ್ ಫೋರ್ಸ್
- ನ್ಯಾಷನಲ್ ಲಿಬರೇಷನ್ ಫ್ರಂಟ್ ಆಫ್ ತ್ರಿಪುರಾ
- ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಲಂ (ಎಲ್‌ಟಿಟಿಇ)
- ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ(ಎಸ್ಐಎಂಐ)
- ದೀನ್‌ದಾರ್ ಅಂಜುಮನ್
- ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾರ್ಕ್ಸಿಸ್ಟ್-ಲೆನಿನಿಸ್ಟ್), ಪೀಪಲ್ಸ್ ವಾರ್ ಮತ್ತು ಅದರ ಎಲ್ಲ ಸಹವರ್ತಿ ಸಂಘಟನೆಗಳು
- ಮಾವಾವಾದಿ ಕಮ್ಯುನಿಸ್ಟ್ ಸೆಂಟರ್(ಎಂಸಿಸಿ) ಮತ್ತು ಅದರ ಸಹವರ್ತಿ ಸಂಘಟನೆಗಳು, ಮುಂಚೂಣಿಯ ಎಲ್ಲ ಸಂಸ್ಥೆಗಳು
- ಅಲ್ ಬದರ್
- ಜಮೈತ್-ಉಲ್- ಮುಜಾಹೀದಿನ್
- ಅಲ್ ಕೈದಾ
- ದುಖ್ತಾರನ್-ಇ-ಮಿಲ್ಲತ್(ಡಿಇಎಂ)
- ತಮಿಳಉನಾಡು ಲಿಬರೇಷನ್ ಆರ್ಮಿ(ಟಿಎನ್ಎಲ್ಎ)
- ತಮಿಳ್ ನ್ಯಾಷನಲ್ ರಿಟ್ರೈ ವಲ್ ಟ್ರೂಪ್ಸ್(ಟಿಎನ್ಆರ್‌ಟಿ)
- ಅಖಿಲ ಭಾರತ ನೇಪಾಳಿ ಏಕ್ತಾ ಸಮಾಜ್(ಎಬಿಎನ್ಇಎಸ್)
- ವಿಶ್ವಸಂಸ್ಥೆ (ಭದ್ರತಾ ಸಮಿತಿ)ಯ 1947ರ ಕಾಯಿದೆಯ ವಿಭಾಗ 2 ರ ಅಡಿಯಲ್ಲಿ ಮಾಡಲಾದ ಮತ್ತು ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ ಯು.ಎನ್. ಭಯೋತ್ಪಾದನೆ ತಡೆಗಟ್ಟುವಿಕೆ ಮತ್ತು ನಿಗ್ರಹ (ಭದ್ರತಾ ಮಂಡಳಿಯ ನಿರ್ಣಯಗಳ ಅನುಷ್ಠಾನ) ಆದೇಶದ 2007 ರ ವೇಳಾಪಟ್ಟಿಯಲ್ಲಿ ಪಟ್ಟಿ ಮಾಡಲಾದ ಎಲ್ಲ ಸಂಸ್ಥೆಗಳು.
- ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾವೋವಾದಿ) ಮತ್ತು ಅದರ ಎಲ್ಲ ಸಹವರ್ತಿ ಹಾಗೂ ಮುಂಚೂಣಿಯ ಸಂಸ್ಥೆಗಳು
- ಇಂಡಿಯನ್ ಮುಜಾಹೀದಿನ್ ಮತ್ತು ಅದರ ಎಲ್ಲ ಸಹವರ್ತಿ ಹಾಗೂ ಮುಂಚೂಣಿಯ ಸಂಸ್ಥೆಗಳು
- ಗಾರೋ ನ್ಯಾಷನಲ್ ಲಿಬಹೇಷನ್ ಆರ್ಮಿ(ಜಿಎನ್ಎಲ್ಎ) ಮತ್ತು ಅದರ ಎಲ್ಲ ಸಹವರ್ತಿ ಸಂಸ್ಥೆಗಳು
- ಕಾಮಟಪುರ್ ಲಿಬರೇಷನ್ ಆರ್ಗನೈಸೇಷನ್ ಮತ್ತು ಅದರ ಎಲ್ಲ ಸಹವರ್ತಿ ಸಂಸ್ಥೆಗಳು
- ಇಸ್ಲಾಮಿಕ್ ಸ್ಟೇಟ್/ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಲೆವಿಂಟ್/ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ/ಡಾಯಿಷ್ ಮತ್ತು ಅದರ ಎಲ್ಲ ಸಂಸ್ಥೆಗಳು
- ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್(ಖಪ್ಲಾಂಗ್), ಎನ್ಎಸ್‌ಸಿಎನ್(ಕೆ), ಮತ್ತು ಅದರ ಎಲ್ಲ ಸಹವರ್ತಿ ಸಂಸ್ಥೆಗಳು
ಇದನ್ನೂ ಓದಿ | PFI Banned | ಭಯೋತ್ಪಾದನೆ, ದೇಶದ್ರೋಹ, ಸೌಹಾರ್ದಕ್ಕೆ ಧಕ್ಕೆ ಪಿಎಫ್ಐ ನಿಷೇಧಕ್ಕೆ ಕಾರಣ! ಗೆಜೆಟ್ ಡಿಟೇಲ್ಸ್ ಓದಿ