ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Election 2023) ಇನ್ನು ನಾಲ್ಕು ದಿನವಷ್ಟೇ ಬಾಕಿ ಇದೆ. ಈಗಾಗಲೇ ಎಲ್ಲ ಪಕ್ಷದ ಅಭ್ಯರ್ಥಿಗಳು ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಪಕ್ಷೇತರ ಅಭ್ಯರ್ಥಿಗಳ ಅಬ್ಬರವೂ ಹೆಚ್ಚಿದೆ. ಕಾಂಗ್ರೆಸ್‌ನಿಂದ ಬಂಡಾಯವೆದ್ದು, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಿರುವ ಕೆಜಿಎಫ್ ಬಾಬು ಅವರು ಕ್ಷೇತ್ರಾದ್ಯಂತ ನಿರಂತರ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈಗ ಅವರಿಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ನ ನೂರಾರು ಕಾರ್ಯಕರ್ತರು ಜತೆಯಾಗಿದ್ದಾರೆ. ಅವರೆಲ್ಲರೂ ಪಕ್ಷ ತೊರೆದು ಕೆಜಿಎಫ್ ಬಾಬು ಬೆಂಬಲಕ್ಕೆ ನಿಂತಿದ್ದಾರೆ.
ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ತೊರೆದಿರುವ 500ಕ್ಕೂ ಹೆಚ್ಚು ಕಾರ್ಯಕರ್ತರು ಕೆಜಿಎಫ್ ಬಾಬು ಅವರಿಗೆ ಮತ ಚಲಾಯಿಸಿದ್ದಾರೆ. ಸುಂಕೇನಹಳ್ಳಿ ವಾರ್ಡ್‌ನ ಬಿಜೆಪಿ ಅಧ್ಯಕ್ಷ ಧನರಾಜ್ ಸೇರಿದಂತೆ 12 ಮುಖಂಡರು ಈಗ ಕೆಜಿಎಫ್ ಬಾಬು ಅರಿಗೆ ಬೆಂಬಲವಾಗಿ ನಿಂತಿದ್ದಾರೆ.
ಇದನ್ನೂ ಓದಿ: Mallikarjun Kharge: ಖರ್ಗೆ ಕುಟುಂಬದ ಸರ್ವನಾಶ; ಮಣಿಕಂಠ ರಾಠೋಡ್ ವಿರುದ್ಧ ಕಾಂಗ್ರೆಸ್ ದೂರು
ಮನೆ ಮನೆ ಪ್ರಚಾರದಲ್ಲಿ ಬ್ಯುಸಿ
ಈಗಾಗಲೇ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಭರವಸೆ ನೀಡಿರುವ ಕೆಜಿಎಫ್ ಬಾಬು ಅವರು, ಮನೆ ಮನೆ ಪ್ರಚಾರ ಸೇರಿದಂತೆ ಮತದಾರರ ಮನಸ್ಸನ್ನು ಗೆಲ್ಲಲು ಹಲವು ತಂತ್ರಗಳನ್ನು ಮಾಡುತ್ತಿದ್ದಾರೆ.