Site icon Vistara News

Padmanabhanagar Election Results : ಪದ್ಮನಾಭನಗರದಲ್ಲಿ ಬಿಜೆಪಿಯ ಆರ್​. ಅಶೋಕ್​ ಜಯಭೇರಿ

Padmanabhanagar Election Results R Ashok Winner

#image_title

ಬೆಂಗಳೂರು: ನಗರ ಜಿಲ್ಲೆಯ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಆರ್​. ಅಶೋಕ್​ ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್​ನ ವಿ ರಘುನಾಥ್​ ನಾಯ್ಡು ವಿರುದ್ಧ ಜಯ ಸಾಧಿಸಿದರು. 2018ರ ಚುನಾವಣೆಯಲ್ಲಿ ಆರ್. ಅಶೋಕ್​ 77,868 ವೋಟುಗಳನ್ನು ಪಡೆದು ಜೆಡಿಎಸ್‌ನ ವಿ ಕೆ ಗೋಪಾಲ್ (45,702) ವಿರುದ್ಧ ಜಯ ಸಾಧಿಸಿದ್ದರು.

2008ರಲ್ಲಿ ರಚನೆಯಾದ ಈ ಕ್ಷೇತ್ರದಲ್ಲಿ ಇದುವರೆಗೆ ಮೂರು ಬಾರಿ ಆರ್​. ಅಶೋಕ್​ ಅವರೇ ಗೆದ್ದಿದ್ದಾರೆ. ಈ ಮೂಲಕ ಅವರು ಕ್ಷೇತ್ರದಲ್ಲಿ ಪ್ರಾಬಲ್ಯ ಉಳಿಸಿಕೊಂಡಿದ್ದಾರೆ. ಅದೇ ರೀತಿ ರಾಜ್ಯ ರಾಜಕಾರಣದ ದಿಗ್ಗಜರಾದ ದಲಿತ ನಾಯಕ ಬಿ ಬಸವಲಿಂಗಪ್ಪ , ಎಂ ವಿ ರಾಜಶೇಖರನ್ ಉತ್ತರಹಳ್ಳಿಯ ಶಾಸಕರಾಗಿದ್ದರೆನ್ನುವುದು ಇಲ್ಲಿನ ಹಿರಿಮೆ.

ಇನ್ನೂ ಇದೆ : Karnataka Election Results Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ; ಬಿ.ವೈ.ವಿಜಯೇಂದ್ರ ಗೆಲುವಿನ ‘ಶಿಕಾರಿ’

ಪದ್ಮನಾಭ ನಗರ ಒಟ್ಟು 2,87,000 ಮತದಾರರನ್ನು ಒಳಗೊಂಡಿದೆ. 72 ಸಾವಿರ ಮತಗಳನ್ನು ಹೊಂದಿರುವ ಒಬಿಸಿ ಮತದಾರರರುಸಮುದಾಯ ಕ್ಷೇತ್ರದ ಅತಿದೊಡ್ಡ ಮತದಾರ ವರ್ಗ. ಇದರಲ್ಲಿ 60 ಸಾವಿರ ಮತದಾರರನ್ನು ಹೊಂದಿರುವ ಒಕ್ಕಲಿಗರು ಸೇರಿಕೊಂಡಿಲ್ಲ. 44 ಸಾವಿರ ಮತದಾರರಿರುವ ಮುಸ್ಲಿಂ ಸಮುದಾಯ, 25 ಸಾವಿರ ಮತದಾರರಿರುವ ಬ್ರಾಹ್ಮಣ ಸಮುದಾಯ, 18 ಸಾವಿರ ಮತದಾರರಿರುವ ದಲಿತ ಸಮುದಾಯ, 10 ಸಾವಿರದ ಆಸುಪಾಸಿನಲ್ಲಿರುವ ಲಿಂಗಾಯತರು ಈ ಕ್ಷೇತ್ರದ ಅಭ್ಯರ್ಥಿಯ ಭವಿಷ್ಯ ನಿರ್ಧರಿಸಿದ್ದಾರೆ.

Exit mobile version