Site icon Vistara News

Panchamasali Reservation: ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಮತ್ತೆ ಆರಂಭ; ಸಚಿವೆ ಹೆಬ್ಬಾಳ್ಕರ್‌ ಮೂಲಕ ಸರ್ಕಾರಕ್ಕೆ ಮನವಿ

protest for Panchamasali 2a reservation

ಚಿಕ್ಕೋಡಿ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಲಿಂಗಾಯತ ಪಂಚಮಸಾಲಿ ಸಮಾಜದಿಂದ 6ನೇ ಹಂತದ ಹೋರಾಟ ಆರಂಭವಾಗಿದೆ. ನಿಪ್ಪಾಣಿಯಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಭಾನುವಾರ ನಡೆದ ಬೃಹತ್‌ ಸಮಾವೇಶದಲ್ಲಿ, ಸಮಾಜಕ್ಕೆ 2ಎ ಮೀಸಲಾತಿ (Panchamasali Reservation) ನೀಡುವಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಲಾಯಿತು.

ನಿಪ್ಪಾಣಿಯ ಛತ್ರಪತಿ ಶಿವಾಜಿ ಮಹಾರಾಜ ಸಾಂಸ್ಕೃತಿಕ ಭವನದಲ್ಲಿ ಪಂಚಮಸಾಲಿ ಸಮಾಜದ ಬೃಹತ್‌ ಸಮಾವೇಶ ಆಯೋಜಿಸಲಾಗಿತ್ತು. ನಂತರ ಸಮಾವೇಶದಲ್ಲಿ ಭಾಗವಹಿಸಿದ್ದವರು ಪಾದಯಾತ್ರೆಯಲ್ಲಿ ತೆರಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಡೆ ನಡೆಸಿದರು. ಈ ವೇಳೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ಇಷ್ಟಲಿಂಗ ಪೂಜೆ ಮಾಡುವ ಮೂಲಕ ಮೀಸಲಾತಿ ಹೋರಾಟಕ್ಕೆ ಚಾಲನೆ ನೀಡಿದರು. ಈ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌, ಸಂಸದ ಈರಣ್ಣ ಕಡಾಡಿ, ಮಾಜಿ ಸಚಿವ ವಿನಯ್‌ ಕುಲಕರ್ಣಿ, ಶಶಿಕಾಂತ್ ನಾಯಕ್ ಸೇರಿ ನೂರಾರು ಮಂದಿ ಭಾಗಿಯಾಗಿದ್ದರು.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, 2ಎ ಮೀಸಲಾತಿ ಹೋರಾಟದ ಮೊದಲನೇ ಹಂತದಿಂದ ಆರನೇ ಹಂತದ ಹೋರಾಟವರೆಗೂ ಸತತವಾಗಿ ನನ್ನ ತೊಡಗಿಸಿಕೊಂಡಿದ್ದೇನೆ. ತಮ್ಮ ಧ್ವನಿಯಾಗಿ ಸರ್ಕಾರದ ಕಿವಿಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈ ಸಮಾಜದ ಋಣ ನಮ್ಮ ಮೇಲೆ ಬಹಳ ಇದೆ. ಮೀಸಲಾತಿ ವಿಚಾರವಾಗಿ ಸಿಎಂ, ಡಿಸಿಎಂ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ | ವಿಧಾನಸೌಧ ರೌಂಡ್ಸ್: ಬಿಜೆಪಿ ಜತೆ ಕೈಚಾಚಲು ಗೌಡರು ಒಪ್ಪಿದ್ದೇಕೆ? ಬಿಎಸ್‌ವೈ ಮತ್ತೆ ಬಿಜೆಪಿ ಹೈಕಮಾಂಡ್‌ಗೆ ಓಕೆ!

ಪಂಚಮಸಾಲಿ ಸಮಾಜದ ಮೀಸಲಾತಿ ಮನವಿ ಸ್ವೀಕರಿಸಿದ್ದೇನೆ. ಸರ್ಕಾರ ಪರವಾಗಿ ನಾನು ಮನವಿ ಸ್ವೀಕಾರ ಮಾಡುತ್ತೇನೆ ಎಂದು ಸಿಎಂಗೆ ತಿಳಿಸಿದ್ದೆ. ಸಿಎಂ ಹೋಗಿ ಬನ್ನಿ ಎಂದು ಹೇಳಿದ್ದರು. ನಾಳೆ ಮೀಟಿಂಗ್ ಇರುವುದರಿಂದ ಮೀಸಲಾತಿ ವಿಚಾರ ಚರ್ಚೆ ಮಾಡಲಾಗುವುದು. ಸರ್ಕಾರಕ್ಕೆ ಮೀಸಲಾತಿ ವಿಚಾರ ಗೊತ್ತಿದೆ. ಸಿಎಂ ಹಾಗೂ ಡಿಸಿಎಂ ಅವರನ್ನು ಪಂಚಮಸಾಲಿ ನಿಯೋಗ ಬೇಟಿ ಮಾಡಿತ್ತು. ಸಮಾಜಕ್ಕೆ ನ್ಯಾಯ ಒದಗಿಸಲು ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಶಾಸಕ ವಿನಯ್ ಕುಲಕರ್ಣಿ ಮಾತನಾಡಿ, ಸಮಾಜದಿಂದ ಮತ ಪಡೆದು ಶಾಸಕರಾಗಿದ್ದಾರೆ. ಗೆದ್ದ ಬಳಿಕ ಶಾಸಕರಿಗೆ ಅರಿವು ಇರಬೇಕು. ಸಮಾಜಕ್ಕೆ ಅನ್ಯಾಯವಾದಾಗ ಬರುವಂತದ್ದು ಕರ್ತವ್ಯ. ಯಾವುದೇ ಸಮಾಜಕ್ಕೆ ಅನ್ಯಾಯವಾದರೂ ಶಾಸಕರು ಬರಬೇಕು ಅದು ನಮ್ಮ ಧರ್ಮ ಎಂದು ಕಾರ್ಯಕ್ರಮಕ್ಕೆ ಗೈರಾದ ಶಾಸಕರ ವಿರುದ್ಧ ಅಸಮಾಧಾನ ಹೊರಹಾಕಿದರು.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಹಾಗೂ ದೆಹಲಿ ನಾಯಕರ ಗಮನಕ್ಕೆ ತಂದಿದ್ದೇವೆ. ಚುನಾವಣೆಯಲ್ಲಿ ಲಿಂಗಾಯತ ಸಮಾಜ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಕೈ ಹಿಡಿದಿದೆ. ಇದನ್ನು ನಮ್ಮ ಸರ್ಕಾರ ಅರಿವಿನಲ್ಲಿ ಇಟ್ಟುಕೊಂಡು ಸೆಂಟ್ರಲ್ ಒಬಿಸಿ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಪ್ರಸ್ತಾವನೆ ಕಳುಹಿಸಬೇಕು. ಕುರುಬ ಸಮುದಾಯವನ್ನು ಎಸ್.ಟಿ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಹೀಗಾಗಿ 2A ಸ್ಥಾನಕ್ಕೆ ಪಂಚಮಸಾಲಿಗಳನ್ನು ಸೇರಿಸಬೇಕು ಎಂದು ಒತ್ತಾಯಿಸಿರುವುದಾಗಿ ತಿಳಿಸಿದರು.

ಇದನ್ನೂ ಓದಿ | JDS Politics : ನೈತಿಕತೆ ಬಗ್ಗೆ ಮಾತನಾಡೋರು ಯಾರು? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಎಚ್.ಡಿ. ದೇವೇಗೌಡ

ಅಧಿವೇಶನ ಬಳಿಕ ಸ್ವಾಮೀಜಿಗಳನ್ನು ಕರೆದು ಸಭೆ ಮಾಡುವುದಾಗಿ ಸಿದ್ದಾರಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿಯವರನ್ನು ಕರೆದಿಲ್ಲ, ಅದೇ ಕಾರಣಕ್ಕಾಗಿ ಇಂದು ನಿಪ್ಪಾಣಿಯಲ್ಲಿ ಹೋರಾಟ ಶುರು ಮಾಡಿದ್ದಾರೆ. ಸ್ವಾಮೀಜಿ ಅದೇ ಕಾರಣಕ್ಕಾಗಿ ಮತ್ತೆ ಹೋರಾಟ ನಡೆಸುತ್ತಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ ಮುಖ್ಯವಲ್ಲ, ನಮಗೆ ಮೀಸಲಾತಿ ಮುಖ್ಯ ಎಂದು ತಿಳಿಸಿದರು.

Exit mobile version