Site icon Vistara News

Panchamasali Reservation | 2ಎ ಮೀಸಲಾತಿ ಆಗ್ರಹ; ಜಯಮೃತ್ಯುಂಜಯ ಸ್ವಾಮೀಜಿ ಜಾಥಾ

Panchamasali Reservation1

ಶಿವಮೊಗ್ಗ: ಪಂಚಮಸಾಲಿ ಸಮುದಾಯಕ್ಕೆ ​2ಎ ಮೀಸಲಾತಿಗೆ ಪಟ್ಟುಹಿಡಿದಿರುವ ಕೂಡಲಸಂಗಮಪಂಚಮಸಾಲಿ ಗುರುಪೀಠಾಧ್ಯಕ್ಷ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ (Panchamasali Reservation) ಗುರುವಾರ ಬೃಹತ್‌ ಜಾಥಾ ನಡೆಸಲಾಯಿತು.

ನಗರದ ಶಿವಪ್ಪನಾಯಕನ ವೃತ್ತದ ಶಿವಪ್ಪನಾಯಕ ಪ್ರತಿಮೆಗೆ ಹೂವಿನ ಹಾರ ಹಾಕಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಗೋಪಿ ವೃತ್ತದಿಂದ ಜೈಲ್ ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಸಮುದಾಯದ ನೂರಾರು ಮಂದಿ ರ‍್ಯಾಲಿಯಲ್ಲಿ ಭಾಗಿಯಾಗಿದ್ದಾರೆ.

ಮನವಿ ಸ್ವೀಕರಿಸಿದ ಸಂಸದ ರಾಘವೇಂದ್ರ

ಜಾಥಾ ಆರಂಭಕ್ಕೂ ಮುನ್ನ ಮನವಿ ಸ್ವೀಕರಿಸಿದ ರಾಘವೇಂದ್ರ

ಬೃಹತ್‌ ಜಾಥಾ ಆರಂಭಕ್ಕೂ ಮುನ್ನ ಸ್ಥಳಕ್ಕೆ ಆಗಮಿಸಿದ ಸಂಸದ ರಾಘವೇಂದ್ರ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರಿಂದ ಮನವಿ ಸ್ವೀಕರಿಸಿದರು. ಈ ಮೊದಲು ಮಾಜಿ ಸಿಎಂ ಯಡಿಯೂರಪ್ಪರ ಶಿವಮೊಗ್ಗದ ಮನೆಗೆ ಹೋಗಿ ಮನವಿ ಸಲ್ಲಿಸಲು ನಿರ್ಧಾರ ಮಾಡಲಾಗಿತ್ತು. ಆದರೆ, ಸಂಸದರೇ ರ‍್ಯಾಲಿ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ್ದಾರೆಂದು ಸ್ವಾಮೀಜಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

2 ತಿಂಗಳ ಕಾಲಾವಕಾಶ

ಮಂಗಳವಾರ ಕೂಡಲಸಂಗಮದ ಪಂಚಮಸಾಲಿ ಗುರುಪೀಠಾಧ್ಯಕ್ಷ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಜತೆ ಸರ್ಕಾರದ ಪರವಾಗಿ ಸಚಿವ ಸಿ.ಸಿ.ಪಾಟೀಲ್ ನಡೆಸಿದ್ದ ಸಂಧಾನ ಮಾತುಕತೆ ಯಶಸ್ವಿಯಾಗಿತ್ತು. ಸರ್ಕಾರಕ್ಕೆ ನಿರ್ಧಾರ ತೆಗೆದುಕೊಳ್ಳಲು ಮತ್ತೆ ಎರಡು ತಿಂಗಳ ಕಾಲಾವಕಾಶವನ್ನು ಸ್ವಾಮೀಜಿ ನೀಡಿದ್ದರು.

ಇದನ್ನೂ ಓದಿ | ಪಂಚಮಸಾಲಿ 2ಎ ಮೀಸಲಾತಿ: ಮತ್ತೆ ಎರಡು ತಿಂಗಳು ಗಡವು ವಿಸ್ತರಣೆ; ಸರ್ಕಾರ ಸದ್ಯ ನಿರಾಳ

Exit mobile version