ಮಾಗಡಿ: ರಾಜ್ಯದ ನಾನಾ ಭಾಗಗಳಲ್ಲಿ ಚಿರತೆ ಕಾಟ ವಿಪರೀತವಾಗಿದ್ದು, ಗ್ರಾಮೀಣ ಮಾತ್ರವಲ್ಲ, ನಗರ ಪ್ರದೇಶದ ವಾಸಿಗಳು ಕೂಡಾ ಭಯದಿಂದ ಬದುಕು ಕಳೆಯುವಂತಾಗಿದೆ. ಬೆಳಗಾವಿ, ಕೊಪ್ಪಳ, ಯಾದಗಿರಿ, ರಾಯಚೂರು, ವಿಜಯನಗರ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ನಿತ್ಯ ಎನ್ನುವಂತೆ ಚಿರತೆ ದರ್ಶನವಾಗುತ್ತಿದೆ. ಶಾಲೆಗಳನ್ನೇ ಕೆಲವು ಕಾಲ ಮುಚ್ಚಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ನಡುವೆ, ಬೆಂಗಳೂರು ಹೊರವಲಯದ ಮಾಗಡಿಯಲ್ಲೂ ಚಿರತೆಗಳ ಹಾವಳಿ ಜೋರಾಗಿದೆ. ಮಾಗಡಿ ತಾಲೂಕಿನ ಕಲ್ಲುದೇವನಹಳ್ಳಿ ಗ್ರಾಮದ ಚನ್ನಪುರದಲ್ಲಿ ಜಮೀನು ಬಳಿ ಹೋಗಿದ್ದ ವ್ಯಕ್ತಿಯ ಮೇಲೆ ಚಿರತೆ ದಾಳಿ ನಡೆಸಿದ್ದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚನ್ನಪುರ ಗ್ರಾಮದ ನಿವಾಸಿಯಾಗಿರುವ ರೈತ ಶಿವರಾಮಯ್ಯ(೫೭) ಮೃತರಾದವರು.
ಶಿವರಾಮಯ್ಯ ಅವರು ಎರಡು ದಿನಗಳಿಂದ ಕಾಣೆಯಾಗಿದ್ದರು. ಮನೆಯವರು ಎರಡು ದಿನಗಳಿಂದ ಅವರನ್ನು ಹುಡುಕುತ್ತಿದ್ದರು. ಅವರ ಶವ ಬುಧವಾರ ಮಧ್ಯಾಹ್ನ ಜಮೀನಿನ ಬೇಲಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಅವರು ಹೊಲದಲ್ಲಿ ಕೆಲಸ ಮಾಡಿ ವಿಶ್ರಾಂತಿ ಪಡೆಯುತ್ತಿದ್ದಾಗ ದಾಳಿ ಮಾಡಿರುವ ಸಾಧ್ಯತೆ ಇದೆ. ಬುಧವಾರ ಶವ ಪತ್ತೆ ಆಗುತ್ತಿದ್ದಂತೆಯೇ ಸ್ಥಳಕ್ಕೆ ಮಾಗಡಿ ಅರಣ್ಯಾಧಿಕಾರಿಗಳು, ಪೊಲೀಸರು ಭೇಟಿ ನೀಡಿದ್ದಾರೆ. ಶಿವರಾಮಯ್ಯ ಅವರ ಮೈಮೇಲಿನ ಗಾಯಗಳ ಆಧಾರದಲ್ಲಿ
ಇದನ್ನೂ ಓದಿ | ಮೈಸೂರು ನಗರದ ಪಕ್ಕವೇ ಮರಿಗಳ ಜತೆ ಕಾಣಿಸಿಕೊಂಡ ತಾಯಿ ಚಿರತೆ, ಭಯದಲ್ಲಿ ಜನ, ಶಾಲೆಗಳಿಗೆ ರಜೆ