Site icon Vistara News

Passenger Dies: ಕೊಪ್ಪಳದಿಂದ ಗದಗಕ್ಕೆ ಹೋದ ಪ್ರಯಾಣಿಕ ಬಸ್‌ನಲ್ಲೇ ಸಾವು

Passenger who went from Koppal to Gadag dies in bus

#image_title

ಗದಗ: ಕೊಪ್ಪಳದಿಂದ ಗದಗಕ್ಕೆ ಆಗಮಿಸಿದ್ದ ಪ್ರಯಾಣಿಕರೊಬ್ಬರು ಸಾರಿಗೆ ಬಸ್‌ನಲ್ಲೇ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ. ಪ್ರಯಾಣಿಕನಿಗೆ ಹೃದಯಾಘಾತವಾಗಿರುವ ಶಂಕೆ ವ್ಯಕ್ತವಾಗಿದೆ. ಗದಗ ನಗರದ ಹೊಸ ಬಸ್ ನಿಲ್ದಾಣದಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಆಗಮಿಸಿದಾಗ ಪ್ರಯಾಣಿಕ (Passenger Dies) ಪ್ರಜ್ಞಾಹೀನ ಸ್ಥಿತಿಯಲ್ಲಿ ಬಸ್‌ನೊಳಗೆ ಇರುವುದು ಕಂಡುಬಂದಿದೆ. ಮೃತರನ್ನು ಅಣ್ಣಿಗೇರಿ ನಿವಾಸಿ ವೀರಯ್ಯ ಹಿರೇಮಠ (೪೦) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಆರೋಗ್ಯ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | Murder Case: ಪದೇ ಪದೆ ಹಣ ಕೊಡುವಂತೆ ಪೀಡಿಸುತ್ತಿದ್ದವನನ್ನು ಕೊಡಲಿಯಿಂದ ಕೊಚ್ಚಿ ಕೊಂದ

ಹಳ್ಳ ದಾಟುವಾಗ ಕಾಲು ಜಾರಿ ಬಿದ್ದು ಯುವಕ ಸಾವು

ಶಿವಮೊಗ್ಗ: ಹಳ್ಳ ದಾಟುವಾಗ ಕಾಲು ಜಾರಿ ಬಿದ್ದು ಯುವಕ ಮೃತಪಟ್ಟಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬಸವಾನಿಯಲ್ಲಿ ನಡೆದಿದೆ. ಪ್ರಜತ್ (29) ಮೃತ ಯುವಕ. ಬಸವಾನಿ ಬಳಿ ದೇವಸ್ಥಾನಕ್ಕೆ ಹೋಗಲು ಯುವಕ ಹಳ್ಳ ದಾಟಲು ಮುಂದಾಗಿದ್ದಾನೆ. ಈ ವೇಳೆ ತಲೆ ತಿರುಗಿ ಹಳ್ಳಕ್ಕೆ ಬಿದ್ದಾಗ ತಲೆ ಕಲ್ಲಿಗೆ ಬಡಿದು ಯುವಕ ಮೃತಪಟ್ಟಿದ್ದಾನೆ. ತೀರ್ಥಹಳ್ಳಿಯ ಮೊಬೈಲ್‌ ಶಾಪ್‌ನಲ್ಲಿ ಮೃತ ಯುವಕ ಕೆಲಸ ಮಾಡುತ್ತಿದ್ದ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version