Site icon Vistara News

Peacock meat : ಮಾಂಸಕ್ಕಾಗಿ ವಿಷದ ಕಾಳು ಎಸೆದು ನವಿಲುಗಳ ಕೊಂದರು; ಬೆನ್ನಟ್ಟಿದಾಗ ನದಿಗೆ ಹಾರಿದ ಕಿಡಿಗೇಡಿಗಳು

two people killed peacocks for meat

ಚಿಕ್ಕೋಡಿ: ಮಾಂಸಕ್ಕಾಗಿ ನವಿಲುಗಳ ಸಂಹಾರ (Peacock meat) ಮಾಡಿದ ಕಿಡಿಗೇಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಕೆಲ ದುಷ್ಕರ್ಮಿಗಳು ವಿಷದ ಕಾಳು ಹಾಕಿ ಸುಮಾರು 9ಕ್ಕೂ ಹೆಚ್ಚು ನವಿಲುಗಳನ್ನು ಕೊಂದಿದ್ದಾರೆ.

ಮಾಂಸಕ್ಕಾಗಿ ನವಿಲುಗಳನ್ನು ಕೊಂದಿದ್ದು, ಇದನ್ನೂ ಗಮನಿಸಿದ ಮಾಂಜರಿ ಗ್ರಾಮಸ್ಥರು ಕಳ್ಳರನ್ನು ಬೆನ್ನಟ್ಟಿದ್ದಾರೆ. ಈ ವೇಳೆ ಅವರಿಂದ ತಪ್ಪಿಸಿಕೊಳ್ಳಲು ಕೃಷ್ಣಾ ನದಿಗೆ ಹಾರಿ ಪರಾರಿ ಆಗಿದ್ದಾರೆ.

ಕೃಷ್ಣಾ ನದಿ ದಡದ ಆಚೆಗೆ ಬೈಕ್ ನಿಲ್ಲಿಸಿ ನವಿಲುಗಳನ್ನು ಕೊಲ್ಲಲ್ಲು ಬಂದಿದ್ದರು. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಂಜರಿ ಗ್ರಾಮಸ್ಥರು ಈ ಬಗ್ಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಮರಣೋತ್ತರ ಪರೀಕ್ಷೆಗಾಗಿ ನವಿಲುಗಳನ್ನು ರವಾನೆ ಮಾಡಿದರು.

ಇದನ್ನೂ ಓದಿ: Road Accident : ಚಾರ್ಮಾಡಿ ಘಾಟ್‌ನಲ್ಲಿ ದಟ್ಟ ಮಂಜು; ನಿಯಂತ್ರಣ ತಪ್ಪಿ 2000 ಅಡಿ ಪ್ರಪಾತಕ್ಕೆ ಬಿದ್ದ ಟಿಪ್ಪರ್‌ ಚಾಲಕ!

ಇದೇ ವೇಳೆ ಆರ್‌ಎಫ್‌ಓ (RFO) ಪ್ರಶಾಂತ ಗೌರಾಣಿ ವಿರುದ್ಧ ಸ್ಥಳೀಯರು ಕಿಡಿಕಾರಿದರು. ಈ ಹಿಂದೆ ನವಿಲುಗಳ ಮಾರಣಹೋಮದ ಕುರಿತು ಮಾಹಿತಿ ನೀಡಲಾಗಿತ್ತು. ಆದರೆ ಅರಣ್ಯಾಧಿಕಾರಿಗಳು ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೇ ಬೇಜವಾಬ್ದಾರಿ ವಹಿಸಿದ್ದರು. ಹೀಗಾಗಿ ಕಿಡಿಗೇಡಿಗಳು ತಮ್ಮ ಕೃತ್ಯವನ್ನು ಮುಂದುವರಿಸಿದ್ದಾಗಿ ತಿಳಿಸಿದ್ದಾರೆ.

ಮಾಂಜರಿ ಗ್ರಾಮದಲ್ಲಿ ನವಿಲುಗಳ ಮಾರಣಹೋಮ ವಿಚಾರವಾಗಿ ಪ್ರಕರಣ ದಾಖಲಾಗಿತ್ತು. ಶನಿವಾರ ಅರಣ್ಯ ಇಲಾಖೆ ಸಿಬ್ಬಂದಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಇಟ್ಟಿಗೆ ಖಾರ್ನೆಯಲ್ಲಿ ಕೆಲಸ ಮಾಡುವ ಮಂಜುನಾಥ ಪವಾರ ಎಂಬಾತನನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟವನ್ನು ನಡೆಸಿದ್ದಾರೆ. ಇನ್ನೂ ಈವರೆಗೆ ವಿಷಪೂರಿತ ಕಾಳು ತಿಂದು ಒಟ್ಟು 11 ನವಿಲುಗಳು ಮೃತಪಟ್ಟಿವೆ.

ಇದನ್ನೂ ಓದಿ: Love and death : ಪ್ರೀತ್ಸೆ ಪ್ರೀತ್ಸೆ ಎಂದು ಯುವಕನ ಕಿರುಕುಳ; ಅಪಮಾನದಿಂದ ಯುವತಿ ಆತ್ಮಹತ್ಯೆ

ಮಂಡ್ಯದ ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪ್ರತ್ಯಕ್ಷ

ಮಂಡ್ಯ ತಾಲೂಕಿನ ಕನ್ನಲಿ ಗ್ರಾಮದಲ್ಲಿ ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿಗಳು ಪ್ರತ್ಯಕ್ಷವಾಗಿವೆ. ಗ್ರಾಮದ ಶ್ರೀನಿವಾಸ್ ಎಂಬುವವರ ಜಮೀನಿನಲ್ಲಿ ಚಿರತೆಗಳು ಪ್ರತ್ಯಕ್ಷವಾಗಿವೆ. ಗ್ರಾಮಸ್ಥರು ಒಂದು ಚಿರತೆ ಮರಿಯನ್ನು ರಕ್ಷಣೆ ಮಾಡಿದ್ದಾರೆ. ಇನ್ನೆರಡು ಮರಿಗಳನ್ನು ತಾಯಿ ಚಿರತೆಯು ಕಚ್ಚಿಕೊಂಡು ಕಬ್ಬಿನಗದ್ದೆಯಲ್ಲೆ ಇದೆ.

ಬೋರಾಪುರ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ಇರುವ ಜಮೀನಿನಲ್ಲಿ ಕಬ್ಬು ಕಟಾವು ವೇಳೆ ಚಿರತೆ ಮರಿಗಳು ಸಿಕ್ಕಿವೆ. ಇನ್ನು ಗ್ರಾಮದ ಯುವಕರೆಲ್ಲರೂ ಚಿರತೆ ಮರಿ ಜತೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಚಿರತೆ ಸೆರೆ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಚಿರತೆ ಸುದ್ದಿ ಹರಿದಾಡುತ್ತಿದ್ದಂತೆ ಚಿರತೆ ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಮುಗಿಬಿದ್ದಿದ್ದಾರೆ.

ಕೊಪ್ಪಳದಲ್ಲಿ ಚಿರತೆ ಭೀತಿ; ಡಂಗುರ ಸಾರಿದ ಗ್ರಾಮಸ್ಥರು

ಕೊಪ್ಪಳ ತಾಲೂಕಿನ ಬಸಾಪುರದ ಗ್ರಾಮಸ್ಥರಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಆತಂಕ ಹೆಚ್ಚಿಸಿದೆ. ಗುಡ್ಡದ ಹತ್ತಿರ ಹೋಗದಂತೆ ಡಂಗುರ ಸಾರಿದ್ದು, ಸಂಜೆ 6 ರಿಂದ 9 ರೊಳಗಾಗಿ ಮನೆ ಸೇರಬೇಕು. ಗುಡ್ಡದಲ್ಲಿ ಚಿರತೆಗಳಿವೆ ಎಂದು ಸಾರುತ್ತಿದ್ದಾರೆ.

ಇತ್ತೀಚಿಗೆ ಗ್ರಾಮದ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ ತಮ್ಮ ಸುರಕ್ಷತೆಯ ದೃಷ್ಟಿಯಿಂದ ಈಗ ಗ್ರಾಮಸ್ಥರೆ ಎಚ್ಚರಿಕೆ ವಹಿಸಲು ನಿರ್ಧರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version