Site icon Vistara News

BMTC Bus Accident: ಬಿಎಂಟಿಸಿ ಬಸ್‌ಗೆ ಸಿಲುಕಿ ಪಾದಚಾರಿ ಸಾವು; ತಲೆ ಛಿದ್ರ ಛಿದ್ರ

Bmtc bus

ಬೆಂಗಳೂರು: ಬಿಎಂಟಿಸಿ ಬಸ್ಗೆ ಸಿಲುಕಿ ಪಾದಚಾರಿ ಮೃತಪಟ್ಟಿರುವ ಘಟನೆ ಕಬ್ಬನ್‌ಪಾರ್ಕ್ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶುಕ್ರವಾರ ಸಂಜೆ ಯುಬಿ ಸಿಟಿ ಸಿಗ್ನಲ್ ಬಳಿ ಬಸ್‌ ಚಕ್ರದಡಿ ಸಿಲುಕಿದ್ದರಿಂದ ವ್ಯಕ್ತಿಯ ತಲೆ ಛಿದ್ರ ಛಿದ್ರವಾಗಿದೆ. ರಸ್ತೆ ದಾಟುವಾಗ ಬಿಎಂಟಿಸಿ ಬಸ್‌ನಡಿ (BMTC Bus Accident) ಸಿಲುಕಿ ಪಾದಚಾರಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಗೂಡ್ಸ್ ವಾಹನ-ಬೈಕ್ ಡಿಕ್ಕಿಯಾಗಿ ಸವಾರ ಸಾವು

ರಾಯಚೂರು: ಗೂಡ್ಸ್ ವಾಹನ ಮತ್ತು ಬೈಕ್ ನಡುವೆ ಮುಖಾಮುಖಿಯಾಗಿ ಡಿಕ್ಕಿಯಾಗಿ ಸ್ಥಳದಲ್ಲಿಯೇ ಬೈಕ್‌ ಸವಾರ ಮೃತಪಟ್ಟಿರುವ ಘಟನೆ ಲಿಂಗಸಗೂರು ತಾಲೂಕಿನ ಅಮರೇಶ್ವರ ಕ್ರಾಸ್ ಬಳಿ ನಡೆದಿದೆ. ಮತ್ತಣ್ಣ (40) ಮೃತ ವ್ಯಕ್ತಿ. ಅಪಘಾತದ ರಭಸಕ್ಕೆ ತಲೆಯಿಂದ‌ ಬೈಕ್‌ ಸವಾರನ ಮೆದುಳು ಹೊರಕ್ಕೆ ಬಂದಿದೆ.

ರಾತ್ರಿ ಕಾಣೆಯಾದವಳು ಬೆಳಗ್ಗೆ ಮನೆ ಮುಂದೆ ಶವವಾಗಿ ಪತ್ತೆ!

ಬೆಂಗಳೂರು: ಮಹದೇವಪುರ ಲಕ್ಷ್ಮಿಸಾಗರ ಲೇಔಟ್‌ನಲ್ಲಿ ಯುವತಿಯೊಬ್ಬಳು ಶವವಾಗಿ (Dead body Found) ಪತ್ತೆ ಆಗಿದ್ದಾಳೆ. ಮಹಾನಂದ (21) ಮೃತ ದುರ್ದೈವಿ.

ಮಹಾನಂದ ಕಾಣೆಯಾಗಿದ್ದಾಳೆ (Missing Case) ಎಂದು ಪರಿಚಯಸ್ಥರು ಪೊಲೀಸ್ ಠಾಣೆಗೆ ಗುರುವಾರ ರಾತ್ರಿ ದೂರು ನೀಡಿದ್ದರು. ಆದರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಮಹಾನಂದ ಶವವಾಗಿ ಪತ್ತೆ ಆಗಿದ್ದಾಳೆ. ಬೆಳಗ್ಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಮನೆ ಮುಂದೆಯೇ ಮೃತದೇಹವು ಪತ್ತೆ ಆಗಿದೆ.

ಕಲಬುರಗಿ ಮೂಲದ ಮಹಾನಂದ ಬೆಂಗಳೂರಲ್ಲಿ ಶೆಲ್ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಸದ್ಯ ವಿಷಯ ತಿಳಿದು ಘಟನಾ ಸ್ಥಳಕ್ಕೆ ಮಹದೇವಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಪತ್ತೆಯಾಗಿಲ್ಲ. ಹೀಗಾಗಿ ಯುವತಿ ಸಾವಿನ ಕುರಿತು ಹಲವು ಅನುಮಾನಗಳು ಹುಟ್ಟಿಕೊಂಡಿವೆ. ‌

ಇದನ್ನೂ ಓದಿ | Road Accident : ರಿಪ್ಪನ್‌ಪೇಟೆಯಲ್ಲಿ ಕಾರು ಗುದ್ದಿ ಬೈಕ್‌ ಸವಾರ ಗಂಭೀರ; ರಾಯಚೂರಲ್ಲಿ ಬೈಕ್‌ ಸವಾರನ ತಲೆ ಚೂರು!

ಸದ್ಯ ಮಹದೇವಪುರ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣದ ಕುರಿತು ತನಿಖೆಯನ್ನು ಮುಂದುವರಿಸಿದ್ದಾರೆ.

ತುಂಗಾ ನದಿಯಲ್ಲಿ ವೃದ್ಧೆಯ ಶವ ಪತ್ತೆ

ಶಿವಮೊಗ್ಗ: ನಗರದ ಕೋರ್ಪಳಯ್ಯನ ಛತ್ರ ಬಳಿ ಇರುವ ನದಿಯಲ್ಲಿ ವೃದ್ಧೆಯ ಶವ ಪತ್ತೆ ಆಗಿದೆ. ವೃದ್ಧೆ ಪ್ರತಿನಿತ್ಯ ಅದೇ ಪರಿಸರದಲ್ಲಿ ತಿರುಗಾಡುತ್ತಿದ್ದರು. ದೇಗುಲಗಳಿಗೆ ಭೇಟಿ ನೀಡುತ್ತಿದ್ದರು ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ಹೊರಗೆ ಎಳೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version