Site icon Vistara News

Road Accident: ರಸ್ತೆ ದಾಟುತ್ತಿದ್ದಾಗ ಇನ್ನೋವಾ ಕಾರು ಡಿಕ್ಕಿಯಾಗಿ ಪಾದಚಾರಿ ಸಾವು

Road Accident in channarayapatna

#image_title

ಹಾಸನ: ರಸ್ತೆ ದಾಟುತ್ತಿದ್ದಾಗ ಇನ್ನೋವಾ ಕಾರು ಡಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ (Road Accident) ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಗೂಳಿಹೊನ್ನೇನಹಳ್ಳಿ ಗ್ರಾಮದ ಬಳಿ ಭಾನುವಾರ ರಾತ್ರಿ ನಡೆದಿದೆ. ಜಗದೀಶ್ (55) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ.

ಇನ್ನೋವಾ ಕಾರು ಸರ್ವೀಸ್ ರಸ್ತೆಯಲ್ಲಿ ಬಂದು ಪಾದಚಾರಿಗೆ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇನ್ನು ರಸ್ತೆ ಕಾಮಗಾರಿ ಅವಧಿಯೊಳಗೆ ಮುಗಿಸದ ಹಿನ್ನೆಲೆಯಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಯಿತು.

ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಯುವಕರ ಸಾವು

ರಾಮನಗರ: ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಯುವಕರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದಕ್ಕೂ ಮೊದಲು ಒಬ್ಬ ಯುವಕ ಮೃತಪಟ್ಟಿದ್ದ.

ರಾಮನಗರದ ಮಂಜುನಾಥ್ ನಗರ ನಿವಾಸಿ ವಿಜಯ್ (23), ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಗ್ರಾಮದ ನಿವಾಸಿ ವಿನಯ್ (23) ಮೃತರು. ಮತ್ತೊಬ್ಬ ಗಾಯಾಳು ನಿಖಿಲ್‌ಗೆ ಚಿಕಿತ್ಸೆ ಮುಂದುವರಿದಿದೆ.

ನಾಲ್ವರು ಸ್ನೇಹಿತರು ಮದ್ದೂರಿನ ಬೆಸಗರಹಳ್ಳಿಗೆ ಬಟ್ಟೆ ತರಲು ಹೋಗಿದ್ದರು. ವಾಪಸ್‌ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಕಾರು ಡಿಕ್ಕಿಯಾಗಿತ್ತು. ಈ ವೇಳೆ ಮದ್ದೂರು ಮೂಲದ ಚಾಲಕ ಮಂಜೇಶ್(28) ಸ್ಥಳದಲ್ಲೇ ಮೃತಪಟ್ಟಿದ್ದರು. ಆಗ ಗಂಭೀರ ಗಾಯಗೊಂಡಿದ್ದ ವಿನಯ್, ವಿನಯ್ ಹಾಗೂ ನಿಖಿಲ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ವಿಜಯ್ ಮತ್ತು ವಿನಯ್ ಕೂಡ ಮೃತಪಟ್ಟಿದ್ದಾರೆ.

Exit mobile version