Site icon Vistara News

Mysore Dasara: ಚಿನ್ನದ ಅಂಬಾರಿ ನೋಡಲು ಚಾಪೆ ಹಾಸಿ ಜಾಗ ರಿಸರ್ವ್‌ ಮಾಡಿದರು!

booked a place

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ (Mysore Dasara) ಕೊನೆಯ ದಿನ ವಿಜಯದಶಮಿಯಂದು (ಅ.24) ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ವೀಕ್ಷಿಸಲು ವಿವಿಧೆಡೆಯಿಂದ ಲಕ್ಷಾಂತರ ಜನರು ನಗರಕ್ಕೆ ಆಗಮಿಸುತ್ತಾರೆ. ಈ ನಡುವೆ ಚಿನ್ನದ ಅಂಬಾರಿಯಲ್ಲಿ ಸಾಗುವ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ಕೆಲವರು, ಸೋಮವಾರವೇ ರಸ್ತೆ ಬದಿ ಚಾಪೆ ಹಾಸಿ ಜಾಗ ಕಾಯ್ದಿರಿಸಿರುವುದು ಕಂಡುಬಂದಿದೆ.

ಮಂಗಳವಾರ ಸಂಜೆ ಜಂಬೂ ಸವಾರಿಗೆ (Jumboo Savari) ಚಾಲನೆ ನೀಡಲಾಗುತ್ತದೆ. ಹೀಗಾಗಿ ಮೆರವಣಿಗೆ ನೋಡಲು ಮುಂಜಾನೆಯಿಂದಲೇ ಜನರು ರಸ್ತೆ ಬದಿ, ಕಟ್ಟಡಗಳ ಮೇಲೆ ಕಾಯುತ್ತಾ ಇರುತ್ತಾರೆ. ಜನಸಂದಣಿ ಹೆಚ್ಚಾಗುವುದರಿಂದ ಕೆಲವರು ಮೊದಲೇ ಹೋಗಿ ತಮಗೆ ಬೇಕಾದ ಜಾಗಗಳಲ್ಲಿ ನಿಲ್ಲುತ್ತಾರೆ. ಹೀಗಾಗಿ ಕೆಲವರು ಚಾಪೆ, ಗೋಣಿಚೀಲ, ಟಾರ್ಪಲ್ ಹಾಕಿ ಜಾಗ ಕಾಯ್ದಿರಿಸಿದ್ದಾರೆ.

ಮಂಗಳವಾರ ಸಂಜೆ ಜಂಬೂ ಸವಾರಿಗೆ ಚಾಲನೆ

ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಶುರುವಾಗಿದೆ. ಇದಕ್ಕಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅರಮನೆಯ ಆವರಣದಲ್ಲಿ ಮೆರವಣಿಗೆ ವೀಕ್ಷಿಸಲು ಅನುಕೂಲವಾಗುವಂತೆ ಶಾಮಿಯಾನ ಹಾಕಿ, ಆಸನಗಳ ವ್ಯವಸ್ಥೆ ಮಾಡಲಾಗಿದೆ. ಜತೆಗೆ ವ್ಯಾಪಕ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಇದನ್ನೂ ಓದಿ | Raja Marga Column: ಆಧುನಿಕ ಭಾರತದ ನವದುರ್ಗೆಯರು; ಇವರ ಹೋರಾಟ ಒಂದು ಮಹಾಚರಿತ್ರೆ

ಮಂಗಳವಾರ (ಅ.24) ಮಧ್ಯಾಹ್ನ 1:46 ರಿಂದ 2:08 ಗಂಟೆಯೊಳಗಿನ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದ ಬಳಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಂದಿಧ್ವಜ ಕಂಬಕ್ಕೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಸಂಜೆ 4:40 ರಿಂದ 5 ಗಂಟೆಯೊಳಗಿನ ಶುಭ ಮೀನ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಸೇರಿ ಇತರ ಗಣ್ಯರಿಂದ ಪುಷ್ಷಾರ್ಚನೆ ಮಾಡುತ್ತಾರೆ. ನಂತರ ಜಂಬೂ ಸವಾರಿ ಆರಂಭವಾಗಿ ಬನ್ನಿ ಮಂಟಪದ ಬಳಿ ಮುಕ್ತಾಯವಾಗಲಿದೆ. ಮೆರವಣಿಗೆ ವೀಕ್ಷಿಸಲು 5 ಲಕ್ಷ ಜನರು ಆಗಮಿಸುವ ನಿರೀಕ್ಷೆಯಿದೆ.

ಅರಮನೆಯಲ್ಲಿ ಆಯುಧ ಪೂಜೆ ನೆರವೇರಿಸಿದ ರಾಜ ಯದುವೀರ್‌ ಒಡೆಯರ್

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವ ವಿಖ್ಯಾತ ದಸರಾ (Mysore dasara) ಅಂತಿಮ ಹಂತಕ್ಕೆ ಬಂದಿದೆ. ನವರಾತ್ರಿಯ (Navratri Celebrations) 9ನೇ ದಿನವಾದ ಸೋಮವಾರ (ಅಕ್ಟೋಬರ್‌ 23) ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಅವರು ಅರಮನೆಯಲ್ಲಿ (Mysore Palace) ಸಾಂಪ್ರದಾಯಿಕವಾಗಿ ಆಯುಧ ಪೂಜೆ (Ayudha Puja) ನೆರವೇರಿಸಿದರು. ಅಲ್ಲದೆ, ಖಾಸಾ ಆಯುಧಗಳಿಗೆ ಪೂಜೆ ಸಲ್ಲಿಸಿದರು.

ಇದನ್ನೂ ಓದಿ | Dasara 2023 : ಸ್ತಬ್ಧ ಚಿತ್ರಗಳಿಗೆ ಫೈನಲ್ ಟಚ್; ಜಂಬೂ ಸವಾರಿಯಲ್ಲಿ ಗ್ಯಾರಂಟಿ ಯೋಜನೆಗಳ ಮೆರವಣಿಗೆ

ಬಳಿಕ ಸವಾರಿ ತೊಟ್ಟಿಯಲ್ಲಿ ಪಟ್ಟದ ಆನೆ, ಕುದುರೆ, ಹಸು, ವಾಹನಗಳಿಗೂ ಯದುವೀರ್ ಒಡೆಯರ್ ಅವರು ಪೂಜೆ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಅರಮನೆಯೊಳಗೆ ಪಟ್ಟದ ಆನೆ, ಹಸು, ಕುದುರೆಯನ್ನು ಪೂಜೆಗಾಗಿ ಶೃಂಗರಿಸಿ ಸಿದ್ಧತೆ ಮಾಡಿಡಲಾಗಿತ್ತು. ಇನ್ನು ಅರಮನೆಯ 10 ಪಿರಂಗಿಗಳಿಗೂ ಪೂಜೆ ಸಲ್ಲಿಸಲಾಗಿದೆ. ಇನ್ನು ಯಧುವೀರ್‌ ಒಡೆಯರ್‌ ಅವರು ಬಳಕೆ ಮಾಡುವ ಕಾರುಗಳ ಸಹಿತ ರಾಜ ಮನೆತನದ ಕಾರುಗಳಿಗೂ ಯದುವೀರ್‌ ಒಡೆಯರ್‌ ಅವರು ಪೂಜೆ ಸಲ್ಲಿಸಿದರು.

Exit mobile version