Site icon Vistara News

ಮೇ 27ರಂದು JNN ಇಂಜಿನಿಯರಿಂಗ್ ಕಾಲೇಜು ‘ಟೆಕ್ ಅನ್ವೇಷಣ್ 2022’

ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜು

ಶಿವಮೊಗ್ಗ: ನಗರದ JNN ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೇ 27 ಮತ್ತು 28 ರಂದು ವಿದ್ಯಾರ್ಥಿಗಳ ನಾವೀನ್ಯ ಯೋಜನೆಗಳ ಪ್ರದರ್ಶನ – ‘ಟೆಕ್ ಅನ್ವೇಷಣ್-2022’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂಶುಪಾಲರಾದ ಡಾ.ಕೆ.ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿವಿಲ್, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್, ಇನ್‌ಫಾರ್ಮೇಷನ್‌ ಸೈನ್ಸ್, ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್, ಎಂ.ಸಿ.ಎ ವಿಭಾಗಗಳ ವಿದ್ಯಾರ್ಥಿಗಳಿಂದ ಕೃತಕ ಬುದ್ದಿಮತ್ತೆ, ಇಮೇಜ್ ಪ್ರೊಸೆಸಿಂಗ್, ಸೆನ್ಸಾರ್ ಟೆಕ್ನಾಲಜಿ, ನ್ಯೂರಲ್ ನೆಟವರ್ಕ್, ತ್ರಿಡಿ ಮ್ಯಾಪಿಂಗ್, ರೊಬೊಟಿಕ್ಸ್, ಐಓಟಿ, ಬಿಟುಮಿನಸ್ ಘಟಕಗಳು, ಕಾಮ್ ಪೇವ್‌ಮೆಂಟ್ಸ್ ಸೇರಿದಂತೆ ಅನೇಕ ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದಂತೆ ಸುಮಾರು 80 ಕ್ಕೂ ಹೆಚ್ಚು ನಾವಿನ್ಯ ಪ್ರಯೋಗಗಳು ಪ್ರದರ್ಶನಗೊಳ್ಳಲಿವೆ.

ನಗರದ ವಿವಿಧ ಕಾಲೇಜಿಗಳ ಪಿಯು ಮತ್ತು ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ಉನ್ನತ ಶಿಕ್ಷಣದ ಬಹು ಆಯ್ಕೆಗಳು ಸೇರಿದಂತೆ ಅನೇಕ ತಾಂತ್ರಿಕ ವಿಷಯ ಹಾಗೂ ಅನ್ವೇಷಣೆಗಳ ಕುರಿತಾಗಿ ಅರಿವು ಪಡೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು. ಬೆಳಿಗ್ಗೆ 9:30ಕ್ಕೆ ಕಾಲೇಜಿನ ಆಡಳಿತ ವಿಭಾಗ ಕಟ್ಟಡದ ಸೆಮಿನಾರ್ ಸಭಾಂಗಣದಲ್ಲಿ ನಡೆಯುವ ಉದ್ಘಾಟನಾ ಸಮಾರಂಭವನ್ನು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಅಧ್ಯಕ್ಷರಾದ ಎನ್. ಗೋಪಿನಾಥ ಉದ್ಘಾಟನೆ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್. ನಾರಾಯಣರಾವ್, ಉಪಾಧ್ಯಕ್ಷರಾದ ಸಿ.ಆರ್. ನಾಗರಾಜ, ಕಾರ್ಯದರ್ಶಿಗಳಾದ ಎಸ್.ಎನ್. ನಾಗರಾಜ, ಸಹ ಕಾರ್ಯದರ್ಶಿಗಳಾದ ಡಾ.ಪಿ. ನಾರಾಯಣ್, ಖಜಾಂಚಿಗಳಾದ ಡಿ.ಜಿ. ರಮೇಶ್ ಭಾಗವಹಿಸಲಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಕಾಲೇಜಿನ ಶೈಕ್ಷಣಿಕ ಡೀನ್ ಡಾ.ಮಂಜುನಾಥ ಪಿ, ಕಾರ್ಯಕ್ರಮ ಸಂಯೋಜಕರಾದ ಜಿ.ಸುರೇಶ್, ಡಾ.ಸಂತೋಷ್ ಶಾನಭಾಗ್, ಪಿ.ಆರ್.ಓ ಸಿ.ಎಂ. ನೃಪತುಂಗ ಉಪಸ್ಥಿತರಾಗಿದ್ದರು.

ಇದನ್ನೂ ಓದಿ:ಶಿಕ್ಷಣ ಗುಣಮಟ್ಟ ಹೆಚ್ಚಳಕ್ಕೆ ಸರ್ಕಾರದ ಆದ್ಯತೆ: ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ

Exit mobile version