ಮೈಸೂರು: ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿರುವ ಪ್ರದೇಶವಾಗಿರುವ ಪಿರಿಯಾಪಟ್ಟಣ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕೆ.ವಂಕಟೇಶ್ (85944) ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್‌ನ ಕೆ.ಮಹದೇವ್ (66269) ವಿರುದ್ಧ ವಿಜಯ ಸಾಧಿಸಿದ್ದಾರೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ವೆಂಕಟೇಶ್ ವಿರುದ್ಧ ಜೆಡಿಎಸ್‌ನ ಕೆ ಮಹದೇವ 7,493 ಮತಗಳ ಗೆಲುವು ದಾಖಲಿಸಿದ್ದರು.
1952ರಿಂದ 2018ರವರೆಗೆ ಪಿರಿಯಾಪಟ್ಟಣ ಕ್ಷೇತ್ರಕ್ಕೆ 15 ಚುನಾವಣೆಗಳನ್ನು ನಡೆದಿವೆ. ಈ ಚುನಾವಣೆಗಳಲ್ಲಿ ಆರು ಬಾರಿ ಕಾಂಗ್ರೆಸ್ ಗೆದ್ದಿದ್ದರೆ, 3 ಬಾರಿ ಜೆಡಿಎಸ್ ಗದ್ದುಗೆ ಏರಿದೆ. ಎರಡು ಬಾರಿ ಪಕ್ಷೇತರ, ಒಮ್ಮೆ ಜನತಾ ಪಕ್ಷ , ಮಗದೊಮ್ಮೆ ಬಿಜೆಪಿಗೂ ಗೆಲುವು ಕಂಡಿದೆ.
ಇದನ್ನೂ ಓದಿ : Hunsur Election Results : ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್‌ನ ಹರೀಶ್ ಗೌಡಗೆ ಗೆಲುವು
2018 ಚುನಾವಣೆಯಲ್ಲಿ ಸೋಲು ಕಂಡಿರುವ ಹೊರತಾಗಿಯೂ ಕೆ ವೆಂಕಟೇಶ್ ಪಿರಿಯಾಪಟ್ಟಣ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದರು. 1985ರಿಂದ ಒಟ್ಟಾರೆ ಈ ಕ್ಷೇತ್ರದಲ್ಲಿ ವೆಂಕಟೇಶ್ ಐದು ಬಾರಿ ಗೆಲುವು ದಾಖಲಿಸಿದ್ದಾರೆ. ಪಕ್ಷ ಬದಲಿಸಿದ್ದರೂ ವೆಂಕಟೇಶ್ ಮೇಲೆ ಅಲ್ಲಿನ ಜನ ಅಭಿಮಾನ ಬಿಟ್ಟಿರಲಿಲ್ಲ.
180460 ಮತಗಳನ್ನು ಹೊಂದಿರುವ ಈ ಕ್ಷೇತ್ರದಲ್ಲಿ 91276 ಪುರುಷ ಹಾಗೂ 89184 ಮಹಿಳಾ ಮತದಾರರಿದ್ದಾರೆ. ತ್ರದಲ್ಲಿ ಒಕ್ಕಲಿಗರು 40 ಸಾವಿರ, ಕುರುಬರು 37 ಸಾವಿರ, ಪರಿಶಿಷ್ಟ ಜಾತಿ 47 ಸಾವಿರ, ಪರಿಶಿಷ್ಟ ಪಂಗಡ 20 ಸಾವಿರ, ಮುಸ್ಲಿಂ 15 ಸಾವಿರ, ಕ್ರಿಶ್ಚಿಯನ್ನರು 16 ಸಾವಿರ, ಲಿಂಗಾಯತರು 14 ಸಾವಿರ, ಇತರೆ ಸಮುದಾಯದ 30 ಸಾವಿರ ಮತದಾರರು ಇದ್ದಾರೆ.