Site icon Vistara News

ಮ್ಯಾಟ್ರಿಮೋನಿ ಮೂಲಕ ಯುವತಿಗೆ 65 ಲಕ್ಷ ರೂಪಾಯಿ ವಂಚಿಸಿದ್ದವನ ಬಂಧನ

ಬೆಂಗಳೂರು: ಮದುವೆಯಾಗಲು ಉತ್ತಮ ಸಂಗಾತಿಗಾಗಿ ಮ್ಯಾಟ್ರಿಮೊನಿ ವೆಬ್‌ಸೈಟ್‌ ಸರ್ಚ್ ಮಾಡುತ್ತಿದ್ದೀರಾ? ಹಾಗಾದರೆ, ಅಲ್ಲಿ ನಡೆಯವು ವಂಚನೆಯ ಬಗ್ಗೆಯೂ ಸ್ವಲ್ಪ ತಿಳಿದುಕೊಳ್ಳುವುದು ಉತ್ತಮ. ಯಾಕೆಂದರೆ, ಸಿಕ್ಕ ಸಿಕ್ಕ ಪ್ರೊಫೈಲ್ ಜತೆ ಚಾಟಿಂಗ್, ಡೇಟಿಂಗ್ ಮಾಡುವಾಗ ಎಚ್ಚರದಿಂದ ಇರಬೇಕಾಗುತ್ತದೆ, ಇಲ್ಲದಿದ್ದರೆ ಅಂಥ ಜಾಲತಾಣಗಳಲ್ಲಿ ನುಸುಳಿಕೊಂಡಿರುವ ಖದೀಮರು ನಿಮ್ಮನ್ನು ನಯವಾಗಿ ಮೋಸದ ಬಲೆಗೆ ಸಿಲುಕಿಸುತ್ತಾರೆ.

ನಗರದಲ್ಲಿ ಮ್ಯಾಟ್ರಿಮೊನಿ ವೆಬ್‌ಸೈಟ್‌ನಲ್ಲಿ ವಿವಾಹಕ್ಕೆ ಸೂಕ್ತ ವರನಿಗಾಗಿ ಹುಡುಕುತ್ತಿದ್ದ ಯುವತಿಯೊಬ್ಬಳ ಜತೆ ಪರಿಚಯ ಬೆಳೆಸಿದ ಖದೀಮನೊಬ್ಬ, ಸಲುಗೆಯಿಂದ ಮಾತನಾಡಿ 65 ಲಕ್ಷ ರೂಪಾಯಿ ರೂಪಾಯಿ ಪೀಕಿರುವುದೇ ಇದಕ್ಕೆ ಸಾಕ್ಷಿ. ಅಷ್ಟೂ ಸಾಲದೆಂಬಂತೆ ಯುವತಿಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ಮದುವೆಯಾಗುವುದಿಲ್ಲ ಎಂದು ಕೈಕೊಟ್ಟಿದ್ದಾನೆ. ಇದೀಗ ಯುವತಿ ನೀಡಿದ ದೂರಿನ ಮೇರೆಗೆ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.

ಪ್ರಶೂಭ್‌ ಎಂಬಾತ ಬಂಧಿತ ಆರೋಪಿ. ಈತ ಯುವತಿಗೆ ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಪರಿಚಯವಾಗಿದ್ದ. ಆಕೆ ಜತೆಗಿನ ಪರಿಚಯ ಒಂದು ವರ್ಷದೊಳಗೆ ಪ್ರೀತಿಯಾಗಿ ಬದಲಾಗಿತ್ತು. ಯುವತಿ ಜತೆ ನಿರಂತರ ಚಾಟಿಂಗ್‌, ಡೇಟಿಂಗ್‌ನಲ್ಲಿದ್ದ ಯುವಕ ಮನೆಯಲ್ಲಿ ತಂದೆಗೆ ಹುಷಾರಿಲ್ಲ, ತಾಯಿಗೆ ಆರೋಗ್ಯ ಸರಿಯಿಲ್ಲ ಎಂದು ಸುಮಾರು 65 ಲಕ್ಷ ರೂಪಾಯಿ ವಸೂಲಿ ಮಾಡಿ, ಬಳಿಕ ಇದ್ದಕ್ಕಿದ್ದ ಹಾಗೆ ಪರಾರಿಯಾಗಿದ್ದ.

ಕೆಲದಿನಗಳ ಬಳಿಕ ಪ್ರಶೂಭ್‌ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಯುವತಿ ಪೊಲೀಸರ ಮೊರೆ ಹೋಗಿದ್ದಾಳೆ. ಯುವಕ ಮದುವೆಯಾಗುವುದಿಲ್ಲ, ಏನು ಮಾಡುತ್ತೀಯಾ ಎಂದಿದ್ದು, ಹಣ ವಾಪಸ್‌ ಕೇಳಿದರೆ ಜೀವ ಬೆದರಿಕೆ ಹಾಕಿದ್ದಾನೆ ನೊಂದ ಯುವತಿ ನೀಡಿದ ದೂರಿನ ಮೇರೆಗೆ ಪ್ರಶೂಭ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ | Praveen Nettaru| ಕೇರಳದ ತಲಶ್ಶೇರಿಯಲ್ಲಿ ಮೂರನೇ ಆರೋಪಿ ಬಂಧನ, ಅಲ್ಲೇನು ಮಾಡ್ತಿದ್ದ?

Exit mobile version