ದಾವಣಗೆರೆ: ಎಟಿಎಂ ಮಷಿನ್‌ನಲ್ಲಿ (ATM Machine) ಹಣ ಡೆಪಾಸಿಟ್ (Money Deposit) ಮಾಡುವಾಗ ಬಹಳ ಎಚ್ಚರಿಕೆ ವಹಿಸಬೇಕು. ಅಲ್ಲದೆ, ಈ ವೇಳೆ ಒಂದು ಸಣ್ಣ ತಪ್ಪು ಮಾಡಿದರೂ ಕೊನೆಗೆ ಪರಿತಪಿಸಬೇಕಾಗುತ್ತದೆ. ಅದನ್ನು ಸರಿ ಮಾಡಿಕೊಳ್ಳಲು ನೂರೆಂಟು ಪ್ರಕ್ರಿಯೆಗಳನ್ನು ನಡೆಸಬೇಕಾಗುತ್ತದೆ. ಇನ್ನು ಅಲ್ಲಿಗೆ ಹಣ ಡೆಪಾಸಿಟ್ ಮಾಡಲೆಂದೋ, ವಿಥ್ ಡ್ರಾ (Money Withdrawn) ಮಾಡಲೆಂದೋ ಹೋಗುವವರು ಸಹ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಡೆಪಾಸಿಟ್ ಮಷಿನ್‌ನಲ್ಲಿ ಹಣ ಕಂಡಿದೆ ಎಂದು ಅದನ್ನು ಹಾಗೆಯೇ ಎತ್ತಿಕೊಂಡು ಹೋದಿರೋ? ಮುಂದೆ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಇಲ್ಲಾಗಿದ್ದೂ ಅದೇ. ವ್ಯಕ್ತಿಯೊಬ್ಬ ಎಟಿಎಂ ಕೇಂದ್ರಕ್ಕೆ ಹೋದಾಗ ಮಷಿನ್ ಒಳಗೆ 52 ಸಾವಿರ ರೂಪಾಯಿ ಕಂಡಿದೆ. ಅದನ್ನು ಆತ ಎತ್ತಿಕೊಂಡು ಹೋಗಿದ್ದಾನೆ. ಇದೇ ಈಗ ಆತನಿಗೆ ಮುಳುವಾಗಿದೆ.
ದಾವಣಗೆರೆ ಪಿ.ಬಿ.ರೋಡ್ ರಿಲಾಯನ್ಸ್ ಮಾರ್ಟ್ ಎದುರಿಗಿರುವ ಐಸಿಐಸಿಐ ಬ್ಯಾಂಕ್‌ನ ಎಟಿಎಂಗೆ (ICICI Bank ATM) ವಿಜಯ್ ಎಂಬುವವರು 52 ಸಾವಿರ ರೂಪಾಯಿಯನ್ನು ಡೆಪಾಸಿಟ್ ಮಾಡಲು ಬ್ಯಾಂಕ್‌ಗೆ ಬಂದಿದ್ದರು. ಡೆಪಾಸಿಟ್ ಮಿಷನ್ ಮೂಲಕ ಹಣ ಹಾಕಲು ಅವರಿಗೆ ಬಾರದ ಕಾರಣ ಅಂಗಡಿ ಸಹಾಯಕನ ಸಹಾಯ ಪಡೆದುಕೊಂಡಿದ್ದರು.
ಇದನ್ನೂ ಓದಿ: Weather Report : ಕರಾವಳಿ, ಮಲೆನಾಡಿನಲ್ಲಿ ಬಿರುಸಾಗಿ ಸುರಿಯಲಿದೆ ಮಳೆ
ಸಹಾಯಕ ರಾಘವೇಂದ್ರ, ವಿಜಯ್ ಅವರು 52 ಸಾವಿರ ರೂಪಾಯಿಯನ್ನು ಡೆಪಾಸಿಟ್ ಮಾಡಿದ್ದರು. ಡೆಪಾಸಿಟ್ ಮಿಷನ್‌ನಲ್ಲಿ ಮಾಹಿತಿ ಭರ್ತಿ ಮಾಡಿದ್ದರು. ಆದರೆ, ಕೊನೆಯಲ್ಲಿ ಡೆಪಾಸಿಟ್ ಬಟನ್ (Deposit Button) ಅನ್ನು ಒತ್ತುವುದಕ್ಕೆ ಗೊತ್ತಾಗದೆಯೋ, ಮರೆತೋ ಅಲ್ಲಿಂದ ನಿರ್ಗಮಿಸಿದ್ದಾರೆ.
ಬಟನ್ ಒತ್ತುವುದನ್ನು ಮರೆತರು!
ಡೆಪಾಸಿಟ್ ಬಟನ್ ಒತ್ತದ ಕಾರಣ ಮಿಷನ್‌ನಲ್ಲಿಯೇ 52 ಸಾವಿರ ರೂಪಾಯಿ ಹಣ ಉಳಿಕೆಯಾಗಿದೆ. ಹಣ ಡೆಪಾಸಿಟ್ ಆಗಿದೆ ಎಂದು ವಿಜಯ್, ರಾಘವೇಂದ್ರ ಹೊರಗೆ ಬಂದಿದ್ದಾರೆ. ಅದೇ ವೇಳೆಗೆ ಹಣ ಡ್ರಾ ಮಾಡಲು ಹೋದ ವ್ಯಕ್ತಿ ಕಣ್ಣಿಗೆ ಆ 52 ಸಾವಿರ ರೂಪಾಯಿ ಕಂಡಿದೆ. ಯಾರೂ ಇಲ್ಲದ್ದನ್ನು ನೋಡಿದ ಆ ವ್ಯಕ್ತಿ 52 ಸಾವಿರ ರೂಪಾಯಿಯನ್ನು ತೆಗೆದುಕೊಂಡು ಹೋಗಿದ್ದಾನೆ.
ಇದನ್ನೂ ಓದಿ: Shakti Scheme : ಬಸ್ ನಿಲ್ಲಿಸದ್ದಕ್ಕೆ ಕಲ್ಲೆಸೆದ ವಿದ್ಯಾರ್ಥಿಗಳು; ಗಾಜು ಪೀಸ್ ಪೀಸ್!
ಆರೋಪಿಯ ಹುಡುಕಾಟ
ಈ ಎಲ್ಲ ದೃಶ್ಯಗಳೂ ಸಿಸಿ ಕ್ಯಾಮೆರಾದಲ್ಲಿ (CC Camera) ಸೆರೆಯಾಗಿದೆ. ಆ ವ್ಯಕ್ತಿ ಎಟಿಎಂ ಕೇಂದ್ರದೊಳಗೆ ಬಂದಿರುವುದು, ಡೆಪಾಸಿಟ್ ಮಷಿನ್ ಎದುರು ನಿಂತಿರುವುದು ಸೇರಿದಂತೆ ಆತನ ಮುಖವು ಸಹ ಕ್ಲಿಯರ್ ಆಗಿ ಕಾಣುವಂತೆ ಕ್ಯಾಮೆರಾ ಕ್ಯಾಪ್ಚರ್ ಮಾಡಿದೆ. ಈ ಬಗ್ಗೆ ಈಗ ವಿಜಯ್ ಅವರು ಕೆಟಿಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದ್ದು, ಹಣ ತೆಗೆದುಕೊಂಡು ಹೋದ ವ್ಯಕ್ತಿಗಾಗಿ ಹುಡುಕಾಟ ನಡೆಯುತ್ತಿದೆ.