ನವದೆಹಲಿ: ಇಂಧನ ಬೆಲೆಯೇರಿಕೆ ಕುರಿತು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಲೀಟರ್‌ಗೆ 40 ಪೈಸೆ (Good News) ಇಳಿಕೆಯಾಗಿದೆ. ಮಂಗಳವಾರ ಬೆಳಗ್ಗೆ 6 (ನವೆಂಬರ್ 1) ಗಂಟೆಯಿಂದಲೇ ಬಂಕ್‌ಗಳಲ್ಲಿ ಪರಿಷ್ಕೃತ ದರದಲ್ಲಿ ಪೆಟ್ರೋಲ್, ಡೀಸೆಲ್ ಲಭ್ಯವಾಗಲಿದೆ.
ಸೋಮವಾರ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್‌ಗೆ 101.94 ರೂ. ಇದ್ದರೆ, ಡೀಸೆಲ್ 87.89 ರೂ. ಇದೆ. ಕಳೆದ ಏಳು ತಿಂಗಳಿನಿಂದ ಬೆಂಗಳೂರು, ದೆಹಲಿ, ಮುಂಬೈ ಸೇರಿ ದೇಶಾದ್ಯಂತ ಒಂದೇ ದರ ಇದೆ. ಇದರ ಬೆನ್ನಲ್ಲೇ ಮತ್ತೆ 40 ಪೈಸೆ ಇಳಿಕೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯ ಇಳಿಕೆಯಿಂದಾಗಿ ಭಾರತದಲ್ಲಿ ತೈಲ ಕಂಪನಿಗಳು ದರ ಇಳಿಕೆ ಮಾಡಿವೆ. ಸದ್ಯ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 95 ಡಾಲರ್‌ಗಿಂತ ಕಡಿಮೆ ಇದೆ. ರಷ್ಯಾ-ಉಕ್ರೇನ್ ಬಿಕ್ಕಟ್ಟಿನಿಂದಾಗಿ ಜಾಗತಿಕವಾಗಿ ತೈಲ ಬಿಕ್ಕಟ್ಟು ಸೃಷ್ಟಿಯಾಗಿದೆ. ಆದರೆ, ಕೆಲ ದಿನಗಳಿಂದ ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರವಾಗಿದೆ.
ಇದನ್ನೂ ಓದಿ | Bike Thieves | ವಿಜಯಪುರದಲ್ಲಿ ಸಿಕ್ಕಿ ಬಿದ್ದರು ಬೈಕ್, ಟ್ರ್ಯಾಕ್ಟರ್ ಕಳ್ಳರು; ಶಿವಮೊಗ್ಗದಲ್ಲಿ ಪೆಟ್ರೋಲ್ ಕಳ್ಳರ ಕಾಟ