ಬೆಂಗಳೂರು: ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವ, ಸಮಾಜದಲ್ಲಿ ಶಾಂತಿ ಕದಡುವ ಯಾವುದೇ ಸಂಘಟನೆ ವಿರುದ್ಧ (PFI Banned) ಸರ್ಕಾರ ಕ್ರಮ ಕೈಗೊಂಡರೂ ವಿರೋಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪಿಎಫ್‌ಐ ನಿಷೇಧ ಕ್ರಮದ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಸಿದ್ದರಾಮಯ್ಯ, ಅದೇ ರೀತಿ ಆರ್‌ಎಸ್‌ಎಸ್ ಮತ್ತಿತರ ಸಂಘಟನೆಗಳು ಕಾನೂನು ವಿರೋಧಿ ಕೃತ್ಯಕ್ಕೆ ಕೈ ಹಾಕಿದರೆ, ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಿದರೆ ಆ ಸಂಘಟನೆಗಳ ವಿರುದ್ಧವೂ ಕ್ರಮ ಜರುಗಿಸಬೇಕು. ಸಮಾಜದ ಶಾಂತಿ-ಸಾಮರಸ್ಯ ಹಾಳು ಮಾಡುವ, ದ್ವೇಷ ರಾಜಕಾರಣ ಮಾಡುವ ಸಂಘಟನೆ ಯಾವುದೇ ಆಗಿರಲಿ ಸರ್ಕಾರ ನಿಷೇಧ ಮಾಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ | ಸಿದ್ದರಾಮಯ್ಯ ನರಹಂತಕ ಸಿಎಂ ಎಂದು ಜರಿದ ನಳಿನ್ ಕುಮಾರ್ ಕಟೀಲ್
ಆರ್‌ಎಸ್ಎಸ್ ದೇಶ ವಿರೋಧಿ ಚಟುವಟಿಕೆ ಮಾಡಲ್ಲ- ಎಂಟಿಬಿ
ಚಿಕ್ಕಬಳ್ಳಾಪುರ: ಆರ್‌ಎಸ್‌ಎಸ್ ಎಂದೂ ಸಹ ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸುವುದಿಲ್ಲ. ದೇಶ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿದೆ ಎಂದಾದರೆ ತೋರಿಸಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸಚಿವರ ಎಂಟಿಬಿ ನಾಗರಾಜ್ ತಿರುಗೇಟು ನೀಡಿದ್ದಾರೆ.
ಆರ್‌ಎಸ್‌ಎಸ್‌ನಂತಹ ಸಂಘಟನೆ ತಪ್ಪು ಮಾಡಿದರೂ ಬ್ಯಾನ್ ಮಾಡಬೇಕು ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ಆರ್‌ಎಸ್ಎಸ್ ಯಾವತ್ತೂ ಸಹ ದೇಶ-ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ. ದೇಶ-ವಿರೋಧಿ ಕೃತ್ಯಗಳಲ್ಲಿ ಬಾಗಿಯಾಗಿದ್ದರೆ ತೋರಿಸಲಿ ಎಂದು ಸವಾಲು ಹಾಕಿದರು.
ಬೇರೆ ಬೇರೆ ಹೆಸರುಗಳಲ್ಲಿ ಮತ್ತೆ ಸಂಘಟನೆಗಳು ಮಾಡಲು ಕಾನೂನು ಬಿಡುವುದಿಲ್ಲ. ಕಾನೂನು ಚೌಕಟ್ಟಿನಲ್ಲಿ ಸಂಘಟನೆಗಳನ್ನು ಸ್ಥಾಪನೆ ಮಾಡಬೇಕು. ಪಿಎಫ್ಐ ಎಸ್‌ಡಿಪಿಐ ಸೇರಿದಂತೆ ಏಳು ಸಂಘಟನೆಯನ್ನು ತಾತ್ಕಾಲಿಕವಾಗಿ ಬ್ಯಾನ್ ಮಾಡಿದ್ದಾರೆ. ದೇಶ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗದಿರುವುದು ತನಿಖೆ ವೇಳೆ ತಿಳಿದುಬಂದರೆ ಮತ್ತೆ ಅವಕಾಶ ಕೊಡಲಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ | PFI Banned | ಕಾಂಗ್ರೆಸ್‌ನ 40% ಆಘಾತಕ್ಕೆ ವಿಲವಿಲನೆ ಒದ್ದಾಡುತ್ತಿದ್ದ BJPಗೆ ಸಿಕ್ಕಿತು ʼಬ್ಯಾನ್ʼ ಬಲ