Site icon Vistara News

PFI Targets | ಬಿಜೆಪಿ-ಆರೆಸ್ಸೆಸ್ ನಾಯಕರು, ಸರ್ಕಾರಿ ಸಂಸ್ಥೆಗಳ ವಿರುದ್ಧ ಪ್ರತೀಕಾರದ ದಾಳಿಗೆ ಪಿಎಫ್ಐ ಸ್ಕೆಚ್ಚು!

PFI

ನವ ದೆಹಲಿ: ದೇಶಾದ್ಯಂತ ನಡೆದ ಎನ್ಐಎ ಕಾರ್ಯಾಚರಣೆಯ ಪ್ರತೀಕಾರವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸರ್ಕಾರಿ ಸಂಸ್ಥೆಗಳು, ಬಿಜೆಪಿ ಮತ್ತು ಆರ್‌ಎಸ್ಎಸ್ ನಾಕರರು ಮತ್ತು ಅವರ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ದಾಳಿ (PFI Targets) ನಡೆಸುವ ಪ್ಲ್ಯಾನ್ ಮಾಡಿಕೊಂಡಿವೆ ಎಂಬ ಮಾಹಿತಿಯನ್ನು ಗುಪ್ತಚರ ಸಂಸ್ಥೆಗಳಿಗೆ ಲಭ್ಯವಾಗಿದೆ.

ತಮ್ಮ ಉನ್ನತ ನಾಯಕರಾಗಿರುವ ಇ ಅಬುಬಕರ್, ಇಎಂ ಅಬ್ದುರ್ ರಹಿಮಾನ್, ಇಎಂ ಆ್ಯಂಡ್ ಕೋಯಾ, ಕಲೀಮ್ ಕೋಯಾ ಸೇರಿದಂತೆ ಇನ್ನಿತರ ನಾಯಕರನ್ನು ಎನ್ಐಎ ಬಂಧಿಸಿದ್ದಕ್ಕೆ ಪಿಎಫ್ಐ ವ್ಯಗ್ರಗೊಂಡಿದೆ. ಈ ಕಾರಣಕ್ಕಾಗಿ ಸಾರ್ವಜನಿಕ ಶಾಂತಿಯನ್ನು ಕದಡುವ ಕೆಲಸಕ್ಕೆ ಪಿಎಫ್ಐ ಸಜ್ಜಾಗಿದೆ ಎಂಬ ಸುಳಿವು ದೊರೆತಿದೆ.

ಪ್ರತೀಕಾರವಾಗಿ ಸರ್ಕಾರಿ ಸಂಸ್ಥೆಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಪಿಎಫ್ಐ ಕೇಡರ್ ಪ್ಲ್ಯಾನ್ ಮಾಡಿಕೊಂಡಿದೆ. ಇದಕ್ಕಾಗಿ ಬಯಥೀಸ್ ನಿಯೋಜಿಸಲಾಗಿದೆ. ಅರೆಬಿಕ್ ಭಾಷೆಯಲ್ಲಿ ಬಯಥೀಸ್ ಎಂದರೆ ಸಾವಿನ ಏಜೆಂಟ್ ಎಂಬರ್ಥವಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ), ಜಾರಿ ನಿರ್ದೇಶನಾಲಯ(ಇ.ಡಿ), ಪೊಲೀಸ್ ಮತ್ತು ಇತರ ಸರ್ಕಾರಿ ಅಧಿಕಾರಿಗಳನ್ನು ಟಾರ್ಗೆಟ್ ಮಾಡುವಂತೆ ಈ ಬಯಥೀಸ್‌ಗಳಿಗೆ ಸೂಚಿಸಲಾಗಿದೆ.

ಏತನ್ಮಧ್ಯೆ, ಪಿಎಫ್ಐ ತಮ್ಮ ಟಾರ್ಗೆಟ್ ಆಗಿ ಬಿಜೆಪಿ ಹಾಗೂ ಆರಸ್ಸೆಸ್‌ನ ಕೆಲವು ನಾಯಕರನ್ನು ಗುರುತು ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಈ ಎಲ್ಲ ನಾಯಕರ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ | NIA Raid | ಪಿಎಫ್ಐ ಹೆಡೆಮುರಿ ಕಟ್ಟಿದ ಆಪರೇಷನ್ ಆಕ್ಟೋಪಸ್! ಸೂತ್ರಧಾರರು ಯಾರು?

Exit mobile version