ಬೆಂಗಳೂರು: ಮೇಲುಕೋಟೆಯ ಶ್ರೀ ಯದುಗಿರಿ ಯತಿರಾಜ ಮಠದ ಶ್ರೀ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿಯವರಿಗೆ ಇಬ್ಬರು ಕಮಾಂಡರ್ ಸೇರಿ ೨೮ ಮಂದಿ ಸಶಸ್ತ್ರ ಸಿಬ್ಬಂದಿ ರಕ್ಷಣೆಗೆ ನಿಯೋಜಿತರಾಗಿದ್ದಾರೆ. ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI Threat) ಹತ್ಯೆ ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ಅವರಿಗೆ ಕೇಂದ್ರ ಸರಕಾರ ವೈ ಕೆಟಗರಿ ಭದ್ರತೆ ಘೋಷಿಸಿದ ಬೆನ್ನಿಗೇ ಈ ನೇಮಕಾತಿ ನಡೆದಿದೆ.
ಕೇಂದ್ರ ಸರ್ಕಾರದ ಸೂಚನೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿದೆ. ತಂಡದಲ್ಲಿ ಇಬ್ಬರು ಕಮಾಂಡರ್ ಸೇರಿ 28 ಜನ ಸಿಬ್ಬಂದಿ ಇರುತ್ತಾರೆ. ಕಮಾಂಡರ್‌ಗಳು ಸ್ಟೆನ್ ಗನ್ ಬಳಕೆ ಮಾಡುವ ಅಧಿಕಾರ ಹೊಂದಿದ್ದು, ಎರಡು ಪಾಳಿಯಲ್ಲಿ ಇಬ್ಬರು ಕಮಾಂಡರ್‌ಗಳು ಕೆಲಸ ಮಾಡಲಿದ್ದಾರೆ.
ತಂಡದಲ್ಲಿ ಒಂಬತ್ತು ಮಂದಿ ಪಿಸ್ತೂಲ್ ಬಳಕೆ ಮಾಡುವ ಸಿಬ್ಬಂದಿ ಇರಲಿದ್ದು, ಉಳಿದ ಸಿಬ್ಬಂದಿ ರಾಜ್ಯದ ಪೊಲೀಸ್ ಸಿಬ್ಬಂದಿ ಆಗಿರುತ್ತಾರೆ. ಇದರ ಜೊತೆಗೆ ಇಬ್ಬರು ಪರ್ಸನಲ್ ಸೆಕ್ಯುರಿಟಿ ಆಫೀಸರ್‌ಗಳ ನೇಮಕ ನಡೆದಿದೆ. ಸ್ವಾಮೀಜಿಯವರು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಈ ಭದ್ರತಾ ಸಿಬ್ಬಂದಿ ಅವರಿಗೆ ಸುರಕ್ಷಾ ಕವಚವಾಗಿ ಕೆಲಸ ಮಾಡಲಿದ್ದಾರೆ. ರಾಜ್ಯದಲ್ಲಿ ಮಾತ್ರವಲ್ಲ, ಸ್ವಾಮೀಜಿಯವರು ತೆಲಂಗಾಣ, ಆಂಧ್ರ ಪ್ರದೇಶಕ್ಕೆ ಹೋದಾಗಲೂ ವೈ ಕೆಟಗರಿ ಭದ್ರತೆಯನ್ನು ಪಡೆಯಲಿದ್ದಾರೆ.
ಬೆಂಗಳೂರು: ಮೇಲುಕೋಟೆಯ ಶ್ರೀ ಯದುಗಿರಿ ಯತಿರಾಜ ಮಠದ ಶ್ರೀ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿಯವರಿಗೆ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಹತ್ಯೆ ಬೆದರಿಕೆಯೊಡ್ಡಿತ್ತು. ಮೇಲುಕೋಟೆ ಮೂಲದ ಮಠವು ಬೆಂಗಳೂರಿನ ಮಲ್ಲೇಶ್ವರಲ್ಲಿ ಕಚೇರಿ, ಮಠ ಹೊಂದಿದೆ. ರಾಮಾನುಜಾಚಾರ್ಯರ ಸಂದೇಶವನ್ನು ದೇಶದ ವಿವಿಧೆಡೆ ಸಾರುತ್ತ, ರಾಮಾನುಜಾಚಾರ್ಯರ ಪ್ರತಿಮೆಗಳನ್ನು ಸ್ಥಾಪಿಸುವ ಕಾರ್ಯದಲ್ಲೂ ಸ್ವಾಮೀಜಿ ನಿರತರಾಗಿದ್ದಾರೆ.
ಪಿಎಫ್‌ಐ ಬೆದರಿಕೆ ಕುರಿತು ಸ್ವಾಮೀಜಿಯವರು ಕೇಂದ್ರ ಗೃಹ ಇಲಾಖೆಗೆ ಮನವಿ ಮಾಡಿ ಭದ್ರತೆಯನ್ನು ಕೋರಿದ್ದರು. ಮನವಿ ಪತ್ರ ಬಂದ ಕೂಡಲೇ ಕೇಂದ್ರ ಗೃಹ ಇಲಾಖೆಯು ಗುಪ್ತಚರ ಇಲಾಖೆ ಮೂಲಕ ತನಿಖೆ ನಡೆಸಿತು. ಆಗ ಶ್ರೀಗಳಿಗೆ ಬೆದರಿಕೆ ಇರುವುದು ದೃಢಪಟ್ಟಿತ್ತು. ಹೀಗಾಗಿ ಅವರಿಗೆ ವೈ ಕೆಟಗರಿ ಭದ್ರತೆ ನೀಡಲು ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ಫೆಬ್ರವರಿ ೧೩ರಿಂದ ಸ್ವಾಮೀಜಿಗಳಿಗೆ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ : PFI Members Arrested: 2047ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡುವ ಗುರಿ, ಪಿಎಫ್‌ಐನ ಐವರ ಬಂಧನ