ಬೆಂಗಳೂರು: ಶ್ರೀಕೃಷ್ಣನು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಜನಿಸಿದ್ದಾನೆ. ಅಷ್ಟಮಿಯ ಮಧ್ಯರಾತ್ರಿ ಕಾರಾಗೃಹದಲ್ಲಿ ಕೃಷ್ಣನ ಜನನವಾಯಿತೆಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಕೃಷ್ಣ ಹುಟ್ಟಿದ ದಿನವನ್ನು ಶ್ರೀಕೃಷ್ಣ ಜನ್ಮಾಷ್ಟಮಿ (Krishna Janmashtami) ಅಥವಾ ಗೋಕುಲಾಷ್ಟಮಿ ಎಂದು ಕರೆಯಲಾಗುತ್ತದೆ. ಈ ದಿನ ವಿವಿಧ ಧಾರ್ಮಿಕ ಕಾರ್ಯಗಳನ್ನು ಹಿಂದು ಸಂಪ್ರದಾಯದಂತೆ ಆಚರಿಸಿಕೊಂಡು ಬರಲಾಗುತ್ತಿದೆ. ಇದೇ ವೇಳೆ ಮನೆಗಳಲ್ಲಿ ತಮ್ಮ ಪುಟಾಣಿ, ಮುದ್ದು ಕಂದಮ್ಮಗಳಿಗೆ ಶ್ರೀಕೃಷ್ಣನ ವೇಷವನ್ನು ಹಾಕಿ ಸಂಭ್ರಮಿಸುವ ಪರಿಪಾಠವೂ ಬೆಳೆದುಬಂದಿದೆ. ಜತೆಗೆ, ಪುಟಾಣಿಗಳ ಅಂಗಾಲಿಗೆ ಬಣ್ಣ ಹಚ್ಚಿ ಮನೆಯಲ್ಲಿ ಹೆಜ್ಜೆಯನ್ನಿಡಿಸಿ ಖುಷಿಪಡುತ್ತಾರೆ. ಚೆಂದ ಚೆಂದದ ಫೋಟೊಗಳನ್ನು ತೆಗೆದು ಸಂತಸಪಡುತ್ತಾರೆ. ಈಗ ನಿಮ್ಮ ಸಂತಸದ ಈ ಕ್ಷಣಕ್ಕೆ ವಿಸ್ತಾರ ನ್ಯೂಸ್ ವೇದಿಕೆಯನ್ನು ಒದಗಿಸುತ್ತಿದೆ. ನಿಮ್ಮ ಕಂದಮ್ಮಗಳಿಗೆ ಶ್ರೀಕೃಷ್ಣನ ವೇಷ ಹಾಕಿ ಫೋಟೊ ತೆಗೆದು ನಮಗೆ ಕಳುಹಿಸಿದರೆ, ಪ್ರಕಟಿಸಲಾಗುತ್ತದೆ.
ನಿಮ್ಮ ಮನೆಯ ಪುಟ್ಟ ಗೋಪಾಲನ ದರ್ಶನಕ್ಕೆ ನಾವು “ವಿಸ್ತಾರ ನ್ಯೂಸ್” ಮೂಲಕ ಅವಕಾಶವನ್ನು ಕಲ್ಪಿಸುತ್ತಿದ್ದೇವೆ. ನೀವು ನಿಮ್ಮ ಮಗುವಿಗೆ ಶ್ರೀಕೃಷ್ಣನ ವೇಷ ಹಾಕಿ ಒಂದು ಚೆಂದದ ಭಂಗಿಯಲ್ಲಿ ಫೋಟೊ ತೆಗೆದು ನಮಗೆ ಕಳುಹಿಸಿದರೆ ಸಾಕು. ನಾವು ನಿಮ್ಮ ಮನೆಯ ಮುದ್ದು ಕೃಷ್ಣನ ಫೋಟೊವನ್ನು ಪ್ರಕಟಿಸುತ್ತೇವೆ.
ಇದನ್ನೂ ಓದಿ: Shravana Masa 2023: ಶ್ರಾವಣ ಮಾಸಕ್ಕೂ ಶಿವನಿಗೂ ಏನು ನಂಟು ಎಂಬುದು ನಿಮಗೆ ಗೊತ್ತೇ?
ಇದಕ್ಕೆ ನೀವು ಮಾಡಬೇಕಾಗಿದ್ದು ಏನು?
ಇದಕ್ಕೆ ನೀವು ಮಾಡಬೇಕಿರುವುದು ಇಷ್ಟೇ. ಶ್ರೀಕೃಷ್ಣನ ವೇಷವನ್ನು ನಿಮ್ಮ ಮನೆಯ ಕಂದಮ್ಮಗಳಿಗೆ ಹಾಕಿ ಫೋಟೊ ತೆಗೆಯಬೇಕು. ಆ ಫೋಟೊವನ್ನು ವಿಸ್ತಾರ ನ್ಯೂಸ್‌ನ ಮೊಬೈಲ್ ಸಂಖ್ಯೆ 9481024181 ಗೆ ವಾಟ್ಸಪ್ ಮಾಡಬೇಕು. ಫೋಟೊ ಜತೆಗೆ ಹೆಸರು ಹಾಗೂ ವಿವರಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ಫೋಟೊ ಕಳುಹಿಸಲು ಸೆಪ್ಟೆಂಬರ್ 6 ಕೊನೇ ದಿನಾಂಕವಾಗಿದೆ.
ಲೇಟೆಸ್ಟ್ ಸುದ್ದಿಗಳಿಗೆ (Latest Kannada News), ಕರ್ನಾಟಕದ (Karnataka News) ಇನ್ನಷ್ಟು ಸುದ್ದಿಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ