Site icon Vistara News

Physical abuse : ಅಬ್ಬಾ ಇವನೆಂಥಾ ಕಾಮುಕ? ; ಅಕ್ಕ-ತಮ್ಮನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ 21ರ ಯುವಕ

Physical abuse

ಕಲಬುರಗಿ: ಈ ದುಷ್ಟರಿಂದ ಪುಟ್ಟ ಪುಟ್ಟ ಮಕ್ಕಳನ್ನು ರಕ್ಷಿಸಿಕೊಳ್ಳುವುದು (How to save our children?) ಹೇಗಪ್ಪಾ ಎಂಬ ದೊಡ್ಡ ಪ್ರಶ್ನೆಯೊಂದು ಪಾಲಕರಲ್ಲಿ ಹುಟ್ಟಬಹುದಾದ ಭಯಾನಕ ಘಟನೆಯೊಂದು ನಡೆದಿದೆ. ವಿಕೃತ ಕಾಮುಕನೊಬ್ಬ ಇನ್ನೂ ಜಗತ್ತನ್ನೇ ಅರಿಯದ ಪುಟ್ಟ ಮಕ್ಕಳ ಮೇಲೆ ದೌರ್ಜನ್ಯ (Physical abuse) ನಡೆಸಿದ್ದಾನೆ. ಅಪ್ರಾಪ್ತ ಅಕ್ಕ ಮತ್ತು ತಮ್ಮನ ಮೇಲೆ ದೌರ್ಜನ್ಯ (Physical abuse on Sister and Brother) ನಡೆಸಲಾಗಿದೆ.

ಕಲಬುರಗಿ ಜಿಲ್ಲೆ (Kalaburagi News) ಚಿಂಚೋಳಿ ತಾಲೂಕಿನ ಕೊಂಚಾವರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು. ಎಂಟು ವರ್ಷದ ಬಾಲಕಿ ಮತ್ತು ಆಕೆಯ ತಮ್ಮ, ಆರು ವರ್ಷದ ಬಾಲಕನ (8 year old girl, 6 year old boy) ಮೇಲೆ 6 ವರ್ಷದ ಬಾಲಕ ಮತ್ತು 8 ವರ್ಷದ ಬಾಲಕಿಗೆ ಲೈಂಗಿಕವಾಗಿ ಹಿಂಸೆ ನೀಡಿದ ಆರೋಪ ಕೇಳಿಬಂದಿದೆ.

ಕೊಂಚಾವರಂ ಮೂಲದ ಸಚಿನ್‌ ಚವಾಣ್‌ (21) ಎಂಬಾತನೇ ಈ ರೀತಿ ಅಮಾನುಷವಾಗಿ ನಡೆದುಕೊಂಡವನು. ಈಗ ತನ್ನ ಪರಿಚಿತರ ಮನೆಗೆ ಹೋಗಿದ್ದಾಗ ಅಲ್ಲಿ ಹಿರಿಯರು ಇರಲಿಲ್ಲ ಎನ್ನಲಾಗಿದೆ. ಮನೆಯಲ್ಲಿ ಮಕ್ಕಳು ಮಾತ್ರ ಇದ್ದರು. ಅವರ ಪಾಲಿಗೆ ಒಬ್ಬ ಮಾವನೋ, ಚಿಕ್ಕಪ್ಪನೋ, ಬಂಧುವೋ ಆಗುವ ವಯಸ್ಸಿನ ಈ ದುಷ್ಟ ಆ ಮಕ್ಕಳ ಮೇಲೆ ಎರಗಿದ್ದಾನೆ ಎನ್ನಲಾಗಿದೆ.

ಮಕ್ಕಳನ್ನು ಪುಸಲಾಯಿಸಿ ತನ್ನ ದುಷ್ಕತ್ಯಕ್ಕೆ ಬಳಸಿಕೊಂಡಿದ್ದಾನೆ ಚವಾಣ್‌. ಬಾಲಕಿಯ ಮೇಲೆ ಮೊದಲು ದೌರ್ಜನ್ಯ ನಡೆಸಿದ ಆತ ಇನ್ನೂ ಆರು ವರ್ಷದ ಪುಟ್ಟ ಬಾಲಕನಿಗೂ ಹಿಂಸೆ ನೀಡಿದ್ದಾನೆ.

ಮಕ್ಕಳ ಹೆತ್ತವರು ಮನೆಗೆ ಬಂದಾಗ ಈ ಮಕ್ಕಳು ನೋವು ಎಂದು ಹೇಳಿಕೊಂಡಾಗ ವಿಚಾರಿಸಲಾಗಿದೆ. ಆಗ ಸಚಿನ್‌ ಚವಾಣ್‌ ಮನೆಗೆ ಬಂದಿದ್ದು, ಆತ ಈ ರೀತಿಯಾಗಿ ನಡೆದುಕೊಂಡಿದ್ದು ಬೆಳಕಿಗೆ ಬಂದಿದೆ.

ಕೂಡಲೇ ಮನೆಯವರು ಸಚಿನ್‌ ಚವಾಣ್‌ ಮೇಲೆ ಕೇಸು ದಾಖಲಿಸಿಕೊಂಡಿದ್ದಾರೆ. ಪೋಕ್ಸೊ ಪ್ರಕರಣದಡಿ ಕೇಸು ದಾಖಲಿಸಿಕೊಂಡಿರುವ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇದನ್ನೂ ಓದಿ : Physical Abuse : ತನ್ನ ಇಬ್ಬರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ತಂದೆಗೆ 702 ವರ್ಷ ಜೈಲು ಶಿಕ್ಷೆ!

ಮಕ್ಕಳ ಬಗ್ಗೆ ಹುಷಾರಾಗಬೇಕಾದ ಕಾಲ ಬಂದಿದೆ!

ಇಂಥ ಕೆಲವು ಘಟನೆಗಳು ಮನುಷ್ಯತ್ವ, ಮನುಷ್ಯ ಸಂಬಂಧಗಳ ಮೇಲಿನ ನಂಬಿಕೆಯನ್ನೇ ಬುಡಮೇಲು ಮಾಡುತ್ತವೆ. ಮನೆಯಲ್ಲಿ ಮಕ್ಕಳನ್ನು ಮಾತ್ರ ಬಿಟ್ಟು ಹೋಗುವಾಗ ಪಕ್ಕದ ಮನೆಯವರಲ್ಲಿ ʻಮನೆಯಲ್ಲಿ ಮಕ್ಕಳು ಮಾತ್ರ ಇದ್ದಾರೆ. ಸ್ವಲ್ಪ ನೋಡಿಕೊಳ್ಳಿʼ ಎಂದು ಹೇಳುವುದು ಎಲ್ಲ ಕಡೆಯ ಪದ್ಧತಿ. ಅದರೆ, ಇಂಥ ಘಟನೆಗಳು ನಡೆದಾಗ ಯಾರ ಮೇಲೆ ನಂಬಿಕೆ ಇಡಬೇಕು ಎಂದೇ ತೋಚುವುದಿಲ್ಲ. ಮನೆಯಲ್ಲಿ ಮಕ್ಕಳನ್ನು ಮಾತ್ರ ಬಿಟ್ಟು ಬಂದಿದ್ದೇವೆ ಎಂದು ಯಾರಿಗೂ ಗೊತ್ತಾಗುವುದು ಬೇಡಪ್ಪ ಎಂದು ಯೋಚನೆ ಮಾಡುವಂತಾಗಿದೆ.

ಇಂಥ ಪರಿಸ್ಥಿತಿಯಲ್ಲಿ ಮನೆಯಲ್ಲಿ ಮಕ್ಕಳನ್ನು ಬಿಟ್ಟು ಹೋಗುವಾಗ ಯಾರ ಜತೆಗೆ ಹೇಗಿರಬೇಕು ಎಂದು ಮಕ್ಕಳಿಗೇ ಹೇಳಿಕೊಡಬೇಕಾದ ಸ್ಥಿತಿ ಬರಬಹುದೇನೋ ಅನಿಸುತ್ತದೆ. ಅತ್ಯಂತ ಆಪ್ತರನ್ನು ಹೊರತುಪಡಿಸಿ ಬೇರೆ ಯಾರ ಜತೆಗೂ ಮಾತನಾಡಬೇಡಿ, ಹತ್ತಿರ ಹೋಗಬೇಡಿ, ಮೈ ಮುಟ್ಟಲು ಬಂದರೆ ಕಿರುಚಿಕೊಳ್ಳಿ ಎನ್ನುವ good touch, Bad touchಗಳನ್ನು ಕಲಿಸಿಕೊಡಬೇಕೋ ಏನೋ.

ಇದುವರೆಗೆ ಈ ವಿಚಾರದಲ್ಲಿ ಹೆತ್ತವರಿಗೆ ಹೆಣ್ಣು ಮಕ್ಕಳ ಮೇಲೆ ಮಾತ್ರ ಆತಂಕವಿತ್ತು. ಆದರೆ, ಸಚಿನ್‌ ಚವಾಣ್‌ನಂಥ ದುಷ್ಟರು ಗಂಡು ಮಕ್ಕಳ ಬಗ್ಗೆ ಕೂಡಾ ಯೋಚನೆ ಮಾಡುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿಬಿಡುತ್ತಾರೆ.

Exit mobile version