ಬೆಂಗಳೂರು: ರಾಜಧಾನಿ ಬೆಂಗಳೂರು ಹೆಣ್ಮಕ್ಕಳಿಗೆ ಸೇಫ್ ಸಿಟಿ (Bengaluru Safe City) ಎಂಬ ಮಾತಿದೆ. ಆದರೆ ಕೆಲ ಬೀದಿ ಪುಂಡರು ಈ ಹೆಸರನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಜನಜಂಗುಳಿ ಮಧ್ಯೆಯೇ ಯಾರ ಭಯವು ಇಲ್ಲದೇ ಯುವತಿಯರಿಗೆ ಲೈಂಗಿಕ ಕಿರುಕುಳ (Physical Abuse) ನೀಡುತ್ತಿದ್ದಾರೆ. ಹಿಂದೊಮ್ಮೆ ನಮ್ಮ ಮೆಟ್ರೋ ರೈಲಿನಲ್ಲಿ ಯುವತಿಯರಿಗೆ ಬೇಕಂತೆ ಸ್ಪರ್ಶಿಸಿ ವಿಕೃತಿ ಮೆರೆಯುತ್ತಿದ್ದರು. ಇದೀಗ ಹೋಟೆಲ್ ಬಳಿ ನಿಂತಿದ್ದ ಯುವತಿಗೆ ಹಿಂದಿನಿಂದ ಬಂದ ಯುವಕನೊಬ್ಬ ಟಚ್ ಮಾಡಿ, ಕಿರುಕುಳ ನೀಡಿದ್ದಾನೆ.
ಕಾಮುಕರ ಪುಂಡಾಟವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಂಗಳೂರಿನ ವಿಜಯನಗರದ ಕೃಷ್ಣ ಸಾಗರ್ ಹೋಟೆಲ್ ಬಳಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಯುವತಿಯೊಬ್ಬಳು ತನ್ನ ಸ್ನೇಹಿತೆಯೊಂದಿಗೆ ತಿಂಡಿ ಪಾಸರ್ಲ್ ಪಡೆಯಲು ನಿಂತಿದ್ದಳು. ಈ ವೇಳೆ ಅಲ್ಲಿಗೆ ಬಂದಿದ್ದ ಮೂವರು ಪುಂಡರು, ಕೀಟಲೆ ಮಾಡುವ ಶುರು ಮಾಡಿದ್ದರು.
ಇದನ್ನೂ ಓದಿ: Shivamogga News : ನೇಣಿನ ಕುಣಿಕೆಯಲ್ಲಿ ನೇತಾಡುತ್ತಿದ್ದಳು ಚೆಲುವೆ; ನವ ವಿವಾಹಿತೆಯದ್ದು ಆತ್ಮಹತ್ಯೆನಾ? ಕೊಲೆನಾ?
ಯುವತಿ ನಿಂತಿದ್ದನ್ನು ಗಮನಿಸಿದ ಯುವಕರು ಕೀಟಲೆ ಮಾಡುವ ಉದ್ದೇಶದಿಂದ ಪ್ಲ್ಯಾನ್ ಮಾಡಿಕೊಂಡು ಯುವತಿಯನ್ನು ಟಚ್ ಮಾಡಿದ್ದಾನೆ. ಫೋನ್ನಲ್ಲಿ ಮಾತಾಡುತ್ತಿದ್ದ ಯುವತಿಗೆ ಹಿಂದಿನಿಂದ ಬಂದ ಕಾಮುಕ ಬೇಕು ಬೇಕಂತಲೇ ಟಚ್ ಮಾಡಿದ್ದಾನೆ. ಯುವಕನಿಂದ ಸ್ಪರ್ಶಿಸುತ್ತಿದ್ದಂತೆ ಯುವತಿ ಬೆಚ್ಚಿದ್ದಾಳೆ, ನಂತರ ಪ್ರಶ್ನಿಸಲು ಮುಂದಾಗಿದ್ದಾಳೆ. ತಮ್ಮದೇನು ತಪ್ಪೇ ಇಲ್ಲ ಎಂಬಂತೆ ವಾದ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಸಿಸಿಟಿವಿಯಲ್ಲಿ ಸಂಪೂರ್ಣ ದೃಶ್ಯ ಸೆರೆಯಾಗಿದೆ. ಹೋಟೆಲ್ಗೆ ಬಂದಿದ್ದ ಮೂವರು ಯುವಕರ ಪೈಕಿ, ಒಬ್ಬ ಮೊಬೈಲ್ನಲ್ಲಿ ಮುಳುಗಿದ್ದ. ಮತ್ತಿಬ್ಬರು ಕುಚೇಷ್ಠೆಗೆ ಮುಂದಾಗಿದ್ದರು. ಯುವತಿಗೆ ಕಿರುಕುಳ ಕೊಡುವ ಉದ್ದೇಶದಿಂದಲೇ ಯೆಲ್ಲೋ ಶರ್ಟ್ ಧರಿಸಿದ್ದ ಯುವಕ ಮೊದಲಿಗೆ ಯುವತಿಯನ್ನು ನೋಡಿಕೊಂಡು ತನ್ನ ಸ್ನೇಹಿತನೊಂದಿಗೆ ಕಿವಿಯಲ್ಲಿ ಏನೋ ಗುಟ್ಟಾಗಿ ಮಾತನಾಡಿಕೊಳ್ಳುತ್ತಾನೆ.
ಇದನ್ನೂ ಓದಿ: Road Accident : ಸ್ಕೂಟರ್ಗೆ ಬಸ್ ಡಿಕ್ಕಿ; ಪತ್ನಿ-ಮಗುವಿನ ಕಣ್ಣೇದುರಿಗೆ ನರಳಾಡಿ ಪ್ರಾಣಬಿಟ್ಟ ಪತಿ
ಪರಸ್ಪರ ಇಬ್ಬರು ಗುಟ್ಟು ಗುಟ್ಟಾಗಿ ಮಾತಾಡಿಕೊಂಡ ಬಳಿಕ ಕೂದಲು ಹೇರ್ ಸ್ಟೈಲ್ ಮಾಡಿಕೊಂಡು ಯುವತಿ ಬಳಿ ಹೋಗಿದ್ದಾನೆ. ಯಾವುದೋ ತಿಂಡಿ ಆರ್ಡರ್ ಮಾಡುವಂತೆ ಹೋಗಿ ಯುವತಿಯ ಹಿಂಭಾಗವನ್ನು ಸ್ಪರ್ಶಿಸಿದ್ದಾನೆ. ಒಬ್ಬ ಯುವಕ ಯುವತಿಯನ್ನು ಬೇಕಂತಲೇ ಟಚ್ ಮಾಡಿ ವಿಕೃತ ಮೆರೆದಿದ್ದರೆ, ಮತ್ತೊಬ್ಬ ದೂರದಿಂದಲೇ ಇದೆಲ್ಲವನ್ನೂ ಕಂಡು ವಿಕೃತ ಸುಖ ಪಡೆಯುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸದ್ಯ ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್ಐಆರ್ ದಾಖಲಾಗಿದೆ. ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಹುಡುಕಾಟವನ್ನು ನಡೆಸಿದ್ದಾರೆ.
ಯುವತಿ ಜತೆ ಅಸಭ್ಯ ವರ್ತನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಮಾಹಿತಿ ನೀಡಿದ್ದಾರೆ. ಹೋಟೆಲ್ಗೆ ಮೂರು ಜನ ಯುವಕರು ಬಂದಿದ್ದರು. ಓರ್ವ ಯುವಕ ಬೇಕಂತಲೆ ಯುವತಿಯನ್ನು ಚೇಡಿಸಿದ್ದು ಕಂಡು ಬಂದಿದೆ. ನಮ್ಮೂರ ಹೋಟೆಲ್ನಲ್ಲಿ ಈ ಘಟನೆ ನಡೆದಿದ್ದು, ಹೋಟೆಲ್ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಆರೋಪಿ ಯಾರೆಂದು ತಿಳಿದುಬಂದಿದೆ. ಆದಷ್ಟು ಬೇಗ ಬಂಧನ ಮಾಡುತ್ತೇವೆ. ಆತ ಬೆಂಗಳೂರಿನಿಂದ ಹೊರಗೆ ಹೋಗಿದ್ದಾನೆ. ಯುವತಿ ಕಡೆಯಿಂದ ಯಾವುದೇ ರೀತಿಯ ದೂರು ಬಂದಿಲ್ಲ. ಆದರೆ ಹೋಟೆಲ್ ಮ್ಯಾನೇಜರ್ ಕಡೆಯಿಂದ ದೂರು ಪಡೆದುಕೊಳ್ಳಲಾಗಿದೆ ಎಂದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ