ಯಲ್ಲಾಪುರ: ರಾಜ್ಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ನಡೆಸಿದ ಸರಣಿ ರ‍್ಯಾಲಿ ಹಾಗೂ ಸಾರ್ವಜನಿಕ ಸಭೆಯು ಪರಿಣಾಮವಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಕರ್ನಾಟಕದಲ್ಲಿ ಬಿಜೆಪಿ 30 ಸೀಟ್ ಹೆಚ್ಚಿಗೆ ಗೆಲ್ಲುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ. ಕರ್ನಾಟಕದಲ್ಲಿ ಬಿಜೆಪಿ ಆಡಳಿತಕ್ಕೆ ಬರುವುದು ನಿಶ್ಚಿತವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಸಹ 6 ಕ್ಷೇತ್ರಗಳಲ್ಲಿ ಬಿಜೆಪಿಗೆ ಜಯ ದೊರಕಲಿದೆ ಎಂದು ಪಂಚಾಯತ್ ರಾಜ್ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ (Pramod Hegde) ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಕೇಂದ್ರ ನಾಯಕರ
ಚುನಾವಣೆಯ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ. ಜನರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಪರ ಕಾರ್ಯಗಳು ಜನರ ಮನೆ ಮುಟ್ಟಿದೆ. ಇತ್ತೀಚೆಗೆ ನಡೆದ ಜಿಲ್ಲಾ ಚುನಾವಣಾ ಉಸ್ತುವಾರಿಗಳ ಸಭೆಯಲ್ಲಿ ದೊರೆತಿರುವ ಸೂಚನೆಯಂತೆ ಪಕ್ಷದ ವತಿಯಿಂದ ಆಯಾ ಕ್ಷೇತ್ರದ ಅಗತ್ಯತೆಗಳಿಗನುಗುಣವಾಗಿ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದೆ. ಈಗಾಗಲೇ ರಾಜ್ಯದ ಪ್ರಣಾಳಿಕೆ ಪ್ರತಿ ಮನೆಗೆ ತಲುಪಬೇಕಿತ್ತು. ಆದರೆ, ಕಾಲಾವಕಾಶದ ಕೊರತೆಯಿಂದ ತಲುಪಿಸಲು ತಡವಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: Modi In Karnataka: ಹೂಮಳೆ, ಉದ್ಘೋಷದೊಂದಿಗೆ ಮೋದಿ ರೋಡ್ ಶೋ ಸಂಪನ್ನ, ಇಲ್ಲಿವೆ ಫೋಟೊಗಳು
ಜನರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯೊಂದಿಗೆ ನಿರಂತರ ವಿದ್ಯುತ್ ಪೂರೈಕೆ, ಪ್ರತಿನಿತ್ಯ ನಂದಿನಿ ಹಾಲು, 3 ಪ್ರಮುಖ ಹಬ್ಬಗಳಂದು ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ, ಬಿಪಿಎಲ್ ಕಾರ್ಡುದಾರರಿಗೆ 5 ಕೆಜಿ ಉಚಿತ ಅಕ್ಕಿ, ಅತಿಕ್ರಮಣ ಭೂಮಿ ಮಂಜೂರಾತಿ, ಆಶ್ರಯ ಮನೆ ಸಾಲ ಮನ್ನಾ, ಯುವಕರಿಗೆ ಪರಿಸರ ಪೂರಕ ಉದ್ಯೋಗ ಸೃಷ್ಟಿ, ಹಾಲಕ್ಕಿ, ಕುಣಬಿ, ಗೌಳಿ ಜನರಿಗೆ ಪರಿಶಿಷ್ಟ ವರ್ಗದ ಮಾನ್ಯತೆ, ಪ್ರವಾಸೋದ್ಯಮದ ಅಭಿವೃದ್ಧಿ ಹೀಗೆ ಕ್ಷೇತ್ರದ ಪ್ರತಿ ವಿಭಾಗವನ್ನು ಇದರಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಪ್ರಮೋದ ಹೆಗಡೆ ಹೇಳಿದರು.
ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು ಯಾವುದೂ ಸಹ ನಂಬುವಂಥದ್ದಲ್ಲ. ಈ ಹಿಂದೆ ನೀಡಿದ ಭರವಸೆಗಳನ್ನು ಈಡೇರಿಸಲು ವಿಫಲರಾಗಿದ್ದರು. ಹೀಗಾಗಿ ಜನರಿಗೆ ಅವರ ಗ್ಯಾರಂಟಿಗಳ ಮೇಲೆ ವಿಶ್ವಾಸವಿಲ್ಲ. ನಮ್ಮ ಪಕ್ಷದ ಪ್ರಣಾಳಿಕೆಗಳು ಸ್ಥಳೀಯವಾಗಿ ಅಭಿವೃದ್ಧಿಯನ್ನು ಉತ್ತೇಜಿಸುವಂತಿದೆ. ಕ್ಷೇತ್ರದಲ್ಲಿ ಸಾಗಿರುವ ಪ್ರಚಾರ ಕಾರ್ಯದ ಕುರಿತು ಜಿಲ್ಲಾ ಸಮಿತಿಯ ವತಿಯಿಂದ ಶ್ಲಾಘನೆ ಕೂಡ ವ್ಯಕ್ತವಾಗಿದೆ ಎಂದು ಪ್ರಮೋದ ಹೆಗಡೆ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್, ಪ್ರಧಾನ ಕಾರ್ಯದರ್ಶಿಗಳಾದ ಡಾ. ರವಿ ಭಟ್ ಬರಗದ್ದೆ ಮತ್ತು ಪ್ರಸಾದ ಹೆಗಡೆ, ಹಿರಿಯರಾದ ರಾಮು ನಾಯ್ಕ ಇದ್ದರು.