Site icon Vistara News

Modi in karnataka: ನಮಸ್ಕರಿಸಲು ಹೋದ ಕಾರ್ಯಕರ್ತನಿಗೆ ತಲೆ ಬಾಗಿ ನಮಿಸಿದ ಮೋದಿ; ಪ್ರಧಾನಿ ಸರಳತೆಗೆ ಮೆಚ್ಚುಗೆ

#image_title

ಧಾರವಾಡ: ಕಾಲಿಗೆ ನಮಸ್ಕರಿಸಲು ಬಂದ ಬಿಜೆಪಿ ಕಾರ್ಯಕರ್ತನಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ತಲೆ ಬಾಗಿ ನಮಿಸಿರುವ ಅಪರೂಪದ ಪ್ರಸಂಗ ಧಾರವಾಡ ಐಐಟಿ ಉದ್ಘಾಟನಾ ಕಾರ್ಯಕ್ರಮದಲ್ಲಿ (Modi in karnataka) ನಡೆದಿದೆ. ಪ್ರಧಾನಿಯಾಗಿದ್ದರೂ ಸಾಮಾನ್ಯ ಕಾರ್ಯಕರ್ತನಿಗೆ ನಮಸ್ಕರಿಸಿರುವ ಅವರ ಸರಳತೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ವೇದಿಕೆಗೆ ತೆರಳುವ ಮುಂಚೆ ಕೆಲವು ಪ್ರತಿನಿಧಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಾಗತ ಕೋರಿ ನಮಸ್ಕರಿಸಿದರು. ಈ ವೇಳೆ ಮೋದಿ ಕಾಲಿಗೆ ನಮಸ್ಕರಿಸಲು ಬಿಜೆಪಿ ಕಾರ್ಯಕರ್ತ ಮುಂದಾದರು. ಆ ವೇಳೆ ಕಾರ್ಯಕರ್ತನನ್ನು ತಡೆದು ಪ್ರತಿಯಾಗಿ ತಾವೇ ತಲೆಬಾಗಿ ಕಾರ್ಯಕರ್ತನಿಗೆ ಮೋದಿ ನಮಸ್ಕರಿಸಿದರು. ಪ್ರಧಾನಿ ಸರಳತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ | Modi in Karnataka: ರೋಡ್‌ ಶೋದಲ್ಲಿ ಹೂಮಳೆ ಸುರಿಸಿದ ಮಂಡ್ಯ ಜನತೆಗೆ ಧನ್ಯವಾದ ಅರ್ಪಿಸಿದ ಮೋದಿ

Exit mobile version