ಧಾರವಾಡ: ಧಾರವಾಡದ ಐಐಟಿ ಕಟ್ಟಡ ಉದ್ಘಾಟನೆಗಾಗಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ (Pm Modi) ಆಗಮಿಸುತ್ತಿದ್ದಾರೆ. ಮೋದಿ ಆಗಮನವನ್ನು ಮತ್ತಷ್ಟು ಸ್ಮರಣೀಯವಾಗಿಸುವ ಹಾಗೂ ಸ್ಥಳೀಯ ಕಲೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಜಿಲ್ಲೆಯಿಂದ ವಿಶೇಷ ಉಡುಗೊರೆಯನ್ನು ಸಿದ್ಧಪಡಿಸಲಾಗಿದೆ.
ಜಿಲ್ಲೆಯ ಕಲಘಟಗಿಯ ಪ್ರಸಿದ್ಧ ಕಟ್ಟಿಗೆ ತೊಟ್ಟಿಲು ಹಾಗೂ ಶ್ರೀ ಸಿದ್ದಾರೂಢರ ಮೂರ್ತಿಯನ್ನು ಪ್ರಧಾನಿಗೆ ಉಡುಗೊರೆಯಾಗಿ ನೀಡಲಾಗುತ್ತಿದೆ. ಜತೆಗೆ ಹಾವೇರಿ ಏಲಕ್ಕಿ ಬಹಳ ಪ್ರಸಿದ್ಧಿಯನ್ನು ಪಡೆದಿದೆ. ಹೀಗಾಗಿ ಅಲ್ಲಿನ ಏಲಕ್ಕಿಯಿಂದ ಪೇಟ, ಹಾರವನ್ನು ತಯಾರಿಸಲಾಗಿದೆ. ಕಸೂತಿಯಿಂದ ಮಾಡಿದ ರೇಷ್ಮೆ ಶಾಲನ್ನು ಸಿದ್ಧಪಡಿಸಲಾಗಿದೆ.
ಕಲಘಟಗಿಯ ಶ್ರೀಧರ್ ಸಾಹುಕಾರ ಹಾಗೂ ಮಾರುತಿ ಬಡಿಗೇರ ಕಲಾವಿದರು ಸಾಗುವಾನಿ ಕಟ್ಟಿಗೆಯಿಂದ ಬಣ್ಣದ ತೊಟ್ಟಿಲು ಸಿದ್ಧಪಡಿಸಿದ್ದಾರೆ. ಕಲಘಟಗಿಯ ವಿಶಿಷ್ಟ ಕಲೆಗೆ ವಿಶೇಷ ಗೌರವವನ್ನು ಕೊಡುವ ಸಲುವಾಗಿ ಧಾರವಾಡ ಜಿಲ್ಲಾಡಳಿತವು ಪ್ರಧಾನಿ ಮೋದಿಗೆ ಇವುಗಳನ್ನು ಉಡುಗೊರೆ ಆಗಿ ನೀಡುತ್ತಿದೆ.
ಇದನ್ನೂ ಓದಿ: Sumalatha Ambareesh: ಬಿಜೆಪಿಗೆ ಬೆಂಬಲ ಕೊಟ್ಟ ಸುಮಲತಾ; ರಂಗಮಂದಿರದಲ್ಲಿದ್ದ ಫೋಟೊ ತೆರವುಗೊಳಿಸಿ ಆಕ್ರೋಶ
9 ಇಂಚು ಉದ್ದ, 6 ಇಂಚು ಅಗಲ ಹಾಗೂ 4.5 ಇಂಚು ಎತ್ತರದ ವಿಶೇಷ ತೊಟ್ಟಿಲು ಇದಾಗಿದ್ದು, ಶ್ರೀಕೃಷ್ಣ, ಶಿವ-ಪಾರ್ವತಿ, ಗಣಪತಿ ದೇವರ ಚಿತ್ರವಿದೆ. ಸಾಗುವಾನಿ ಕಟ್ಟಿಗೆಯಿಂದ ಮಾಡುವ ಸಾಂಪ್ರದಾಯಿಕ ಬಣ್ಣದ ತೊಟ್ಟಿಲು ಇದಾಗಿದ್ದು, ಹುಣಸೆ ಬೀಜ, ಅರಗ, ರಾಳ ಸೇರಿ ನೈಸರ್ಗಿಕ ಬಣ್ಣಗಳನ್ನು ಬಳಕೆ ಮಾಡಿ ಸಿದ್ಧಪಡಿಸಲಾಗಿದೆ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ