ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಓಡಾಡುವ ಕಡೆಯಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗಿದೆ. ಅವರಿಗೆ ಅಭೂತಪೂರ್ವ ಸ್ವಾಗತ ನೀಡಲು ಸಜ್ಜಾಗಿರುವ ರಾಜ್ಯ ಬಿಜೆಪಿ ಸರ್ಕಾರವು, ಮೈಸೂರಿನಲ್ಲಿ ಅವರ ವಾಸ್ತವ್ತಕ್ಕೆ ವಿಶೇಷ ವ್ಯವಸ್ಥೆ ಮಾಡಿದೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಮೋದಿ ಮೈಸೂರಿಗೆ ಆಗಮಿಸುತ್ತಿದ್ದಾರೆ. ಕಳೆದ ಬಾರಿ ಮೈಸೂರಿಗೆ ಭೇಟಿ ನೀಡಿದಾಗಲೂ ಅವರು ಅದೇ ಕೊಠಡಿಯಲ್ಲಿ ತಂಗಿದ್ದರು ಎನ್ನುವುದು ವಿಶೇಷ.
ಇದನ್ನೂ ಓದಿ | Modi Karnataka Visit | ಪ್ರಧಾನಿ ಮೋದಿಯವರ ಎರಡು ದಿನಗಳ ರಾಜ್ಯ ಪ್ರವಾಸ ಇಂದಿನಿಂದ ಆರಂಭ
ಎರಡು ದಿನಗಳ ಮೋದಿ ಮೈಸೂರು ಪ್ರವಾಸ ಹಿನ್ನೆಲೆಯಲ್ಲಿ ಮೈಸೂರಿನ ರ‍್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೈಸೂರಿಗೆ ಮೋದಿ ಭೇಟಿ 7ನೇ ಸಲವಾದರೂ ರಾತ್ರಿ ತಂಗಿದ್ದು ಮಾತ್ರ ಮೂರು ಬಾರಿಯಷ್ಟೇ. ಹೋಟೆಲ್‌ನ 4ನೇ ಮಹಡಿಯಲ್ಲಿ ಪ್ರೆಸಿಡೆಂಟ್ ಸೂಟ್‌ನಲ್ಲಿ ಮೋದಿ ರಾತ್ರಿ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ. ಭದ್ರತಾ ದೃಷ್ಟಿಯಿಂದ 4ನೇ ಮಹಡಿಯ ಎಲ್ಲ ಕೊಠಡಿಗಳನ್ನು ಭದ್ರತಾ ಪಡೆ ಸಿಬ್ಬಂದಿಗಳು ಖಾಲಿ ಮಾಡಿಸಿ ವಶಕ್ಕೆ ಪಡೆದಿದ್ದಾರೆ. ಜತೆಗೆ ಹೋಟೆಲ್ ಕಟ್ಟಡಕ್ಕೆ ಹೊಂದಿಕೊಂಡಿರುವ ಮಾಲ್ ಆಫ್ ಮೈಸೂರು ಸಂಕೀರ್ಣವನ್ನು ಬಂದ್ ಮಾಡಲಾಗಿದೆ. ಶ್ವಾನದಳ, ಬಾಂಬ್ ನಿಷ್ಕ್ರಿಯ ದಳಗಳಿಂದ ನಿರಂತರ ತಪಾಸಣೆ ಮುಂದುವರಿದಿದೆ. ಹೆಜ್ಜೆ ಹೆಜ್ಜೆಗೂ ಪೊಲೀಸರ ಸರ್ಪಗಾವಲು ಹಾಕಲಾಗಿದೆ.
ಮೈಸೂರಿನ ಪಾಲಿಕೆ ಸಿಬ್ಬಂದಿ ಅಲಂಕಾರಿಕ ಗಿಡಗಳಿಂದ ರಸ್ತೆಗಳನ್ನು ಸಿಂಗರಿಸಿ ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಇದನ್ನೂ ಓದಿ | Modi Karnataka Visit | ಸಾಂಸ್ಕೃತಿಕ ನಗರಿ ಮೈಸೂರಿಗೆ 7ನೇ ಬಾರಿಗೆ ಮೋದಿ ಭೇಟಿ