ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಮೇಲೆ ಕಣ್ಣಿಟ್ಟಿರುವ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ರಾಜ್ಯಕ್ಕೆ ಸರಣಿ ಭೇಟಿಯನ್ನು ನೀಡುತ್ತಿದ್ದಾರೆ. ಸೋಮವಾರ (ಫೆ. ೨7) ಒಂದೇ ದಿನಕ್ಕೆ ಶಿವಮೊಗ್ಗ ಹಾಗೂ ಬೆಳಗಾವಿಗೆ ಮೋದಿ ಭೇಟಿ ನೀಡಲಿದ್ದಾರೆ. ಶಿವಮೊಗ್ಗದಲ್ಲಿ ರಾಜ್ಯದ ೨ನೇ ಅತಿದೊಡ್ಡ ಏರ್‌ಪೋರ್ಟ್ ಅನ್ನು ಲೋಕಾರ್ಪಣೆಗೊಳಿಸುವುದರ ಜತೆಗೆ ಕೋಟ್ಯಂತರ ರೂಪಾಯಿ ವೆಚ್ಚದ ಹಲವು ಕಾಮಗಾರಿಗಳು, ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಇನ್ನು ಬೆಳಗಾವಿಯಲ್ಲಿಯೂ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಅಲ್ಲಿಯೂ ಸಹ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಸೋಮವಾರದ ಕಾರ್ಯಕ್ರಮಗಳ ವಿವರ ಏನು? ಎತ್ತ? ಎಂಬುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಇದನ್ನೂ ಓದಿ: PM Modi: ನಾಳೆ ಕುಂದಾನಗರಿಯಲ್ಲಿ ಮೋದಿ ಮೇನಿಯಾ; ಪೌರ ಕಾರ್ಮಿಕ ಮಹಿಳೆ ಸೇರಿ ಐವರು ಸಾಮಾನ್ಯ ಕಾರ್ಮಿಕರಿಂದ ಪ್ರಧಾನಿಗೆ ಸ್ವಾಗತ
ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ವಿವರ
-ಬೆಳಗ್ಗೆ 11:35ಕ್ಕೆ ವಿಶೇಷ ವಿಮಾನದಲ್ಲಿ ಶಿವಮೊಗ್ಗ ನೂತನ ವಿಮಾನ ನಿಲ್ದಾಣಕ್ಕೆ ಆಗಮನ
-11.45ರಿಂದ 11:55ರ ವರೆಗೆ ವಿಮಾನ ನಿಲ್ದಾಣದ ಟರ್ಮಿನಲ್ ವೀಕ್ಷಣೆ
-12 ಗಂಟೆಗೆ ಸಾರ್ವಜನಿಕ ಸಭೆಯಲ್ಲಿ ಭಾಗಿ
-ವಿಮಾನ ನಿಲ್ದಾಣದ ಆವರಣದಲ್ಲಿ ಕಾರ್ಯಕ್ರಮ
-ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ
-ಮಧ್ಯಾಹ್ನ 1.30ಕ್ಕೆ ವಿಶೇಷ ವಿಮಾನದಲ್ಲಿ ಬೆಳಗಾವಿಗೆ ಪಯಣ
-ಮಧ್ಯಾಹ್ನ 2.20ಕ್ಕೆ ಬೆಳಗಾವಿ ಏರ್‌ಪೋರ್ಟ್‌ಗೆ ಆಗಮನ
-ಮಧ್ಯಾಹ್ನ 2.45ಕ್ಕೆ ಕೆಎಸ್‌ಆರ್‌ಪಿ ಮೈದಾನ ಹೆಲಿಪ್ಯಾಡ್‌ನತ್ತ ಪ್ರಯಾಣ
-ಮಧ್ಯಾಹ್ನ 2.50ಕ್ಕೆ ಕೆಎಸ್‌ಆರ್‌ಪಿ ಮೈದಾನದಿಂದ ರೋಡ್ ಶೋ ಆರಂಭ
-ಮಧ್ಯಾಹ್ನ 3.15ಕ್ಕೆ ಮಾಲಿನಿ ಸಿಟಿ ಮೈದಾನದಲ್ಲಿ ಸಮಾವೇಶದಲ್ಲಿ ಭಾಗಿ, ಪ್ರಧಾನ ಭಾಷಣ
ಇದನ್ನೂ ಓದಿ: Shivamogga Airport: ನಾಳೆ ಶಿವಮೊಗ್ಗದಲ್ಲಿ ರಾಜ್ಯದ 2ನೇ ಅತಿದೊಡ್ಡ ಏರ್‌ಪೋರ್ಟ್ ಲೋಕಾರ್ಪಣೆ; ಮೋದಿ ಕಾರ್ಯಕ್ರಮದ ವಿವರ ಏನು?
-ಸಂಜೆ 4.35ಕ್ಕೆ ರಸ್ತೆ ಮೂಲಕ ಮಾಲಿನಿ ಸಿಟಿ ಬಳಿಯ ಹೆಲಿಪ್ಯಾಡ್‌ನತ್ತ ಪ್ರಯಾಣ
-ಸಂಜೆ 4.40ಕ್ಕೆ ಹೆಲಿಪ್ಯಾಡ್‌ಗೆ ಆಗಮನ
-ಸಂಜೆ 4.45ಕ್ಕೆ ಹೆಲಿಕಾಪ್ಟರ್ ಮೂಲಕ ಸಾಂಬ್ರಾ ಏರ್‌ಪೋರ್ಟ್‌ನತ್ತ ಪ್ರಯಾಣ
-ಸಂಜೆ 5.10ಕ್ಕೆ ಸಾಂಬ್ರಾ ಏರ್‌ಪೋರ್ಟ್‌ನಿಂದ ನವ ದೆಹಲಿ ಕಡೆಗೆ ಪ್ರಯಾಣ
-ಸಂಜೆ 7.40ಕ್ಕೆ ದೆಹಲಿ ಏರ್‌ಪೋರ್ಟ್‌ಗೆ ಆಗಮನ