Site icon Vistara News

Yoga Day 2022 | ಮೈಸೂರು ಡಿಜಿಟಲ್‌ ಯೋಗ ವಸ್ತು ಪ್ರದರ್ಶನ ವೀಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ

modi

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ಅರಮನೆ ಆವರಣದಲ್ಲಿ ಯೋಗಾಭ್ಯಾಸ ಮಾಡಿದ ಬಳಿಕ ಯೋಗಕ್ಕೆ ಸಂಬಂಧಿಸಿದ ವಸ್ತು ಪ್ರದರ್ಶನ ಕೇಂದ್ರಕ್ಕೆ ತೆರಳಿ, ವೀಕ್ಷಿಸಿದರು.

ಮೈಸೂರು ವಸ್ತು ಪ್ರದರ್ಶನ ಕೇಂದ್ರದಲ್ಲಿ ಯೋಗ ದಿನಾಚರಣೆ ಕುರಿತ ವಿಶೇಷ ಡಿಜಿಟಲ್‌ ಯೋಗ ವಸ್ತು ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಯೋಗಕ್ಕೆ ಸಂಬಂಧಿಸಿದ ವಿಶೇಷ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ರಾಜ್ಯಪಾಲ ಗೆಹ್ಲೋಟ್‌, ಸಿಎಂ ಬಸವರಾಜ ಬೊಮ್ಮಾಯಿ ಜತೆಗಿದ್ದರು.

ಯೋಗ ಮಾಡುವುದು ಹೇಗೆ, ಇದರಿಂದ ದೇಹದ ಮೇಲೆ ಯಾವೆಲ್ಲಾ ಪರಿಣಾಮಗಳಾಗಲಿವೆ, ಇದರ ಲಾಭವೇನು ಎಂಬುದುನ್ನು ಈ ಡಿಜಿಟಲ್‌ ವಸ್ತು ಪ್ರದರ್ಶನದಲ್ಲಿ ವಿವರಿಸಲಾಗುತ್ತದೆ. ವೀಕ್ಷಕರಿಗೆ ತಾವೇ ಮುಂದೆ ನಿಂತು ಈ ವಸ್ತು ಪ್ರದರ್ಶನದಲ್ಲಿ ತಾವು ಯೋಗಾಸನ ಮಾಡಿದಾಗ ತಮ್ಮ ದೇಹ ಎಷ್ಟು ಭಾಗುತ್ತದೆ ಎಂಬುದನ್ನು ನೋಡಿಕೊಳ್ಳುವ ಅವಕಾಶವನ್ನೂ ನೀಡಲಾಗಿದೆ.

ಟಚ್‌ ಸ್ಕ್ರೀನ್‌ ಮೂಲಕ ತಮಗೆ ಬೇಕಾದ ಆಸನಗಳ ಬಗ್ಗೆ ವೀಕ್ಷಕರು ಮಾಹಿತಿ ಪಡೆದುಕೊಳ್ಳಲೂಬಹುದು.
ಅತ್ಯಾಧುನಿಕ ಈ ವಸ್ತು ಪ್ರದರ್ಶನ ಯೋಗದ ವೈಜ್ಞಾನಿಕತೆಯನ್ನುಸಾಬೀತುಪಡಿಸುವಲ್ಲಿ ಬಹಳ ಮಹತ್ವ ಪಡೆದಿದೆ. ಪ್ರಧಾನಿ ಮೋದಿ ಅತ್ಯಂತ ಆಸಕ್ತಿಯಿಂದ ಈ ವಸ್ತು ಪ್ರದರ್ಶನವನ್ನು ವೀಕ್ಷಿಸಿ, ಈ ಕಾರ್ಯವನ್ನು ಶ್ಲಾಘಿಸಿದರು.

Exit mobile version