Site icon Vistara News

PM Modi: ಮೋದಿ ಕಾರ್ಯಕ್ರಮಕ್ಕೆ ಮುತ್ತಿಗೆಗೆ ಮುಂದಾದ ವಿಐಎಸ್‌ಎಲ್ ಕಾರ್ಮಿಕರು, ಪೊಲೀಸ್‌ ವಶಕ್ಕೆ

visl protest

ಶಿವಮೊಗ್ಗ: ಭದ್ರಾವತಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಮುಚ್ಚಿರುವುದನ್ನು ಪ್ರತಿಭಟಿಸಿ ಮುಷ್ಕರ ನಡೆಸುತ್ತಿರುವ ನೌಕರರು, ಇಂದು ಶಿವಮೊಗ್ಗದಲ್ಲಿ ನಡೆಯಲಿರುವ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕುವುದಾಗಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.

ವಿಐಎಸ್‌ಎಲ್ ಕಾರ್ಖಾನೆ ಎದುರು ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಶಾಸಕ ಸಂಗಮೇಶ್ವರ, ಜೆಡಿಎಸ್ ಅಭ್ಯರ್ಥಿ ಶಾರದಾ ಅಪ್ಪಾಜಿ ಭೇಟಿ ನೀಡಿದ್ದಾರೆ. ಭದ್ರಾವತಿಯಿಂದ ಶಿವಮೊಗ್ಗದವರೆಗೆ ಮೆರವಣಿಗೆ ಮಾಡಿ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕುವುದಾಗಿ ಈ ಹಿಂದೆ ಗುತ್ತಿಗೆ ಕಾರ್ಮಿಕರು ಹೇಳಿಕೆ ನೀಡಿದ್ದರು. ಹೀಗಾಗಿ ಮುಷ್ಕರ ನಿರತರು ಪ್ರತಿಭಟನಾ ಸ್ಥಳದಿಂದ ಕದಲದಂತೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಕಾರ್ಮಿಕರ ಸಂಘದ ಪದಾಧಿಕಾರಿಗಳನ್ನು ವಶಕ್ಕೆ ಪಡೆಯಲಾಗಿದೆ.

ಬೆಳಗಿನ ಜಾವ 3 ಗಂಟೆ ವೇಳೆಗೆ 20ಕ್ಕೂ ಹೆಚ್ಚು ಕಾರ್ಮಿಕ ಮುಖಂಡರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ವಿಐಎಸ್ಎಲ್ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ರಾಕೇಶ್ ಸೇರಿದಂತೆ 20ಕ್ಕೂ ಹೆಚ್ಚು ಜನರು ಪೊಲೀಸ್‌ ವಶದಲ್ಲಿದ್ದು, ಹೊಳೆಹೊನ್ನೂರು ಠಾಣೆ ಕಡೆ ಕರೆದೊಯ್ಯಲಾಗಿದೆ.

ಭದ್ರಾವತಿಯ ವಿಐಎಸ್ಎಲ್ ಉಳಿಸುವಂತೆ ಪ್ರತಿಭಟಿಸಲು ನಿರ್ಧರಿಸಿದ್ದ ಕಾರ್ಮಿಕರು ಭದ್ರಾವತಿಯಿಂದ ಸೋಗಾನೆಯ ಏರ್‌ಪೋರ್ಟ್ ವರೆಗೆ ರ್ಯಾಲಿ ಮಾಡಿ ಪ್ರಧಾನಿ ಮೋದಿ ಹಾಗೂ ಕೇಂದ್ರದ ಗಮನ ಸೆಳೆಯಲು ನಿರ್ಧರಿಸಿದ್ದರು. ನಿನ್ನೆ ರಾತ್ರಿಯೇ ವಿಐಎಸ್ಎಲ್ ಮುಂಭಾಗ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.

ಇದನ್ನೂ ಓದಿ: VISL Factory: ವಿಐಎಸ್‌ಎಲ್ ಉಳಿಸಲು ಕಾರ್ಮಿಕರು ನಡೆಸುವ ಹೋರಾಟಕ್ಕೆ ಕಾಂಗ್ರೆಸ್‌ ಬೆಂಬಲ

Exit mobile version