ಬೆಂಗಳೂರು: ಚಂದ್ರಯಾನ 3 (Chandrayaan 3) ಯಶಸ್ಸು ಇಡೀ ಭಾರತದಲ್ಲಿ ಹೊಸ ಹುಮ್ಮಸ್ಸನ್ನು ಸೃಷ್ಟಿಸಿದೆ. ಅದನ್ನು ಇನ್ನಷ್ಟು ಎತ್ತರಕ್ಕೇರಿಸಿದರು, ಆಳಕ್ಕಿಳಿಸಿದರು ಪ್ರಧಾನಿ ನರೇಂದ್ರ ಮೋದಿ (PM Narendra Modi). ಶನಿವಾರ (ಆ. 26) ಬೆಂಗಳೂರಿಗೆ ಆಗಮಿಸಿದ ಮೋದಿ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಇಳಿದು ಇಸ್ರೋ ಕಚೇರಿಗೆ ಭೇಟಿ ನೀಡಿದರು. ಅಲ್ಲಿ ವಿಜ್ಞಾನಿಗಳ ಮುಂದೆ ನಿಂತು ಭಾವುಕರಾದರು (Emotional Modi), ಉತ್ಸಾಹದಿಂದ ಮಾತನಾಡಿದರು. ಸೋಲು ಮತ್ತು ಗೆಲುವುಗಳನ್ನು ವಿಶ್ಲೇಷಿಸಿದರು. ಚಂದ್ರಯಾನ 2 ಪತನಗೊಂಡ ಜಾಗವನ್ನು ತಿರಂಗಾ ಪಾಯಿಂಟ್ (Tiranga Point) ಎಂದರು, ಚಂದ್ರಯಾನ 3 ಗೆದ್ದ ಜಾಗವನ್ನು ಶಿವಶಕ್ತಿ (Shiva Shakti point) ಎಂದರು. ಆಗಸ್ಟ್ 23ರಂದು ಚಂದ್ರಯಾನ ಸಫಲಗೊಂಡ ದಿನವನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವೆಂದು (National Space day Aug 23) ಘೋಷಿಸಿದರು. ಅವರ ಮಾತು ಕೇಳಿ ಎಲ್ಲ ವಿಜ್ಞಾನಿಗಳು ಖುಷಿಯಾದರು. ಇಲ್ಲಿದೆ ಅದೆಲ್ಲ ಸಂಭ್ರಮಗಳ ಒಂದು ಸುತ್ತು ನೋಟ.