Site icon Vistara News

PM Narendra Modi: ʼʼಮೊದಲು ವಿಜ್ಞಾನಿಗಳಿಗೆ ನಮಸ್ಕರಿಸುತ್ತೇನೆ…ʼʼ

PM Narendra Modi in HAL

ಬೆಂಗಳೂರು: ಭಾರತಕ್ಕೆ ಮರಳುವಾಗ ಮೊದಲು ಬೆಂಗಳೂರಿಗೇ ಹೋಗಬೇಕು ಎಂದುಕೊಂಡಿದ್ದೆ ಎಂದು ಪ್ರಧಾನಿ ಮೋದಿ ಹೇಳಿದರು. ಇಸ್ರೋ ಕಚೇರಿಗೆ ತೆರಳುವ ಮುನ್ನ ಅವರು ಎಚ್‌ಎಎಲ್‌ನಲ್ಲಿ ನಿರ್ಮಿಸಿದ ಪುಟ್ಟ ವೇದಿಕೆಯ ಮೇಲೆ ನಿಂತು ಸಾರ್ವಜನಿಕರಿಗೆ ಕಾಣಿಸಿಕೊಂಡರಲ್ಲದೆ ಪುಟ್ಟ ಭಾಷಣ ಮಾಡಿದರು.

ಅವರು ʼಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಅನುಸಂಧಾನ್ʼ ಎಂಬ ಘೋಷಣೆ ಕೂಗಿಸಿ ಕಾರ್ಯಕರ್ತರನ್ನು ಹುರಿದುಂಬಿಸಿದರು.

ಇದು ಸೂರ್ಯೋದಯದ ಸಂದರ್ಭ, ಬೆಂಗಳೂರಿನಲ್ಲಿ ಸುಂದರ ಚಿತ್ರಣ ಕಾಣಿಸುತ್ತಿದೆ. ಬೆಂಗಳೂರಿನಲ್ಲಿ ಕಾಣ್ತಿರೋ ಜನರ ಮೆಚ್ಚುಗೆ, ಸಂಭ್ರಮದ ದೃಶ್ಯ ನನಗೆ ಗ್ರೀಸ್‌ನಲ್ಲೂ ಕಾಣಿsಸಿತು. ಜೋಹಾನ್ಸ್‌ಬರ್ಗ್‌ನಲ್ಲೂ ಕಾಣಿಸಿತು. ವಿಜ್ಞಾನ ನಂಬುವವರು, ಭವಿಷ್ಯ ನೋಡುವವರು ಎಲ್ಲರೂ ವಿಶ್ವಾಸದಿಂದ ನೆರೆದಿದ್ದೀರಿ ಬೆಳ್ಳಂಬೆಳಗ್ಗೆ ಬೆಳಗ್ಗೆ ನೀವೆಲ್ಲ ಇಲ್ಲಿಗೆ ಬಂದಿದೀರಿ. ಇವತ್ತು ಇಷ್ಟೊಂದು ಜನ ಬಂದಿದೀರಿ, ವಿಜ್ಞಾನಿಗಳ ಸಾಧನೆ ಎಲ್ಲರ ಹೆಮ್ಮೆ ಹೆಚ್ಚಿಸಿದೆ.

ಚಂದ್ರಯಾನದ ವೇಳೆ ನಾನು‌ ದೂರದ ವಿದೇಶದಲ್ಲಿದ್ದೆ. ನಮ್ಮ ವಿಜ್ಞಾನಿಗಳ ಸಾಧನೆ ನೋಡಿ ನನಗೂ ಅಲ್ಲಿದ್ದಾಗ ನನ್ನನ್ನು ನಾನು‌ ನಿಯಂತ್ರಣ ಮಾಡಿಕೊಳ್ಳಲಾಗಲಿಲ್ಲ. ನಾನು ಭಾರತಕ್ಕೆ ಮರಳಿದಾಗ ಮೊದಲು ಬೆಂಗಳೂರಿಗೆ ಹೋಗಬೇಕು ಅಂತ ನಿರ್ಧರಿಸಿದೆ. ಎಲ್ಲರಿಗಿಂತ ಮೊದಲು ನಮ್ಮ ವಿಜ್ಞಾನಿಗಳಿಗೆ ನಮಸ್ಕರಿಸುತ್ತೇನೆ ಎಂದರು.

ಆದರಣೀಯ ಸಿಎಂ, ಡಿಸಿಎಂ, ರಾಜ್ಯಪಾಲರಲ್ಲಿ ಮನವಿ ಮಾಡಿಕೊಂಡಿದ್ದೇನೆ, ನಾನು ಬೆಳಗ್ಗೆ ಬರ್ತೇನೆ, ನೀವು ಬರುವ ಕಷ್ಟ ತಗೋಬೇಡಿ ಅಂತ ಕೇಳಿಕೊಂಡಿದ್ದೆ. ನಾನು ಬಂದು ವಿಜ್ಞಾನಿಗಳಿಗೆ ಅಭಿನಂದಿಸಿ ಹೊರಟು ಹೋಗ್ತೇನೆ. ನಾನೇ ಅವರಲ್ಲಿ ಸ್ವಾಗತಕ್ಕೆ ಬರದಂತೆ ವಿನಂತಿಸಿಕೊಂಡಿದ್ದೆ. ಸಿಎಂ, ಡಿಸಿಎಂ ಅವರು ಪ್ರೋಟೋಕಾಲ್ ಪಾಲನೆ ಮಾಡಿದ್ದಾರೆ, ಇದಕ್ಕಾಗಿ ಅವರಿಗೆ ನಾನು ಆಭಾರಿ ಆಗಿದ್ದೇನೆ. ನಾನು ಈಗ ಇಲ್ಲಿ ಭಾಷಣ ಮಾಡುವುದಿಲ್ಲ. ವಿಜ್ಞಾನಿಗಳ ಬಳಿ ಹೋಗಲು ಕಾತುರನಾಗಿದ್ದೇನೆ. ನೀವೆಲ್ಲ ಬಂದಿದ್ದೀರಿ. ಮಕ್ಕಳೂ ಸಹ ಬಂದಿದ್ದಾರೆ, ಮಕ್ಕಳೇ ನಮ್ಮ ದೇಶದ ಭವಿಷ್ಯ ಎಂದು ಮೋದಿ ನುಡಿದರು.

Exit mobile version